M :ಆಕಾಶದಾಗೆ ಯಾರೋ ಮಾಯಗಾರನು
ಚಿತ್ತಾರ ಮಾಡಿ ಹೋಗೋನೇ .......
ಈ ಭೂಮಿ ಮ್ಯಾಗೆ ಯಾರೋ ತೋಟಗಾರನು
ಮಲೆನಾಡ ಮಾಡಿ ಹೋಗೊನೆ
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ ಆ ಆ ಆ ಆ ಆ
F : ಆಕಾಶದಾಗೆ ಯಾರೋ ಮಾಯಗಾರನು
ಚಿತ್ತಾರ ಮಾಡಿ ಹೋಗೋನೇ .......
ಈ ಭೂಮಿ ಮ್ಯಾಗೆ ಯಾರೋ ತೋಟಗಾರನು
ಮಲೆನಾಡ ಮಾಡಿ ಹೋಗೊನೆ
F : ಸುದ್ದಿ ಇಲ್ಲದೇ ಮೂಡ ಶುದ್ದಿಯಾಗೋದು
ಸದ್ದೇ ಇಲ್ಲದೆ ಗಂಧ ಗಾಳಿಯಾಗೋದು
ತಂಟೆನೇ ಮಾಡದೆ ಹೊತ್ತಿಟ್ಟಿ ಹೋಗೋದು
ಏನೇನು ಮಾಡದೆ ನಾವ್ಯಾಕೆ ಬಾಳೋದು
M : ಹಾರೋ ಹಕ್ಕಿನಾ ತಂದು ಕೂಡಿಹಾಕೋದು
ಕಟ್ಟೋ ಜೇನನ್ನಾ ಸುಟ್ಟು ತಿಂದು ಹಾಕೋದು
ನರಾ ಮನಷ್ಯಾ ಕಲಿಯೋಲ್ಲ ಒಳ್ಳೇದು ಉಳಿಸೋಲ್ಲ
ಅವ ನೆಡೆಯೋ ದಾರೀಲಿ ಗರಿಕೇನೂ ಬೆಳೆಯೋಲ್ಲ
F : ಚಿಲಿಪಿಲಿಗಳ ಸರಿಗಮ ಕಿವಿಯೊಳಗೆ ಎ ಎ ಎ ಎ ಎ
M : ನೀರಲೆಗಳ ತಕಧಿಮಿ ಎದೆಯೊಳಗೆ ಎ ಎ ಎ ಎ ಎ
M : ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ ಆ ಆ ಆ ಆ ಆ
M : ಆಕಾಶದಾಗೆ ಯಾರೋ ಮಾಯಗಾರನು
ಚಿತ್ತಾರ ಮಾಡಿ ಹೋಗೋನೇ .......
ಈ ಭೂಮಿ ಮ್ಯಾಗೆ ಯಾರೋ ತೋಟಗಾರನು
ಮಲೆನಾಡ ಮಾಡಿ ಹೋಗೊನೆ
M : ಕಾಡು ಸುತ್ತುವ ಆಸೆ ರಾಣೀಗೇಕಮ್ಮ
ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮ
ಏಳೋದು ಬೀಳೋದು ಬಡವರ ಪಾಡಮ್ಮಾ
ನೀವ್ಯಾಕೆ ಹಾಡಿರಿ ಈ ಹಳ್ಳಿ ಹಾಡಮ್ಮಾ
F : ಇಲ್ಲಿ ಬೀಸುವ ಗಾಇ ಉರಲ್ಯಾಕಿಲ್ಲ
ಇಲ್ಲಿ ಸಿಕ್ಕುವಾ ಪಾಠ ಶ್ಯಾಲೆಲ್ಯಾಕಿಲ್ಲ
ಬಂಗಾರ ಸಿಂಗಾರ ಸಾಕಾಗಿ ಹೋಯಿತು ,
ಅರಮನೆ ಆನಂದ ಬೇಸತ್ತುಹೋಯಿತು
M : ಕೆಳಗಿಳಿಸುವ ಮನಸಿನ ಭಾರಗಳ ಆ ಆ ಆ ಆ ಆ ಆ
F : ಜಿಗಿಜಿಗಿಯುವ ಚಿಂತೆಯ ಗುಡ್ಡಗಳ ಆ ಆ ಆ ಆ ಆ ಆ
M / F : ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ ಆ ಆ ಆ ಆ ಆ
F : ಆಕಾಶದಾಗೆ ಯಾರೋ ಮಾಯಗಾರನು
ಚಿತ್ತಾರ ಮಾಡಿ ಹೋಗೋನೇ .......
M: ಈ ಭೂಮಿ ಮ್ಯಾಗೆ ಯಾರೋ ತೋಟಗಾರನು
ಮಲೆನಾಡ ಮಾಡಿ ಹೋಗೊನೆ
M / F : ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ ಆ ಆ ಆ ಆ ಆ
No comments:
Post a Comment