Tuesday, November 10, 2015

ಗುಣನೋಡಿ ಹೆಣ್ಣು ಕೊಡು : ನೀ ಇರಲು ಜೊತೆಯಲ್ಲಿ

ಚಿತ್ರ: ಗುಣನೋಡಿ ಹೆಣ್ಣು ಕೊಡು 
ಸಂಗೀತ: ಎಂ ರಂಗರಾವ್ 
ಸಾಹಿತ್ಯ: ಅರ್ ಎನ್ ಜಯಗೋಪಾಲ್ 
ನಿರ್ದೇಶನ: ಎ ವಿ ಶೇಷಗಿರಿರಾವ್ 
ಗಾಯಕರು: ಎಸ್  ಪಿ  ಬಿ



ನೀ ಇರಲು ಜೊತೆಯಲ್ಲಿ ..... ಬಾಳೆಲ್ಲ ಹಸಿರಾದಂತೆ
ನೀ ಇರಲು ಜೊತೆಯಲ್ಲಿ ..... ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ ...... ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ..... ಬಾಳೆಲ್ಲ ಹಸಿರಾದಂತೆ


ಮಾತಲ್ಲಿ ಏನೋ ಹೊಸತನ , ಮಗುವನ್ನು ಹೋಲೋ ಹೂ ಮನ
ರಸ ಕಾವ್ಯ ನಿನ್ನ ಯೌವ್ವನ, ಎದೆ ತುಂಬಿ ನಿಂತೇ ಪ್ರತಿಕ್ಷಣ
ಹಳ್ಳಿ ಮಣ್ಣಲಿ ...... ಬಿರಿದ ಮಲ್ಲಿಗೆ .... ,
ಹಳ್ಳಿ ಮಣ್ಣಲಿ ...... ಬಿರಿದ ಮಲ್ಲಿಗೆ ....
ಬೆರೆತೆ ಉಸಿರಲ್ಲಿ ಒಂದಾದಂತೆ,  ಹಾ...... ಹಾ...... ಹಾ...... ಹಾ......


ನೀ ಇರಲು ಜೊತೆಯಲ್ಲಿ ..... ಬಾಳೆಲ್ಲ ಹಸಿರಾದಂತೆ


ಈ ನೀಲಿ ಕಣ್ಣ ಬೆಳಕಲಿ, ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ, ನಗುವೆಂಬ ಹೂವು ಅರಳಲಿ
ಅಗಲಿ ನಿನ್ನನು ... ಬಾಳಲಾರೆನು ....,
ಅಗಲಿ ನಿನ್ನನು ... ಬಾಳಲಾರೆನು ....
ಜೀವ ಒಡಲಿಂದ ದೂರಾದಂತೆ, ಹಾ...... ಹಾ...... ಹಾ...... ಹಾ......


ನೀ ಇರಲು ಜೊತೆಯಲ್ಲಿ ..... ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ ...... ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ..... ಬಾಳೆಲ್ಲ ಹಸಿರಾದಂತೆ
ಬಾಳೆಲ್ಲ ಹಸಿರಾದಂತೆ.......   ಬಾಳೆಲ್ಲ ಹಸಿರಾದಂತೆ.......


2 comments: