Friday, November 20, 2015

ಮೃಗಾಲಯ : ಆಲಯಾ ........ ಮೃಗಾಲಯ,

ಚಿತ್ರ: ಮೃಗಾಲಯ 
ಸಂಗೀತ: ರಾಜನ್ ನಾಗೇಂದ್ರ 
ಸಾಹಿತ್ಯ:ಚಿ ಉದಯಶಂಕರ್ 
ನಿರ್ದೇಶನ: ವಿ ಸೋಮಶೇಕರ್  
ಗಾಯಕರು: ಎಸ್ ಪಿ ಬಿ 



ಆಹಾ ಹಾ ಅ ಹಾಹಾ  ಲ ಲಾಲ ಲಾ ಲಲ     ಲಲಲಾ ಲಲಲಾ ಲಲಲಾ ಲಲಲಾ

ಆಲಯಾ ........ ಮೃಗಾಲಯ,
ಆಲಯಾ ........ ಮೃಗಾಲಯ,ಬಾನಾಡಿಗಳ ನಿಲಯ 
ಮನದಲ್ಲಿ ಆಶ್ಚರ್ಯ ತಾರುವಾ ,ಈ ಕಂಗಳಿಗೆ ಆನಂದ ತರುವಾ 
ನೂರಾರು ಜೀವಿಯಾ ...........  

ಆಲಯಾ ........ ಮೃಗಾಲಯ,ಬಾನಾಡಿಗಳ ನಿಲಯ  

ಆನೆ ಸಿಂಹ ಚಿರತೆಯಾ, ಒಂಟೆ ಹುಲಿ ಕರಡಿಯಾ 
ಆನೆ ಸಿಂಹ ಚಿರತೆಯಾ, ಒಂಟೆ ಹುಲಿ ಕರಡಿಯಾ
ಭಯವಿಲ್ಲದೆ ನೀ ನೋಡುವೆ, ಕಣ್ ಬಲೆಯಲೇ ಸೆರೆ ಹಾಕುವೆ 
ಮಂಗನಿಂದ ಮಾನವಾ, ಬಂದನೆಂಬ ಸತ್ಯವಾ
ಕಣ್ಣೆದುರಲೇ ನೀ ಕಾಣುವೆ, ಆ ಸೃಷ್ಟಿಗೆ ಕೈ ಮುಗಿಯುವೆ 
ಕಾಡಲ್ಲೇ ಇರುವಂತೆ ಪಡುವೆ ಭ್ರಮೆಯಾ,ಭ್ರಮೆಯಾ,ಭ್ರಮೆಯಾ

ಆಲಯಾ ........ ಮೃಗಾಲಯ,
ಆಲಯಾ ........ ಮೃಗಾಲಯ,ಬಾನಾಡಿಗಳ ನಿಲಯ


ಕುಣಿವಾ ನವಿಲಾ ನೋಡಲು, ಗಿಳಿಯಾ ನುಡಿಯಾ ಕೇಳಲು 
ಕುಣಿವಾ ನವಿಲಾ ನೋಡಲು, ಗಿಳಿಯಾ ನುಡಿಯಾ ಕೇಳಲು 
ಆ ಬ್ರಮ್ಮನಾ ಚಾತುರ್ಯಕೆ, ಬೆರಗಾಗುವೆ ಮರುಳಾಗುವೆ 
ಪಕ್ಷಿ ಪ್ರಾಣಿ ಆಗಲಿ, ವಿಷದಾ ಹಾವೇ ಆಗಲಿ 
ನಮ್ಮಂತೆಯೇ ಸಂತೋಷದಿ, ಬಾಳಿ ಬದುಕಲು ಭುವಿಗೆ ಬಂದಿವೆ 
ದಯೆಯಿಂದ ಕಂಡಾಗ ನಿಜವಾ ಅರಿವೇ ಗೆಳೆಯಾ ಗೆಳೆಯಾ  

ಆಲಯಾ ........ ಮೃಗಾಲಯ,
ಆಲಯಾ ........ ಮೃಗಾಲಯ,ಬಾನಾಡಿಗಳ ನಿಲಯ 
ಮನದಲ್ಲಿ ಆಶ್ಚರ್ಯ ತಾರುವಾ ,ಈ ಕಂಗಳಿಗೆ ಆನಂದ ತರುವಾ 
ನೂರಾರು ಜೀವಿಯಾ ...........  

ಅ..... ಅಹಾ......ಹಾ......ಲ......ಲಾಲಲಾ .......ಅ.......ಅಹಾ.......ಹಾ ಲ.......ಲಾಲಲ
 
 
 
 
 

No comments:

Post a Comment