Friday, March 25, 2011

ತಾಯಿಯ ಹೊಣೆ :ಮುಗಿಲ ಮಲ್ಲಿಗೆಯೋ

ಚಿತ್ರ:ತಾಯಿಯ ಹೊಣೆ 
ಸಂಗೀತ: ಸತ್ಯಂ
ಸಾಹಿತ್ಯ:
ನಿರ್ದೇಶನ: ವಿಜಯ್
ಗಾಯಕರು: ಎಸ.ಪಿ.ಬಾಲಸುಬ್ರಮಣ್ಯಮ್ 

ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,
ನಿನ್ನಾ ಸ್ನೇಹ,ನಿನ್ನಾ ಪ್ರೇಮ,ಕನಸಿನಾ ಸಿರಿಯೋ,ಓ ಕನಸಿನಾ ಸಿರಿಯೋ,
ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,
ನಿನ್ನಾ ಸ್ನೇಹ,ನಿನ್ನಾ ಪ್ರೇಮ,ಕನಸಿನಾ ಸಿರಿಯೋ,ಓ ಕನಸಿನಾ ಸಿರಿಯೋ,

ಅರಳಿದ ತಾವರೆ ಹೂವಿನ ಹಾಗೆ, ಚೆಲುವೆಯಾ ಮೊಗವು,
ಚಂದ್ರನಾ ಕಂಡಾ ನೈದಿಲೆಯಂತೆ  ನಿನ್ನ ಈ ಮೊಗವು,
ಕಾಮಿನಿ ...........ಅರಗಿಣಿ .....
ನಿನ್ನ ನುಡಿಗಳು,ವೀಣೆ ಸ್ವರಗಳು,ಅರಿಯದೆ ಹೋದೆ,ಗೆಳತಿ ಬೆರಗಾದೆ,

ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,

ಮನದಲಿ ತುಂಬಿ, ಹೃದಯದಿ ತುಂಬಿ.ಆಸೆ ತಂದಿರುವೆ,
ನೆನಪಲಿ ಮಿಂದು,ನಯನಗಳಲ್ಲಿ ಕನಸ ತುಂಬಿರುವೆ,
ಮೋಹವೋ ......ವಿರಹವೋ..
ನಿನ್ನ ಸೇರದೆ,ಕೂಡಿ ಬಾಳದೆ,ಜೀವವೇ ಹೋದೆ ...ಶಾಂತಿ ದೊರಕದೆ 

ಮುಗಿಲ ಮಲ್ಲಿಗೆಯೋ,ಗಗನದಾ ತಾರೆಯೋ,

Thursday, March 24, 2011

ಗಿರಿಕನ್ಯೆ : ಥೈ ಥೈ ಥೈ ಥೈ ಬಂಗಾರಿ

ಚಿತ್ರ: ಗಿರಿಕನ್ಯೆ 
ಸಂಗೀತ:ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ದೊರೈ ಭಗವಾನ್ 
ಗಾಯಕರು: ಡಾ.ರಾಜಕುಮಾರ್

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,ಅಲೆಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ.....ವೈಯಾರಿ ,
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ

ಥೈ ಥೈ ಥೈ ಥೈ ಬಂಗಾರಿ,ಸೈ ಸೈ ಸೈ ಎನ್ನು ಸಿಂಗಾರಿ,ಆಹಾಹಹಾ
ಥೈ ಥೈ ಥೈ ಥೈ ಬಂಗಾರಿ ಓಹೋ .......

ಕಾನನದಾ ದೇವತೆಯಂತೆ ಬಂದಿರುವೆ ಎದುರಲ್ಲಿ,
ಜೇನಾಗಿ ನೀ ತುಂಬಿರುವೆ ನನ್ನೆದೆಯಾ ಹೂವಲ್ಲಿ,
ಮೀನಾಗಿ ಹಾಡುತಲಿರುವೆ ಮನಸೆಂಬ ಮಡುವಲ್ಲಿ,
ಮಿಂಚಾಗಿ ಹರಿದಾಡಿರುವೆ ಈ ನನ್ನಾ ಮೈಯಲ್ಲಿ,ಈ ನನ್ನಾ ಮೈಯಲ್ಲಿ,

