Monday, July 10, 2017

ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು

ಗಂಡು: ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು
ಹೆಣ್ಣು: ನನ್ನ ತುಂಬ ನೀನೆ, ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು, ಮನಸು ಕೊಡುವುದೇನು
ಗಂಡು: ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು

ಹೆಣ್ಣು: ಒಲವನು ತೋರಿದೆ, ಕಣ್ಣಲ್ಲೆ ಬಾ ಎಂದು ಕರೆದೆ
ಮಾತು ನಂಬಿದೆ, ನಿನ್ನನ್ನು ಸೇರಿದೆ
ಬೇರೇನು ಕಾಣೇ ನಾನು ಪ್ರೀತಿ ಅಲ್ಲದೆ
ಗಂಡು: ಆ ಹಾ ಹ ಹಾ  
ಹೆಣ್ಣು: ಆ ಹಾ ಹ ಹಾ
ಗಂಡು:ಕಾಣದ ಅನುಭವ, ನಿನ್ನಿಂದ ನಾ ಹೊಂದಿ ಇಂದು
ಸಂತೋಷವಾಗಿದೆ ಸಂಕೋಚ ಓಡಿದೆ
ನಿನ್ನಾಸೆ ಹೇಳೋ ಕಾಲ ಕೂಡೀ ಬಂದಿದೆ
ನಿನ್ನಾಸೆ ಹೇಳೋ ಕಾಲ ಕೂಡೀ ಬಂದಿದೆ
ಗಂಡು: ಆ ಹಾ ಹ ಹಾ  
ಹೆಣ್ಣು: ಆ ಹಾ ಹ ಹಾ
 ಹೆಣ್ಣು: ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಗಂಡು: ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು

ಗಂಡು: ನಾಚಿಕೆ ಎನ್ನುತ, ನಿನ್ನಾಸೆ ಎಲ್ಲವ ನುಡಿದೆ
ನನ್ನೆದೆಯ ವೀಣೆಯ, ಹಿತವಾಗಿ ಮೀಟಿದೆ
ಹೊಸ ರಾಗ ತಾನ ಪಲ್ಲವಿ ಇಂದು ನುಡಿಸಿದೆ
ಹೆಣ್ಣು: ಆ ಹಾ ಹ ಹಾ  
ಗಂಡು:  ಆ ಹಾ ಹ ಹಾ
ಹೆಣ್ಣು: ಏನನು ಅರಿಯದ, ಹೆಣ್ಣಲ್ಲಿ ನಿನ್ನಾಸೆ ತಂದೆ
ನನ್ನುಸಿರ ರಾಗಕೆ, ನನ್ನೆದೆಯ ತಾಳಕೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ

ಗಂಡು:  ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಹೆಣ್ಣು: ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು
ಗಂಡು: ನನ್ನ ತುಂಬ ನೀನೆ, ತುಂಬಿ ಕೊಂಡ ಮೇಲೆ
ಹೆಣ್ಣು: ಇನ್ನು ನನ್ನದೇನು, ಮನಸು ಕೊಡುವುದೇನು

ಇಬ್ಬರು: ಲ ಲ ಲಾ  ಲ ಲ ಲಾ ಲಾ ಲಾ ಲಾ ಲಾ 
ಲ ಲ ಲಾ  ಲ ಲ ಲಾ ಲಾ ಲಾ ಲಾ ಲಾ


Saturday, June 24, 2017

ಬಂದೆಯಾ ಬಾಳಿನ ಬೆಳಕಾಗಿ

ಗಂಡು : ಬಂದೆಯಾ ಬಾಳಿನ ಬೆಳಕಾಗಿ ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,ನನಗಾಗಿ ನನ್ನ ಜೊತೆಯಾಗಿ

ಹೆಣ್ಣು : ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ...
ಬಂದೆಯಾ ಬಾಳಿನ ಬೆಳಕಾಗಿ ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,ನನಗಾಗಿ ನನ್ನ ಜೊತೆಯಾಗಿ

ಗಂಡು : ತಾವರೆ ಮೊಗ್ಗೊಂದು ಸೂರ್ಯನ ಕಂಡಾಗ
ಅರಳೀ ನಗುವ ಹಾಗೆ,
ಈ ಮೊಗವೇಕೋ ಕಾಣೆ,ಹೂವಾಯಿತೀಗ

ಹೆಣ್ಣು : ಕತ್ತಲು ಎಲ್ಲೆಲ್ಲೂ ಮುತ್ತಲು ಭಯದಲ್ಲಿ
ಹೂವೂ ಬಾಡುತಿರಲು
ಈ ನಿನ್ನ ಕಣ್ಣ ಕಾಂತಿಹೊಸ ಜೀವ ತಂದಿತು

ಗಂಡು : ಜಾಣೆ ನುಡಿಗಳೋ ವೀಣೆಸ್ವರಗಳೋ
ಕಾಣೆನು ಪ್ರೇಯಸಿ ನಾನು,ಕಾಣೆನು ಪ್ರೇಯಸಿ ನಾನು

ಹೆಣ್ಣು : ಬಂದೆಯಾ ಬಾಳಿನ ಬೆಳಕಾಗಿ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,ನನಗಾಗಿ ನನ್ನ ಜೊತೆಯಾಗಿ
ಗಂಡು : ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ...
ಗಂಡು : ಬಂದೆಯಾ ಬಾಳಿನ ಬೆಳಕಾಗಿ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,ನನಗಾಗಿ ನನ್ನ ಜೊತೆಯಾಗಿ

ಹೆಣ್ಣು : ಆಸರೆ ಏನೊಂದು ಕಾಣದೆ ನಾ ನೊಂದು
ಅಂದು ಓಡಿ ಬಂದೆ
ದೇವರ ಹಾಗೆ ನಿನ್ನ ನಾನಲ್ಲಿ ಕಂಡೆ
ಗಂಡು : ಹೇಳುವರಾರಿಲ್ಲ ಕೇಳುವರಾರಿಲ್ಲ
ಒಂಟೀ ಬಾಳಿನಲ್ಲಿ
ದೇವತೆಯಂತೆ ನೀನು ನನ್ನಲ್ಲಿ ಬಂದೆ
ಹೆಣ್ಣು : ಹೃದಯ ಅರಳಿತು ಮನಸು ಕುಣಿಯಿತು
ಈ ಸವಿ ಮಾತನು ಕೇಳಿ,ಈ ಸವಿ ಮಾತನು ಕೇಳಿ....

