Saturday, November 7, 2015

ಮಹಾಕ್ಷತ್ರಿಯ :ಈ ಭೂಮಿ ಬಣ್ಣದ ಬುಗುರಿ

ಚಿತ್ರ: ಮಹಾಕ್ಷತ್ರಿಯ 
ಸಂಗೀತ: ಹಂಸಲೇಖ 
ಸಾಹಿತ್ಯ: ಹಂಸಲೇಖ
ನಿರ್ದೇಶನ:ರಾಜೇಂದ್ರ ಸಿಂಗ್ ಬಾಬು 
ಗಾಯಕರು: ಎಸ್  ಪಿ  ಬಿ


ಓ .............  ಓಹೊ  .............  ಓಹೊ..... .......
ಓ ............. ಓಹೊ..........ಓಹೊ ....... .......
ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ
ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೆ ಓಟ ,ಕಾಲ ಕ್ಷಣಿಕ ಕಣೋ ,  ಓ ...  ಓ ...  ಓಹೊ ...

ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ


ಮರಿಬೇಡ ತಾಯಿಯ ಋಣವ, ಮರಿಬೇಡ ತಂದೆಯ ಒಲವ, ಹಡೆದವರೇ ದೈವ ಕಣೋ
ಸುಖವಾದ ಬಾಷೆಯ ಕಲಿಸೊ, ಸರಿಯಾದ ದಾರಿಗೆ ನೆಡೆಸೊ, ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೀವನ ಪಾಠ, ಕೊಡುತಾನೆ ಚಾಟಿಯ ಏಟ, ಕಾಲ ಕ್ಷಣಿಕ ಕಣೋ,  ಓ ... ಓ ... ಓಹೊ .......

ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ,
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ


 ಓ .............  ಓ .............  ಓ ....... .......
 ಓ .............  ಓ .............  ಓ ....... .......
 ಮರಿಬೇಡ ಮಗುವಿನ ನಗುವ, ಕಳಿಬೇಡ ನಗುವಿನ ಸುಖವ, ಭರವಸೆಯೇ ಮಗುವು ಕಣೇ
ಕಳಬೇಡ ಕೊಲ್ಲಲು ಬೇಡ, ನೀ ಹಾಡು ಶಾಂತಿಯ ಹಾಡ, ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೆ ಓಟ, ಕಾಲ ಕ್ಷಣಿಕ ಕಣೋ
ಓ ... ಓ ... ಓಹೊ.......  

ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ,
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ

No comments:

Post a Comment