ಆಹಾ ! ಥೈ ಥೈ ಥೈ ಥೈ ಬಂಗಾರಿ,ಸೈ ಸೈ ಸೈ ಎನ್ನು ಸಿಂಗಾರಿ,ಅಲೆಲೆಲೇ
ಥೈ ಥೈ ಥೈ ಥೈ ಬಂಗಾರಿ

ಹಾರಾಡೋ ಹಕ್ಕಿಗಳಲ್ಲಿ,ಅರಗಿಳಿಯೇ ಅಂದವು,
ನಾ ಕಂಡ ಹೆಣ್ಣುಗಳಲ್ಲಿ,ಚೆಲುವೆ ನೀ ಚಂದವು,
ಆ ಆ ಆ ಆ  ಆಹ ಆಹ ಆಹ ಓ ಹೋಯ್
ಮುಳ್ಳೆಲ್ಲ ಹೂವಿನ ಹಾಗೆ,ನಿನ್ನೊಡನೆ ಬರುವಾಗ,
ಉರಿ ಬಿಸಿಲು ಹುಣ್ಣಿಮೆಯಂತೆ ಹೆಣ್ಣೇ ನೀ ನಗುವಾಗ,ಹೆಣ್ಣೇ ನೀ ನಗುವಾಗ,

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,ಅಲೆಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ.....ವೈಯಾರಿ,
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ

ಜಿಗಿದಾಡೋ ಜಿಂಕೆಗಳಂತೆ ಕಾಡೆಲ್ಲಾ ಓಡುವಾ,
ನಲಿದಾಡೋ ಚಿಟ್ಟೆಗಳಂತೆ ವನವೆಲ್ಲಾ ನೋಡುವಾ,
ಹರಿದಾಡೋ ನದಿಯಂತಾಗಿ ಗಿರಿಯಿಂದಾ ಜಾರುವಾ,
ಕಡಲನ್ನು ಕೂಡುವ ಹಾಗೆ ಒಂದಾಗಿ ಸೇರುವಾ,ಒಂದಾಗಿ ಸೇರುವಾ 

ಥೈ ಥೈ ಥೈ ಥೈ ಬಂಗಾರಿ, ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,ಅಲೆಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ.....ವೈಯಾರಿ ,
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ,ಹಾಡಿ ನಲಿ ನಲಿ ಮಯೂರಿ

ಭಾಗ್ಯವಂತರು :ನಿನ್ನ ನನ್ನ ಮನವು ಸೇರಿತು

ಚಿತ್ರ:ಭಾಗ್ಯವಂತರು
ಸಂಗೀತ:ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಭಾರ್ಗವ 
ಗಾಯಕರು:ಪಿ.ಬಿ.ಶ್ರೀನಿವಾಸ್ 

ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
ರಾಗವು ಒಂದೇ ಭಾವವು ಒಂದೇ,ಜೀವ ಒಂದಾಯಿತು,ಬಾಳು ಹಗುರಾಯಿತು. 
ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,

ಏಕಾಂಗಿಯಾಗಿರಲು ಕೈ ಹಿಡಿದೇ,ಜೊತೆಯಾದೆ 
ತಾಯಂತೆ ಬಳಿ ಬಂದೆ,ಆದರಿಸಿ ಪ್ರೀತಿಸಿದೆ
ಬಾಳಲಿ ಸುಖ ನೀಡಿದೆ,ನನ್ನೀ ಬದುಕಿಗೆ ಶ್ರುತಿಯಾದೆ ,
ನನ್ನೀ ಮನೆಯಾ ಬೆಳಕಾದೆ.

ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,

ಎಂದೂ ಜೊತೆಯಲಿ ಬರುವೆ,ನಿನ್ನ ನೆರಳಿನ ಹಾಗೆ ಇರುವೆ,
ಕೊರಗದಿರು,ಮರುಗದಿರು,ಹಾಯಾಗಿ ನೀನಿರು.
ಎಂದೂ ಜೊತೆಯಲಿ ಬರುವೆ,ನಿನ್ನ ಉಸಿರಲಿ ಉಸಿರಾಗಿರುವೆ,
ನೋವುಗಳು ನನಗಿರಲಿ,ಆನಂದ ನಿನದಾಗಲಿ.
ನಗುವಿನ ಹೂಗಳ ಮೇಲೆ,ನಡೆಯುವ ಬಾಗ್ಯ ನಿನಗಿರಲಿ,
ನೋಡುವ ಬಾಗ್ಯ ನನಗಿರಲಿ .

ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
ರಾಗವು ಒಂದೇ ಭಾವವು ಒಂದೇ,ಜೀವ ಒಂದಾಯಿತು,ಬಾಳು ಹಗುರಾಯಿತು. 
ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
 
Tuesday, March 15, 2011

ನೀ ನನ್ನ ಗೆಲ್ಲಲಾರೆ :ಅನುರಾಗ ಏನಾಯ್ತು

ಚಿತ್ರ: ನೀ ನನ್ನ ಗೆಲ್ಲಲಾರೆ 
ಸಂಗೀತ: ಇಳಯರಾಜ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ: ವಿಜಯ್ 
ಗಾಯಕರು: ಡಾ ರಾಜಕುಮಾರ್ 

ಐ ಲವ್ ಯು, ಐ ಲವ್ ಯು, ಐ ಲವ್ ಯು, ಐ ಲವ್ ಯು,

ಅನುರಾಗ ಏನಾಯ್ತು,ಮನಸೇಕೆ ಕಲ್ಲಾಯ್ತು,
ನಿನ್ನಾ ಸವಿಮಾತು ಕಹಿ ಏಕಾಯ್ತು,ನಿನ್ನೋಲವೆಲ್ಲಾ ಇಂದೇನಾಯ್ತು,
ಅನುರಾಗ ಏನಾಯ್ತು....

ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ, 
ನೀಲಿ ಬಾನನು ಬಿಡುವಾಗ ಮುಗಿಲೆಲ್ಲಾ ಕರಗಿ ಅಳುವಂತೆ, 
ನಿನ್ನಾ ಪ್ರೇಮದಿಂದಾ ನಾ ದೂರಾಗಿ,ನನ್ನಾ ಕಂಗಳೆಲ್ಲಾ ಕಣ್ಣೀರಾಗಿ,
ಹಗಲಿರುಳೆಲ್ಲಾ ನಿನ್ನಾ ನೆನಪಾಯ್ತು,ಸರಸಾ ಹರುಷಾ ಬರಿ ಕನಸಾಯ್ತು.

ಅನುರಾಗ ಏನಾಯ್ತು..
ಓಡಿ ಬರುವಾ ನದಿಯಲ್ಲಿ,ಕಡಲಾಸೆ ತುಂಬಿ ಹರಿವಂತೆ, 
ಓಡಿ ಬರುವಾ ನದಿಯಲ್ಲಿ,ಕಡಲಾಸೆ ತುಂಬಿ ಹರಿವಂತೆ, 
ನಿನ್ನಾ ಸೇರೋ ಆಸೆ ನಾ ಕಂಡಾಗ,ಜೊತೆ ಬಾಳಲೆಂದು ಬಳಿ ಬಂದಾಗ 
ಸಿಡಿಲೊಂದೆರೆಗಿ ಬಡಿದಂತಾಗಿ,ವಿರಸ,ವಿರಹ ಕಹಿ ನನಗಾಯ್ತು 

ಅನುರಾಗ ಏನಾಯ್ತು,ಮನಸೇಕೆ ಕಲ್ಲಾಯ್ತು,
ನಿನ್ನಾ ಸವಿಮಾತು ಕಹಿ ಏಕಾಯ್ತು,ನಿನ್ನೋಲವೆಲ್ಲಾ ಇಂದೇನಾಯ್ತು,
ಅನುರಾಗ ಏನಾಯ್ತು....ಮನಸೇಕೆ ಕಲ್ಲಾಯ್ತು,

ದೃವತಾರೆ : ಆರತಿಯೇ ಧರೆಗಿಳಿದಂತೆ

ಚಿತ್ರ: ದೃವತಾರೆ
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಎಂ.ಎಸ್ ರಾಜಶೇಕರ್

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲಾ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.