ಗಂಡು : ಬಂದೆಯಾ ಬಾಳಿನ ಬೆಳಕಾಗಿ 
ಹೆಣ್ಣು : ಬಂದೆಯಾ ಪ್ರೇಮದ ಸಿರಿಯಾಗಿ
ಗಂಡು : ನನಗಾಗಿ ನನ್ನ ಜೊತೆಯಾಗಿ 
ಹೆಣ್ಣು : ನನಗಾಗಿ ನನ್ನ ಜೊತೆಯಾಗಿ

ಇಬ್ಬರು : ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ...
ಬಂದೆಯಾ ಬಾಳಿನ ಬೆಳಕಾಗಿ ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ಲಲಲಾ ಲಲಲಲಲಾ,ಲಲಲಾ, ಆ ಆ ಆ ಆ 

Thursday, June 22, 2017

ಆಟವೇನು ನೋಟವೇನು

ಗಂಡು : ಆ.....ಹಾಹಾ ........ ಹಾಹಾಹಾ ,
ಹೆಣ್ಣು : ಆ.....ಹಾಹಾ ........ ಹಾಹಾಹಾ ,

ಗಂಡು : ಆಟವೇನು ನೋಟವೇನು, ನನಗೆ ಹೇಳಿದ ಮಾತೇನು
ಮನದಲೇನಿದೆ,ಅದನು ಹೇಳದೆ,ಏತಕೇ ಕಾಡಿದೆ
ಹೆಣ್ಣು : ನನ್ನ ಆಸೆ ಕಣ್ಣ ಭಾಷೆ,ತಿಳಿಯಲಾರದ ಒಗಟೇನು
ಏಕೆ ಸುಮ್ಮನೆ ಸುಳ್ಳು ಹೇಳುವೆ,ನಿನ್ನ ನಾ ಬಲ್ಲೆನು

ಗಂಡು : ಮೆರೆದಾಡಿದೆ ರೋಷದಿ ಅಂದು,ಮನಸಾಯಿತೆ ನನ್ನಲಿ ಇಂದು
ಮೆರೆದಾಡಿದೆ ರೋಷದಿ ಅಂದು,ಮನಸಾಯಿತೆ ನನ್ನಲಿ ಇಂದು
ಏತಕೆ ಈ ಬಗೆ, ಏತಕೆ ಈ ಬಗೆ
ಹೆಣ್ಣು : ನಿನ್ನ ರೀತಿ ತಿಳಿದೆನೀಗ ,ನಿನ್ನ ಪ್ರೀತಿ ಅರಿತೆನೀಗ 
ನನ್ನನು,ಮನ್ನಿಸು,ನಲ್ಲನೆ ಪ್ರೀತಿಸು

ಗಂಡು : ಆ ....... ಹಾಹಾಹಾಹ 
ಹೆಣ್ಣು : ಲ ಲ ಲಾ ಲಾ ಲ 
ಗಂಡು : ಲ ಲ ಲಾ ಲಾಲ 
ಹೆಣ್ಣು :  ಲ ಲ ಲಾ ಲಾ ಲ 
ಗಂಡು : ಆಟವೇನು ನೋಟವೇನು,ನನಗೆ ಹೇಳಿದ ಮಾತೇನು
ಹೆಣ್ಣು : ಏಕೆ ಸುಮ್ಮನೆ ಸುಳ್ಳು ಹೇಳುವೆ,ನಿನ್ನ ನಾ ಬಲ್ಲೆನು

ಹೆಣ್ಣು : ನೀನಿಲ್ಲದ ಸಿರಿಯನು ತೊರೆವೆ,ನಿನ್ನ ನೆರಳಲಿ ನೆಮ್ಮದಿ ಪಡೆವೆ
ನೀನಿಲ್ಲದ ಸಿರಿಯನು ತೊರೆವೆ,ನಿನ್ನ ನೆರಳಲಿ ನೆಮ್ಮದಿ ಪಡೆವೆ
ಸಂತಸ ಹೊಂದುವೆ, ಸಂತಸ ಹೊಂದುವೆ
ಗಂಡು : ಸವಿಯಾದ ಮಾತನಾಡಿ,ಒಲವಿಂದ ನನ್ನ ಕೂಡಿ
ಮನವನು ಸೇರಿದೆ ಹಿತವನು ನೀಡಿದೆ

ಗಂಡು : ಆಟವೇನು ನೋಟವೇನು,ನನಗೆ ಹೇಳಿದ ಮಾತೇನು
ಹೆಣ್ಣು : ಏಕೆ ಸುಮ್ಮನೆ ಸುಳ್ಳು ಹೇಳುವೆ,ನಿನ್ನ ನಾ ಬಲ್ಲೆನು
ಇಬ್ಬರು : ಆ.....ಹಾಹಾ ........ ಹಾಹಾಹಾ ,ಆ.....ಹಾಹಾ ........ ಹಾಹಾಹಾ ,

Wednesday, June 21, 2017

ಬಣ್ಣ...ನನ್ನ ಒಲವಿನ ಬಣ್ಣ

ಹೆಣ್ಣು : ಬಣ್ಣ,.......  ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ, ನನ್ನ ಬದುಕಿನ ಬಣ್ಣ 
ನೀ ನಕ್ಕರೆ ಹಸಿರು, ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣ.. ಬಣ್ಣ.. ಬಣ್ಣ..ಬಣ್ಣ..

ಗಂಡು : ಬಣ್ಣ,.......  ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ, ನನ್ನ ಬದುಕಿನ ಬಣ್ಣ 
ನೀ ನಕ್ಕರೆ ಹಸಿರು, ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣ.. ಬಣ್ಣ.. ಬಣ್ಣ..ಬಣ್ಣ..