ಮಾಮರ ತೂಗುತ,ಚಾಮರ ಹಾಸುತ,ಪರಿಮಳ ಎಲ್ಲೇಡೇ ಚಲ್ಲುತಿರೆ.
ಗಗನದ ಅಂಚಲಿ ರಂಗನು ಚೆಲ್ಲುತಾ,ಸಂದ್ಯೇಯು ನಾಟ್ಯವಾ ಹಾಡುತಿರೆ.
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ, ಕೋಗಿಲೆಯು ನಲಿಯುತಿರೆ ,
ಲ ಲ ಲ ಲಾ ......ಲ ಲ ಲ ಲ ಲಾ

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.

ಪ್ರೇಮದ ಭಾವಕೆ,ಪ್ರೀತಿಯಾ ರಾಗಕೆ,ಮೌನವೇ ಗೀತೆಯಾ ಹಾಡುತಿರೆ,
ಸರಸದ ಸ್ನೇಹಕೆ.ಒಲವಿನ ಕಾಣಿಕೆ,ನೀಡಲು ಅಧರವು ಅರಳುತಿರೆ,
ಎಂದಿಗೂ ಹೀಗೆ ಬಾಳುವಾಸೆ ತುಂಬಿ ಬಂದು 
ಪ್ರೇಮಿಗಳು ನಲಿಯುತಿರೆ,ಪ್ರೇಮಿಗಳು ನಲಿಯುತಿರೆ

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಹೂಬಾಣವಾಯಿತೋ ಎನಿಸುತಿದೆ.ಹೂಬಾಣವಾಯಿತೋ ಎನಿಸುತಿದೆ.
ಹೂಬಾಣವಾಯಿತೋ ಎನಿಸುತಿದೆ.

ಬೆಟ್ಟದ ಹುಲಿ :ಹಾಡುತಿರುವಾ ಮೂಡಗಳೇ

ಚಿತ್ರ: ಬೆಟ್ಟದ ಹುಲಿ
ಸಂಗೀತ: ಟಿ.ಜಿ.ಲಿಂಗಪ್ಪ 
ಸಾಹಿತ್ಯ:ಮುಜಾಫರ್ ಶಹಜಹಾನ್ ಪುರಿ
ನಿರ್ದೇಶನ: ಎ.ವಿ.ಶೇಷಗಿರಿರಾವ್ 
ಗಾಯಕರು:ಪಿ.ಬಿ.ಶ್ರೀನಿವಾಸ್ 

ಹಾಡುತಿರುವಾ ಮೂಡಗಳೇ,ಹಾರುತಿರುವಾ ಹಕ್ಕಿಗಳೇ,
ಯಾರ ತಡೆಯೂ ನಿಮಗಿಲ್ಲಾ,ನಿಮ್ಮ ಭಾಗ್ಯ ನಮಗಿಲ್ಲಾ, 
ಹಾಡುತಿರುವಾ ಮೂಡಗಳೇ,

ಒಬ್ಬನು ತನ್ನಯ ಸಲುವಾಗಿ,ಹಲವರ ದೋಚಿ ನಗುವಾಂತಾ,
ಒಬ್ಬನೆಲ್ಲೋ ನಗುತಿರಲು,ಕೋಟಿ ಮಂದಿ ಅಳುವಂತಾ,
ಲೋಕವಿದುವಂತೆ ಹೋಯ್,ಪಾಪದಾ ಸಂತೆ,  
ಲೋಕವಿದುವಂತೆ ಹೋಯ್,ಪಾಪದಾ ಸಂತೆ,
ಪ್ರೀತಿಯಲ್ಲಿ,ನೀತಿಯೇಲ್ಲಿ,ಶಾಂತಿಯು ಎಲ್ಲಿದೆ ಜಗದಲ್ಲಿ.