ಗಂಡು : ಈ ನೀಲಿ ಮೋಹಕ ಕಣ್ಣ ಚೆಲುವಲ್ಲಿ ಬಾನಿನ ಬಣ್ಣ
ರಂಗಾದ ಕೆನ್ನೆ ತುಂಬಾ ಆ ಸಂಜೆ ಓಕುಳಿ ಬಣ್ಣ
ಹೆಣ್ಣು : ನೀ ತಂದೆ ಬಾಳಲ್ಲಿ ಇಂದು ನೂರೊಂದು ಕನಸಿನ ಬಣ್ಣ
ಮನಸೆಂಬ ತೋಟದಲ್ಲಿ ಹೊಸ ಪ್ರೇಮ ಹೂವಿನ ಬಣ್ಣ
ಗಂಡು : ಬಾನಿನಿಂದ ಜಾರಿ ಬಂದ ಕಾಮನಬಿಲ್ಲು
ಒಲವೆಂಬ ರಂಗವಲ್ಲಿ ಹಾಕಿದೆ ಇಂದು
ಹೆಣ್ಣು : ನಿನ್ನ ತುಂಟ ನೋಟದಲ್ಲಿ ಮಿಂಚಿನ ಬಣ್ಣ
ಏನೋ ಮೋಡಿ ಮಾಡಿ ಇಂದು ಕಾಡಿದೆ ಎನ್ನ
ಹೆಣ್ಣು : ಬಣ್ಣ.. ಬಣ್ಣ.. ಬಣ್ಣ..

ಗಂಡು : ಬಣ್ಣ,.......  ನನ್ನ ಒಲವಿನ ಬಣ್ಣ
ಹೆಣ್ಣು : ನನ್ನ ಬದುಕಿನ ಬಣ್ಣ, ನನ್ನ ಬದುಕಿನ ಬಣ್ಣ 


ಗಂಡು : ಕರಿ ಮೋಡಕಿಂತ ಸೊಗಸು ಮುಂಗುರುಳ ಮೋಹಕ ಬಣ್ಣ
ಬಿಳಿ ದಂತಕಿಂತ ಚೆಲುವು ನಿನ್ನೊಡಲ ಕಾಂತಿಯ ಬಣ್ಣ
ಹೆಣ್ಣು : ನೊರೆ ಹಾಲಿಗಿಂತ ಬಿಳುಪು ಈ ನಿನ್ನ ಮನಸಿನ ಬಣ್ಣ
ಮುಂಜಾನೆ ಮಂಜಿನ ಹಾಗೆ ತಂಪಾದ ಮಾತಿನ ಬಣ್ಣ
ಗಂಡು : ನೀಲಿ ಕಡಲಂತೆ ನಿನ್ನ ಪ್ರೀತಿ ಆಳವು
ಮುತ್ತು ರತ್ನ ಪಚ್ಚೆಯಂತೆ ನಿನ್ನ ಸ್ನೇಹವು
ಹೆಣ್ಣು : ಚೈತ್ರ ತಂದ ಚಿಗುರಿನಂತೆ ನಿನ್ನ ಪ್ರೇಮವು
ಕಾಲದಲ್ಲಿ ಮಾಸದಂತೆ ದಟ್ಟಿ ಬಣ್ಣವು
ಗಂಡು : ಬಣ್ಣ.. ಬಣ್ಣ.. ಬಣ್ಣ..

ಗಂಡು : ಬಣ್ಣ,.......  ನನ್ನ ಒಲವಿನ ಬಣ್ಣ
ಹೆಣ್ಣು : ನನ್ನ ಬದುಕಿನ ಬಣ್ಣ, ನನ್ನ ಬದುಕಿನ ಬಣ್ಣ


ಬೆಳ್ಳಿ ಮೋಡದ ಅಂಚಿನಿಂದ

ಹೆಣ್ಣು : ಬೆಳ್ಳಿ ಮೋಡದ ಅಂಚಿನಿಂದ, ಮೂಡಿಬಂದ ಆಶಾಕಿರಣ
ಗಂಡು : ಬೆಳ್ಳಿ ಮೋಡದ ಆಚೆಯಿಂದ, ಓಡಿಬಂದ ಮಿನುಗುತಾರೆ
ಹೆಣ್ಣು : ಬೆಳ್ಳಿ ಮೋಡದ ಅಂಚಿನಿಂದ, ಮೂಡಿಬಂದ ಆಶಾಕಿರಣ
ಗಂಡು : ಬೆಳ್ಳಿ ಮೋಡದ ಆಚೆಯಿಂದ, ಓಡಿಬಂದ ಮಿನುಗುತಾರೆ

ಗಂಡು : ವಿಕಸಿತ ಸುಮವೋ, ವನದೇವತೆಯೋ, ಮನಮಂದಿರದ ಅದಿದೇವತೆಯೋ
ವಿಕಸಿತ ಸುಮವೋ, ವನದೇವತೆಯೋ,ಮನಮಂದಿರದ ಅದಿದೇವತೆಯೋ
ಹೆಣ್ಣು : ದೇವರು ನೀವು ದಾಸಿಯು ನಾನು
ದೇವರು ನೀವು ದಾಸಿಯು ನಾನು, ತನುಮನ ನಿಮದೆ ಇನ್ನೇನು

ಗಂಡು : ಬೆಳ್ಳಿ ಮೋಡದ ಆಚೆಯಿಂದ,ಓಡಿಬಂದ ಮಿನುಗುತಾರೆ

ಗಂಡು : ಅಂತರಂಗ ಭಾವತರಂಗ, ಕಲಕಲ ಹರಿವ ಪ್ರೇಮದ ಗಂಗ
ಅಂತರಂಗ ಭಾವತರಂಗ, ಕಲಕಲ ಹರಿವ ಪ್ರೇಮದ ಗಂಗ
ಹೆಣ್ಣು : ಪ್ರೇಮದ ಗಂಗ ಜಲದಲಿ ಮಿಂದು
ಪ್ರೇಮದ ಗಂಗ ಜಲದಲಿ ಮಿಂದು, ಪಾವನಳಾದೆ ನಾನಿಂದು

ಗಂಡು : ಬೆಳ್ಳಿ ಮೋಡದ ಆಚೆಯಿಂದ, ಓಡಿಬಂದ ಮಿನುಗುತಾರೆ

ಹೆಣ್ಣು : ಪ್ರಣಯದ ಕಾವ್ಯ ರಚಿಸಿದೆ ನೀನು, ಪುಟಪುಟವೆಲ್ಲ ತುಂಬಿದೆ ಜೇನು
ಪ್ರಣಯದ ಕಾವ್ಯ ರಚಿಸಿದೆ ನೀನು, ಪುಟಪುಟವೆಲ್ಲ ತುಂಬಿದೆ ಜೇನು
ಗಂಡು : ಜೇನಿನ ದಾರೆ ಸವಿಯುವ ಬಾರೆ
ಜೇನಿನ ದಾರೆ ಸವಿಯುವ ಬಾರೆ, ನೀನೇ ನನ್ನ ಮಿನುಗುತಾರೆ

ಹೆಣ್ಣು : ಬೆಳ್ಳಿ ಮೋಡದ ಅಂಚಿನಿಂದ, ಮೂಡಿಬಂದ ಆಶಾಕಿರಣ
ಗಂಡು: ಬೆಳ್ಳಿ ಮೋಡದ ಅಂಚಿನಿಂದ, ಮೂಡಿಬಂದ ಆಶಾಕಿರಣ

ಲೋಕವೇ ಹೇಳಿದ ಮಾತಿದು

ಗಂಡು : ಲೋಕವೇ ಹೇಳಿದ ಮಾತಿದು ವೇದದ ಸಾರವೇ ಕೇಳಿದು
ಲೋಕವೇ ಹೇಳಿದ ಮಾತಿದು, ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು, ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು... ಮಾಡಿದರೆ, ಜಗಕೆ ಹೆದರಬಾರದು

ಹೆಣ್ಣು : ಲೋಕವೇ ಹೇಳಿದ ಮಾತಿದು ವೇದದ ಸಾರವೇ ಕೇಳಿದು
ಲೋಕವೇ ಹೇಳಿದ ಮಾತಿದು, ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು, ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು... ಮಾಡಿದರೆ, ಜಗಕೆ ಹೆದರಬಾರದು


ಗಂಡು :ಅನಾರ್ಕಲಿ.....ಅನಾರ್ಕಲಿ


ಹೆಣ್ಣು : ಮರಳುಗಾಡೆ ಇರಲಿ ಭೂಮಿಗೆ ಸೂರ್ಯನಿಳಿದು ಬರಲಿ
ಪ್ರೀತಿಸೋ ಜೀವಗಳು ಬಾಡಲಾರದಂಥ ಹೂವುಗಳು
ಗಂಡು : ರಾಜಕೀಯವಿರಲಿ ಶಕುನಿಗಳ ನೂರು ತಂತ್ರವಿರಲಿ
ಪ್ರೇಮದ ರಾಜ್ಯದಲ್ಲಿ ಸಾವಿಗೆಂದು ಭಯ ಕಾಣದಿಲ್ಲಿ
ಹೆಣ್ಣು :ಲೋಕವ ಕಾಡುವ ಕೋಟಿ ರಾಕ್ಷಸರಿದ್ದರು ಭೂಮಿ ಕೇಳಲಿಲ್ಲ
ಬಾಯ್ ತೆರೆಯಲಿಲ್ಲ ಮಾತಾಡಲಿಲ್ಲ
ಗಂಡು : ಪ್ರೇಮಿಗಳಿಬ್ಬರು ಇಲ್ಲಿ ಪ್ರೀತಿಸಿ ಬಾಳೋದು ನೀವು ಸಹಿಸಲಿಲ್ಲ
ಬಾಯ್ ಬಿಟ್ಟಿರಲ್ಲ ಹೂಳಿಟ್ಟಿರಲ್ಲ


ಗಂಡು : ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು
ಹೆಣ್ಣು : ಪ್ರೀತಿ ಮಾಡಬಾರದು ಮಾಡಿದರೆ ಗೋರಿ ಕಟ್ಟಬಾರದು


ಹೆಣ್ಣು : ಓ ರೋಮಿಯೋ......ಓ ರೋಮಿಯೋ


ಗಂಡು : ದ್ವೇಷವೆಂಬ ವಿಷವ ಸೇವಿಸುತ ಖಡ್ಗ ಮಸೆಯುತಿರುವ
ಅಂಧರ ಕಣ್ಣಿಗೆ ಈ ಪ್ರೀತಿಯ ಸ್ವರೂಪ ಕಾಣಿಸದು
ಹೆಣ್ಣು :ಮನಸು ಕಣ್ಣು ತೆರೆದು ನೋಡಿದರೆ ಎಲ್ಲ ಶೂನ್ಯವಿಹುದು
ಪ್ರೀತಿಯ ನಂಬಿದರೆ ಅಂಧಕಾರದಲ್ಲೂ ಕಾಣುವುದು
ಗಂಡು :ರಾಜ್ಯಗಳಳಿದು ಕೋಟೆ ಕೊಟ್ಟಲು ಉರುಳಿದವು ಹೆಣ್ಣಿಗಾಗಿ
ಈ ಮಣ್ಣಿಗಾಗಿ ಈ ಹೊನ್ನಿಗಾಗಿ
ಹೆಣ್ಣು : ಜೀವದ ಆಸೆಯ ಬಿಟ್ಟು ವಿಷವ ಕುಡಿದರಿಲ್ಲಿ ಪ್ರೀತಿಗಾಗಿ
ಆನಂದವಾಗಿ ಆಶ್ಚರ್ಯವಾಗಿ


ಹೆಣ್ಣು : ಪ್ರೀತಿ ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು.....
ಗಂಡು : ಪ್ರೀತಿ ಮಾಡಬಾರದು ಮಾಡಿದರೆ ವಿಷವ ಕುಡಿಯಬಾರದು.....