ಹಾಡುತಿರುವಾ ಮೂಡಗಳೇ,ಹಾರುತಿರುವಾ ಹಕ್ಕಿಗಳೇ,

ಮನುಜರು ಮನುಜರ ದಾರಿಯಲಿ,ಮುಳ್ಳನು ಹಾಸಿ ಮೆರೆಯುವರು,
ಆಸೆಯಿಂದ ಮನೆಕಟ್ಟಿ,ಕಡೆಗೆ ಮಣ್ಣಲಿ ಮಲಗುವರು,
ಲೋಕದೀ ಆಟ ಹೊಯ್ ಜೀವ ಜಂಜಾಟ, ಲೋಕದೀ ಆಟ ಹೊಯ್ ಜೀವ ಜಂಜಾಟ, 
ಭೇಧ ಭಾವ ಆಳುತಿರುವಾ ಲೋಕದ ನ್ಯಾಯದ ನೆರಳಲ್ಲಿ. 

ಹಾಡುತಿರುವಾ ಮೂಡಗಳೇ,ಹಾರುತಿರುವಾ ಹಕ್ಕಿಗಳೇ,
ಯಾರ ತಡೆಯೂ ನಿಮಗಿಲ್ಲಾ,ನಿಮ್ಮ ಭಾಗ್ಯ ನಮಗಿಲ್ಲಾ, 
ಹಾಡುತಿರುವಾ ಮೂಡಗಳೇ,

ಹಾಲು ಜೇನು :ಹಾಲು ಜೇನು ಒಂದಾದ ಹಾಗೆ

ಚಿತ್ರ :ಹಾಲು ಜೇನು
ಸಂಗೀತ:ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಸೀಗೀತಂ ಶ್ರೀನಿವಾಸ ರಾವ್ 
ಗಾಯಕರು:ಡಾ.ರಾಜಕುಮಾರ್ 

ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,  
ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,  
ನೀ ನಗುತಲಿ ಸುಖವಾಗಿರೆ,ಆನಂದದಾ ಹೊನಲಾಗಿರೆ,ಬಾಳೇ ಸವಿಗಾನ ... 
ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,  

ಬಿಸಿಲಾಗಲಿ,ಮಳೆಯಾಗಲಿ,ನೆರಳಾಗಿ ನಾನು ಬರುವೆನು ಜೊತೆಗೆ,
ಬಿಸಿಲಾಗಲಿ,ಮಳೆಯಾಗಲಿ,ನೆರಳಾಗಿ ನಾನು ಬರುವೆನು ಜೊತೆಗೆ,
ಸವಿ ಮಾತಲಿ ಸುಖ ನೀಡುವೆ ಎಂದೆಂದಿಗೂ ಹೀಗೆ,
ಹೂವಾಗಲಿ ಈ ಮೊಗವರಳಿ,ಸಂತೋಷದ ಪರಿಮಳ ಚೆಲ್ಲಿ,
ಹೂವಾಗಲಿ ಈ ಮೊಗವರಳಿ,ಸಂತೋಷದ ಪರಿಮಳ ಚೆಲ್ಲಿ,ಹಾಯಾಗಿರು.

ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ, 

ಈ ತಾವರೆ ಮೂಗವೇತಕೆ,ಮೂಗ್ಗಾದ ಹಾಗೆ ಸೊರಗಿದೆ ಚೆಲುವೆ, 
ಈ ತಾವರೆ ಮೂಗವೇತಕೆ,ಮೂಗ್ಗಾದ ಹಾಗೆ ಸೊರಗಿದೆ ಚೆಲುವೆ, 
ಇಂದೇತಕೆ ಈ ಮೌನವು ಹೀಗೇಕೆ ನೀನಿರುವೆ,
ನೀನೇತಕೆ ಬಾಡುವೆ ಕೊರಗಿ,ನಾನಿಲ್ಲವೇ ಆಸರೆಯಾಗಿ,
ನೀನೇತಕೆ ಬಾಡುವೆ ಕೊರಗಿ,ನಾನಿಲ್ಲವೇ ಆಸರೆಯಾಗಿ, ಹಾಯಾಗಿರು

ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,  
ನೀ ನಗುತಲಿ ಸುಖವಾಗಿರೆ,ಆನಂದದಾ ಹೊನಲಾಗಿರೆ,ಬಾಳೇ ಸವಿಗಾನ ... 
ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,

Monday, March 14, 2011

ಕಸ್ತೂರಿ ನಿವಾಸ : ಎಲ್ಲೇ ಇರು,ಹೇಗೆ ಇರು

ಚಿತ್ರ: ಕಸ್ತೂರಿ ನಿವಾಸ
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ: ಚಿ.ಉದಯ್ ಶಂಕರ್ 
ನಿರ್ದೇಶನ:ದೊರೈ ರಾಜ್
ಗಾಯಕರು: ಪಿ.ಸುಶೀಲಾ 

ಎಲ್ಲೇ ಇರು,ಹೇಗೆ ಇರು,ಎಂದೆಂದೂ ಮನದಲ್ಲಿ ನೀ ತುಂಬಿರು,
ಎಲ್ಲೇ ಇರು,ಹೇಗೆ ಇರು,ಎಂದೆಂದೂ ಮನದಲ್ಲಿ ನೀ ತುಂಬಿರು,

ಬಾಳೆಂಬ ಗುಡಿಗೆ,ನೀ ದೇವನಾದೆ,
ಕರುಣಾಳು ನೀನು ಆಧಾರವಾದೆ,
ಬಾಳೆಂಬ ಗುಡಿಗೆ,ನೀ ದೇವನಾದೆ,
ಕರುಣಾಳು ನೀನು ಆಧಾರವಾದೆ,
ನಾ ಬೇಡಲಾರೆ ವರವೇನನು,ನೀ ನೀಡು ಸಾಕು ನಗೆಯೊಂದನು.

ಎಲ್ಲೇ ಇರು,ಹೇಗೆ ಇರು,ಎಂದೆಂದೂ ಮನದಲ್ಲಿ ನೀ ತುಂಬಿರು,

ನನ್ನಾಸೆ ನೂರು ಹೂವಾಗಿ ನಗಲು,
ಹೂಮಾಲೆ ಮಾಡಿ ನಿನಗೆಂದೇ ತರಲು
ನನ್ನಾಸೆ ನೂರು ಹೂವಾಗಿ ನಗಲು,
ಹೂಮಾಲೆ ಮಾಡಿ ನಿನಗೆಂದೇ ತರಲು
ಕಣ್ತುಂಬ ಕಂಡೆ ಆ ರೂಪವಾ,ಬೆಳಕಾಗಿ ಬಂದಾ ಆ ದೀಪವಾ.

ಎಲ್ಲೇ ಇರು,ಹೇಗೆ ಇರು,ಎಂದೆಂದೂ ಮನದಲ್ಲಿ ನೀ ತುಂಬಿರು,
ಎಂದೆಂದೂ ಮನದಲ್ಲಿ ನೀ ತುಂಬಿರು,

ಬಂಗಾರದ ಮನುಷ್ಯ : ಬಾಳ ಬಂಗಾರ ನೀನು

ಚಿತ್ರ:ಬಂಗಾರದ ಮನುಷ್ಯ 
ಸಂಗೀತ:ಜಿ.ಕೆ.ವೆಂಕಟೇಶ್
ಸಾಹಿತ್ಯ:ಹುಣಸೂರು ಕೃಷ್ಣಮೂರ್ತಿ 
ನಿರ್ದೇಶನ:ಸಿದ್ದಲಿಂಗಯ್ಯ 
ಗಾಯನ:ಪಿ.ಸುಶೀಲಾ 

ಬಾಳ ಬಂಗಾರ ನೀನು,ಹಣೆಯಾ ಸಿಂಗಾರ ನೀನು,
ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ,ನಾನಯ್ಯಾ ಬೊಂಬೆ ನಾನಯ್ಯಾ,

ಬಾಳ ಬಂಗಾರ ನೀನು,ಹಣೆಯಾ ಸಿಂಗಾರ ನೀನು,
ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ,ನಾನಯ್ಯಾ ಬೊಂಬೆ ನಾನಯ್ಯಾ
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ, 
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ನಾನಯ್ಯಾ ಬೊಂಬೆ ನಾನಯ್ಯಾ...ಓ...ಹೋ...ಹೋಹೋ..ಓ .....
ಬಾಳ ಬಂಗಾರ ನೀನು,ಹಣೆಯಾ ಸಿಂಗಾರ ನೀನು,
ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ,ನಾನಯ್ಯಾಬೊಂಬೆ ನಾನಯ್ಯಾ