ಗಂಡು : ಲೋಕವೇ ಹೇಳಿದ ಮಾತಿದು ವೇದದ ಸಾರವೇ ಕೇಳಿದು
ಲೋಕವೇ ಹೇಳಿದ ಮಾತಿದು, ವೇದದ ಸಾರವೇ ಕೇಳಿದು
ನಾಳಿನ ಚಿಂತೆಯಲ್ಲಿ ಬಾಳಬಾರದು, ಬಾಳಿನ ಮೂಲವೆಲ್ಲಿ ಕೇಳಬಾರದು
ಪ್ರೀತಿ ಮಾಡಬಾರದು... ಮಾಡಿದರೆ, ಜಗಕೆ ಹೆದರಬಾರದು
ಹೆಣ್ಣು : ಪ್ರೀತಿ ಮಾಡಬಾರದು... ಮಾಡಿದರೆ, ಜಗಕೆ ಹೆದರಬಾರದು

ಭೂಮಿ ತಾಯಾಣೆ ನೀ ಇಷ್ಟ ಕಣೆ

ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ-  2
ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ -2
ಏ ಚೂಟಿ…..ಏ ನಾಟಿ……

ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ - 2
ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ - 2
ನೀ ಚೂಟಿ……ನೀ ಘಾಟಿ……

ಗಂಡು : ಪೇಟೆ ಹೆಣ್ಣ,ಬಣ್ಣ ಕಂಡೆ,ಕೊಂಚ ದಂಗಾಗಿ ನಾ ದೂರ ನಿಂತೆ
ತುಂಟಿ ನೀನು,ಅಂಟಿಕೊಂಡೆ,ಪ್ರೀತಿ ನಂಟಾಗಿ ಸಲ್ಲಾಪ ತಂದೆ
ಹೆಣ್ಣು : ಕೊಂಕು ಮಾತು,ನನ್ನ ಸೋಕಿ,ಮೋಹ ಮಿಂಚಾಗಿ ಮೈಯೆಲ್ಲ ಬೆಂಕಿ
ಮೋಡಿ ಮಾಡಿ,ಕಾಡಿ ಬೇಡಿ,ಹೊಂದಿ ಈ ಸ್ನೇಹ ಹಣ್ಣಾಯ್ತು ಕೂಡಿ

ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಆಹಾ.. ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ

ಗಂಡು : ಕಣ್ಣ ನೋಟ,ಆಸೆ ತಂದೆ,ನಿನ್ನ ಸಹವಾಸ ಹಾಲ್ಜೇನಿನಂತೆ
ನನ್ನ ನೀನು,ನಿನ್ನ ನಾನು,ನಂಬಿ ಬೆರೆಯೋಣ ಹೂದುಂಬಿಯಂತೆ
ಹೆಣ್ಣು : ನೆನ್ನೆ ನಾಳೆ,ಎಲ್ಲಾ ಮೀರಿ,ರಂಗು ರಂಗಾಗಿ ಬೆರೆಯೋಣ ಸೇರಿ
ಎಲ್ಲಿ ನೀನೋ,ಅಲ್ಲಿ ನಾನೂ,ಎಂದೂ ಒಂದಾಗಿ ಸಾಗೋಣ ದಾರಿ

ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಹಹ..ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಹೇ ಚೂಟಿ…..
ಗಂಡು : ನೀ ಘಾಟಿ…
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಹಹ..ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಹೇ ಚೂಟಿ…..
ಗಂಡು : ನೀ ಘಾಟಿ…

Tuesday, June 20, 2017

ಬೆಳ್ಳಿ ಮೋಡವೆ ಎಲ್ಲಿ ಓಡುವೆ

ಹೆಣ್ಣು: ಬೆಳ್ಳಿ ಮೋಡವೆ,ಎಲ್ಲಿ ಓಡುವೆ,ನನ್ನ ಬಳಿಗೆ ನಲಿದು ಬಾ
ನನ್ನ ನಲ್ಲನ,ಕಂಡು ಈ ಕ್ಷಣ,ನನ್ನ ಒಲವ ತಿಳಿಸಿ ಬಾ

ಗಂಡು: ಬೆಳ್ಳಿ ಮೋಡವೆ, ಲ್ಲಿ ಓಡುವೆ, ನ್ನ ಬಳಿಗೆ ನಲಿದು ಬಾ
ನನ್ನ ನಲ್ಲೆಯ, ಡು ಈ ಕ್ಷಣ,ನನ್ನ ಒಲವ ತಿಳಿಸಿ ಬಾ

ಹೆಣ್ಣು: ತಂಗಾಳಿ ಮೈ ಸೋಕಿ ನಡುಗುತಲಿರುವೆ,ಸಂಗಾತಿ ಎಲ್ಲೆಂದು ಹುಡುಕುತಲಿರುವೆ
ತಂಗಾಳಿ ಮೈ ಸೋಕಿ ನಡುಗುತಲಿರುವೆ,ಸಂಗಾತಿ ಎಲ್ಲೆಂದು ಹುಡುಕುತಲಿರುವೆ
ಗಂಡು: ಮೋಹದ ಮೋಡಿಗೆ ಸಿಲುಕಿರುವೆ,ತೀರದ ದಾಹದಿ ಬಳಲಿರುವೆ
ಹೆಣ್ಣು: ಒ ಇನಿಯಾ,ಬಾ ಸನಿಹ,ಎಂದೆನ್ನ ಮನ ನೊಂದು ಕೂಗಾಡಿದೆ

ಗಂಡು: ಬೆಳ್ಳಿ ಮೋಡವೆ,ಎಲ್ಲಿ ಓಡುವೆ,ನನ್ನ ಬಳಿಗೆ ನಲಿದು ಬಾ
ಹೆಣ್ಣು: ನನ್ನ ನಲ್ಲನ ಕಂಡು ಈ ಕ್ಷಣ ನನ್ನ ಒಲವ ತಿಳಿಸಿ ಬಾ

ಗಂಡು : ದಿನವೊಂದು ಯುಗವಾಗಿ ಉರುಳುತಲಿರಲು,ಬಾಳೆಲ್ಲ ಬರಡಾಗಿ ಕಲೆಯುತಲಿರಲು
ದಿನವೊಂದು ಯುಗವಾಗಿ ಉರುಳುತಲಿರಲು,ಬಾಳೆಲ್ಲ ಬರಡಾಗಿ ಕಲೆಯುತಲಿರಲು
ಹೆಣ್ಣು: ಜೀವನ ನೀರಸ ಎನಿಸಿರಲು,ಬೆಸರ ತುಂಬುತ ದಣಿದಿರಲು
ಗಂಡು: ನೀ ಬರಲು,ಈ ಇರುಳು,ಆನಂದ ನಮಗೆಂದು ಮನ ಹೇಳಿದೆ

ಹೆಣ್ಣು: ಬೆಳ್ಳಿ ಮೋಡವೆ,ಎಲ್ಲಿ ಓಡುವೆ,ನನ್ನ ಬಳಿಗೆ ನಲಿದು ಬಾ
ಗಂಡು: ನನ್ನ ನಲ್ಲೆಯ,ಕಂಡು ಈ ಕ್ಷಣ,ನನ್ನ ಒಲವ ತಿಳಿಸಿ ಬಾ

ಹೆಣ್ಣು: ನಾ ಒಂಟಿ ನಿಂತಾಗ ಹೂಗಳು ಉದುರಿ,ನೋವಿಂದ ಬೆಂಡಾಗಿ ಹರಡಿದೆ ಚದುರಿ 
ಗಂಡು: ಬಾನಿನ ಚಂದಿರ ಅಳುತಿರುವ,ಮಂಜಿನ ಹಾಗೆಯೇ ಕರಾಗಿರುವಾ 
ಬಾ ಬಳಿಗೆ,ಈ ತೆರೆಗೆ,ಹೊಸ ಬಾಳು ನಮಗಾಗಿ ಕೈ ಚಾಚಿದೆ  

ಗಂಡು: ಬೆಳ್ಳಿ ಮೋಡವೆ,ಎಲ್ಲಿ ಓಡುವೆ
ಹೆಣ್ಣು: ನನ್ನ ಬಳಿಗೆ ನಲಿದು ಬಾ
ಗಂಡು: ನನ್ನ ನಲ್ಲೆಯ,ಕಂಡು ಈ ಕ್ಷಣ,
ಇಬ್ಬರು: ನನ್ನ ಒಲವ ತಿಳಿಸಿ ಬಾ

ಅವನಲ್ಲಿ, ಇವಳಿಲ್ಲಿ,

ಅವನಲ್ಲಿ, ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.
ಎದುರೆದುರು ಬಂದಾಗ,ಹೆದಹೆದರಿ ನಿಂತಾಗಾ,
ಅಲ್ಲೇ ಆರಂಭ ಪ್ರೇಮ.

ಅವನಲ್ಲಿ, ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.
ಎದುರೆದುರು ಬಂದಾಗ, ಹೆದಹೆದರಿ ನಿಂತಾಗಾ,
ಅಲ್ಲೇ ಆರಂಭ ಪ್ರೇಮ.

ಅವನಲ್ಲಿ ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.

ನೀನೆ ಎಲ್ಲಾ,
ನೀನಿರದೆ ಬಾಳೇ ಇಲ್ಲಾ,
ಅನ್ನುವುದು ಪ್ರೇಮಾ ಅಲ್ಲ.
ಮರಗಳನು ಸುತ್ತೋದಲ್ಲಾ.
ಕವನಗಳ ಗೀಚೋದಲ್ಲಾ,
ನೆತ್ತರಲಿ ಬರಿಯೋದಲ್ಲಾ,
ವಿಷವನು ಕುಡಿಯೋದಲ್ಲ
ಮೌನವೇನೆ ಧ್ಯಾನವೇ ಪ್ರೇಮಾ …..

ಅವನಲ್ಲಿ, ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.

ನೋಡಿ ನೋಡಿ ಪ್ರೇಮವನು ಮಾಡೋದಲ್ಲ.
ಮಾಡುತಲಿ ಹಾಡೋದಲ್ಲಾ,
ಹಾಡಿನಲಿ ಹೇಳೋದಲ್ಲ.
ಹೇಳುವುದ ಕೇಳೋದಲ್ಲಾ,
ಕೇಳುತಲಿ ಕಲಿಯೋದಲ್ಲಾ,
ಕಲಿತು ನೀ ಮಾಡೋದಲ್ಲಾ,
ಮೌನವೇನೆ ಧ್ಯಾನವೇ ಪ್ರೇಮಾ …..

ಅವನಲ್ಲಿ ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.
ಎದುರೆದುರು ಬಂದಾಗ, ಹೆದಹೆದರಿ ನಿಂತಾಗಾ,
ಅಲ್ಲೇ ಆರಂಭ ಪ್ರೇಮ.

ಅವನಲ್ಲಿ ಇವಳಿಲ್ಲಿ,
ಮಾತಿಲ್ಲಾ, ಕಥೆಯಿಲ್ಲ.


ಪ್ರೇಮವಿದೆ,ಮನದೆ,

ಪ್ರೇಮವಿದೆ,ಮನದೆ,ನಗುತ ನಲಿವ ಹೂವಾಗಿ
ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ... 
ಪ್ರೇಮವಿದೆ,ಮನದೆ,ನಗುತ ನಲಿವ ಹೂವಾಗಿ
ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ... 


ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ...
ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ...
ದಿನದಿನವ..ಎಣಿಸಿ.. ಮನದಿ ಗುಣಿಸಿ.. ಬಿಡುವ ಬಯಸಿ...
ಸೋಲು ಈ ದಿನ.. ಗೆಲುವು ಈ ದಿನ... ಎಂಥ ಬಂಧನ... 


ಪ್ರೇಮವಿದೆ,ಮನದೆ,ನಗುತ ನಲಿವ ಹೂವಾಗಿ
ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ... 


ಹೊಂಗನಸ ಕಂಡೆ... ನನಗಾಗಿ ನೀನು..
ಹೊಂಗನಸ ಕಂಡೆ... ನನಗಾಗಿ ನೀನು..
ಬಗೆಬಗೆಯ ಆಸೆ.. ಮನದೆ ಇರಿಸಿ.. ನೆನಪ ಉಳಿಸಿ..
ದೂರ ಸಾಗದೆ... ದಾಹ ತೀರದೆ.. ತೀರ ಸೇರುವೆ.. 


ಪ್ರೇಮವಿದೆ,ಮನದೆ,ನಗುತ ನಲಿವ ಹೂವಾಗಿ
ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ... 

ಸರಿಯಾಗಿ ನೆನಪಿದೆ ನನಗೆ


ಸರಿಯಾಗಿ ನೆನಪಿದೆ ನನಗೆ, ಇದಕೆಲ್ಲ ಕಾರಣ ಕಿರುನಗೆ
ಮನದಾ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆ
ಕನಸಿನ ಕುಲುಮೆಗೆ ಉಸಿರನು ಊದುತ
ಕಿಡಿ ಹಾರುವುದು ಇನ್ನು ಖಚಿತ ಖಚಿತ
ಸರಿಯಾಗಿ ನೆನಪಿದೆ ನನಗೆ, ಇದಕೆಲ್ಲ ಕಾರಣ ಕಿರುನಗೆ

ಕಣ್ಣಲೇ ಇದೆ,ಎಲ್ಲ ಕಾಗದ,ನೀನೆ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ,ನೀನೆ ಜ್ಞಾಪಕ,ನೀನೆ ಔಷದಿ,ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೇ ಅನ್ಯಾಯ
ನನ್ನಯಾ,ನಡೆ ನುಡಿ,ನಿನ್ನನೇ ಬಯಸುತ
ಬದಲಾಗುವುದು ಇನ್ನು ಖಚಿತ

ಸರಿಯಾಗಿ ನೆನಪಿದೆ ನನಗೆ, ಇದಕೆಲ್ಲ ಕಾರಣ ಕಿರುನಗೆ

ನಿನ್ನ ನೃತ್ಯಕೆ,ಸಿದ್ಧವಾಗಿದೆ,ಅಂತರಂಗದ,ರಂಗಸಜ್ಜಿಕೆ
ನಿನ್ನ ನೋಡದಾ ,ನನ್ನ ಜೀವನ,ಸುದ್ದಿಯಿಲ್ಲದ,ಸುದ್ಧಿಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೆ ಕಾನೂನು
ಕೊರೆಯುವಾ ನೆನಪಲಿ ಇರುಳನು ಕಳೆಯುತ
ಬೆಳಗಾಗುವುದು ಇನ್ನು ಖಚಿತ

ಸರಿಯಾಗಿ ನೆನಪಿದೆ ನನಗೆ, ಇದಕೆಲ್ಲ ಕಾರಣ ಕಿರುನಗೆ

Sunday, June 18, 2017

ಜಿನು ಜಿನುಗೋ ಜೇನ ಹನಿ

ಗಂ: ಜಿನು ಜಿನುಗೋ ಜೇನ ಹನಿ,ಮಿನು ಮಿನುಗೋ ತುಟಿಗೇ ಇಬ್ಬನಿ
ಹೆಂ: ಜಿನು ಜಿನುಗೋ ಜೇನ  ಹನಿ,ಮಿನು ಮಿನುಗೋ ತುಟಿಗೇ ಇಬ್ಬನಿ
ಗಂ:ಈ ನಯನದಲ್ಲಿ ಸಂಗಾತಿ ಸಂಪ್ರೀತಿ ನಲಿನಲಿ ನಲಿಯುತಿದೆ
ಹೆಂ:ಜಿನು ಜಿನುಗೋ ಜೇನ ಹನಿ,ಮಿನು ಮಿನುಗೋ ತುಟಿಗೇ ಇಬ್ಬನಿ ಈ ಈ ಈ ಈ

ಹೆಂ:ಒಮ್ಮೊಮ್ಮೆ ನಾನೇ ಕೇಳೋದು ನನ್ನೇ ,ನೀ ಸೂರ್ಯನ ಬಂದುವೇ
ಗಂ:ನಿನ್ನನ್ನು ಕಂಡೆ ನಾನಂದು ಕೊಂಡೆ ನೀ ಚಂದ್ರನಾ ತಂಗಿಯೇ
ಹೆಂ:ಆ ಮಿಂಚು ಕೊಂಚ ನಿಲ್ಲದು,ಬರಿ ಮಿಂಚಿ ಹೋಗುತಿಹುದು
ನಿನ್ನ ಕವುತು ಕೊಂಡು ನಸು ನಾಚಿಕೊಂಡು ಬರಿ ಮುಗಿಲಲಿ ಇಣುಕುತಿಹುದು

ಗಂ:ಜಿನು ಜಿನುಗೋ ಜೇನ ಹನಿ,ಮಿನು ಮಿನುಗೋ ತುಟಿಗೇ ಇಬ್ಬನಿ
ಹೆಂ:ಈ ನಯನದಲ್ಲಿ ಸಂಗಾತಿ ಸಂಪ್ರೀತಿ ನಲಿನಲಿ ನಲಿಯುತಿದೆ

ಗಂ:ನೀ ನಕ್ಕ ಮೂಡಿ ಆ ಚುಕ್ಕಿ ಓಡಿ  ಬಾನಿಂದಲೇ ಜಾರಿದೆ
ಹೆಂ:ಆ ಬೆಳ್ಳಿಮೋಡ ಬೆಳ್ಳಕ್ಕಿ ಕೂಡ ನಿನ್ನ ನೋಡುತ ನಿಂತಿದೆ
ಗಂ:ಆ ಚೈತ್ರ ಚಿತ್ರ ಬರೆದು ಆ ಚಿತ್ರ ಜೀವ ತಳೆದು
ಎದೆ ಭೂಮಿಯಲ್ಲಿ ಹಸಿರನ್ನು ಚೆಲ್ಲಿ ಹರುಷವ ಹರಡಿಹುದು

ಹೆಂ:ಜಿನು ಜಿನುಗೋ ಜೇನ ಹನಿ,ಮಿನು ಮಿನುಗೋ ತುಟಿಗೇ ಇಬ್ಬನಿ ಈ ಈ ಈ
ಗಂ:ಈ ನಯನದಲ್ಲಿ ಸಂಗಾತಿ ಸಂಪ್ರೀತಿ ನಲಿನಲಿ ನಲಿಯುತಿದೆ

M :ಆಕಾಶದಾಗೆ ಯಾರೋ ಮಾಯಗಾರನು 
     ಚಿತ್ತಾರ ಮಾಡಿ ಹೋಗೋನೇ  ....... 
     ಈ ಭೂಮಿ ಮ್ಯಾಗೆ ಯಾರೋ ತೋಟಗಾರನು 
     ಮಲೆನಾಡ ಮಾಡಿ ಹೋಗೊನೆ 
     ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು 
     ಸಂಚಾರ ಮಾಡುವ ಬಾರಾ ಆ ಆ ಆ  ಆ ಆ 


F : ಆಕಾಶದಾಗೆ ಯಾರೋ ಮಾಯಗಾರನು 

     ಚಿತ್ತಾರ ಮಾಡಿ ಹೋಗೋನೇ  ....... 
     ಈ ಭೂಮಿ ಮ್ಯಾಗೆ ಯಾರೋ ತೋಟಗಾರನು 
     ಮಲೆನಾಡ ಮಾಡಿ ಹೋಗೊನೆ 


F : ಸುದ್ದಿ ಇಲ್ಲದೇ  ಮೂಡ ಶುದ್ದಿಯಾಗೋದು 

     ಸದ್ದೇ ಇಲ್ಲದೆ ಗಂಧ ಗಾಳಿಯಾಗೋದು 
     ತಂಟೆನೇ ಮಾಡದೆ ಹೊತ್ತಿಟ್ಟಿ ಹೋಗೋದು 
     ಏನೇನು ಮಾಡದೆ ನಾವ್ಯಾಕೆ ಬಾಳೋದು 


M : ಹಾರೋ ಹಕ್ಕಿನಾ ತಂದು ಕೂಡಿಹಾಕೋದು 

      ಕಟ್ಟೋ ಜೇನನ್ನಾ ಸುಟ್ಟು ತಿಂದು ಹಾಕೋದು 
      ನರಾ ಮನಷ್ಯಾ  ಕಲಿಯೋಲ್ಲ ಒಳ್ಳೇದು ಉಳಿಸೋಲ್ಲ 
      ಅವ  ನೆಡೆಯೋ ದಾರೀಲಿ ಗರಿಕೇನೂ ಬೆಳೆಯೋಲ್ಲ 


F : ಚಿಲಿಪಿಲಿಗಳ ಸರಿಗಮ ಕಿವಿಯೊಳಗೆ ಎ ಎ ಎ ಎ ಎ 



M : ನೀರಲೆಗಳ ತಕಧಿಮಿ ಎದೆಯೊಳಗೆ ಎ ಎ ಎ ಎ 



M : ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು 

      ಸಂಚಾರ ಮಾಡುವ ಬಾರಾ ಆ ಆ ಆ  ಆ ಆ 


M : ಆಕಾಶದಾಗೆ ಯಾರೋ ಮಾಯಗಾರನು 

      ಚಿತ್ತಾರ ಮಾಡಿ ಹೋಗೋನೇ  ....... 
      ಈ ಭೂಮಿ ಮ್ಯಾಗೆ ಯಾರೋ ತೋಟಗಾರನು 
      ಮಲೆನಾಡ ಮಾಡಿ ಹೋಗೊನೆ


M : ಕಾಡು ಸುತ್ತುವ ಆಸೆ ರಾಣೀಗೇಕಮ್ಮ 

      ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮ 
      ಏಳೋದು ಬೀಳೋದು ಬಡವರ ಪಾಡಮ್ಮಾ 
      ನೀವ್ಯಾಕೆ ಹಾಡಿರಿ ಈ ಹಳ್ಳಿ ಹಾಡಮ್ಮಾ 
 F : ಇಲ್ಲಿ ಬೀಸುವ ಗಾಇ ಉರಲ್ಯಾಕಿಲ್ಲ 
      ಇಲ್ಲಿ ಸಿಕ್ಕುವಾ ಪಾಠ ಶ್ಯಾಲೆಲ್ಯಾಕಿಲ್ಲ
      ಬಂಗಾರ ಸಿಂಗಾರ ಸಾಕಾಗಿ ಹೋಯಿತು ,
      ಅರಮನೆ ಆನಂದ ಬೇಸತ್ತುಹೋಯಿತು 


M : ಕೆಳಗಿಳಿಸುವ ಮನಸಿನ ಭಾರಗಳ ಆ ಆ ಆ ಆ ಆ ಆ


F : ಜಿಗಿಜಿಗಿಯುವ ಚಿಂತೆಯ ಗುಡ್ಡಗಳ ಆ ಆ ಆ ಆ ಆ ಆ 


M / F : ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು 

           ಸಂಚಾರ ಮಾಡುವ ಬಾರಾ ಆ ಆ ಆ  ಆ ಆ 


F : ಆಕಾಶದಾಗೆ ಯಾರೋ ಮಾಯಗಾರನು 

      ಚಿತ್ತಾರ ಮಾಡಿ ಹೋಗೋನೇ  ....... 
M: ಈ ಭೂಮಿ ಮ್ಯಾಗೆ ಯಾರೋ ತೋಟಗಾರನು 
     ಮಲೆನಾಡ ಮಾಡಿ ಹೋಗೊನೆ


M / F : ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು 

           ಸಂಚಾರ ಮಾಡುವ ಬಾರಾ ಆ ಆ ಆ  ಆ ಆ