ಹಗಲೆಲ್ಲ ನೆನೆಸಿ,ಇರುಳೆಲ್ಲ ಬಯಸಿ,ಬಳಲಿದೆಯೋ,ಜೀವಾ ಕೇಳೆನ್ನ ಚೆಲುವಾ, 
ಹಗಲೆಲ್ಲ ನೆನೆಸಿ,ಇರುಳೆಲ್ಲ ಬಯಸಿ,ಬಳಲಿದೆಯೋ,ಜೀವಾ ಕೇಳೆನ್ನ ಚೆಲುವಾ, 
ಬೇಡೆಂದು ಜರಿದು,ನೀ ದೂರ ಹೋದರು, ಬೇಡೆಂದು ಜರಿದು,ನೀ ದೂರ ಹೋದರು, 
ಬಿಡದಂತೆ ನಿನ್ನಾ ನೆರಳಾಗಿ ಇರುವೆ, 

ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ನಾನಯ್ಯಾ ಬೊಂಬೆ ನಾನಯ್ಯಾ...ಓ...ಹೋ...ಹೋಹೋ..ಓ .....
ಬಾಳ ಬಂಗಾರ ನೀನು,ಹಣೆಯಾ ಸಿಂಗಾರ ನೀನು,
ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ,ನಾನಯ್ಯಾ ಬೊಂಬೆ ನಾನಯ್ಯಾ

ನನ್ನೆದೆಯಾ ನಿನ್ನಾ ಸೆರೆಮನೆಯೋ ಚನ್ನಾ,ಅದರಿಂದ ಎಂದು ಬಿಡುಗಡೆಯೇ ಸಿಗದು,
ನನ್ನೆದೆಯಾ ನಿನ್ನಾ ಸೆರೆಮನೆಯೋ ಚನ್ನಾ,ಅದರಿಂದ ಎಂದು ಬಿಡುಗಡೆಯೇ ಸಿಗದು,
ನೂರಾರು ಜನುಮಾ ನೀ ತಾಳಿ ಬಂದರೂ,ನೂರಾರು ಜನುಮಾ ನೀ ತಾಳಿ ಬಂದರೂ,
ಸತಿಯಾಗಿ ನಿನ್ನಾ ಜತೆಯಲ್ಲೇ ಬರುವೆ.... 

ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ತಾನೋ ತಂದಾನ ತಾನೋ, ತಾನೋ ತಂದಾನ ತಾನೋ,
ನಾನಯ್ಯಾ ಬೊಂಬೆ ನಾನಯ್ಯಾ ...ಓ...ಹೋ...ಹೋಹೋ..ಓ .....
ಬಾಳ ಬಂಗಾರ ನೀನು,ಹಣೆಯಾ ಸಿಂಗಾರ ನೀನು,
ನಿನ್ನಾ ಕೈಲಾಡೋ ಬೊಂಬೆ ನಾನಯ್ಯಾ,ನಾನಯ್ಯಾ ಬೊಂಬೆ ನಾನಯ್ಯಾ

ರಾಜ ನನ್ನ ರಾಜ : ನಿನದೇ ನೆನಪು

ಚಿತ್ರ :ರಾಜ ನನ್ನ ರಾಜ 
ಸಂಗೀತ:ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಚಿ.ಉದಯ ಶಂಕರ್ 
ನಿರ್ದೇಶನ:ಎ.ವಿ.ಶೇಷಗಿರಿರಾವ್

ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ 
ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ತಂಗಾಳಿಯಲ್ಲಿ ಬೆಂದೆ,ಏಕಾಂತದಲ್ಲಿ ನಾ ನೊಂದೆ,
ತಂಗಾಳಿಯಲ್ಲಿ ಬೆಂದೆ,ಏಕಾಂತದಲ್ಲಿ ನಾ ನೊಂದೆ,
ಹಗಲಲಿ ತಿರುಗಿ ಬಳಲಿದೆ,ಇರುಳಲಿ ಬಯಸಿ ಕೊರಗಿದೆ,
ದಿನವು ನಿನ್ನ ನಾ ಕಾಣದೆ .......

ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ಕಡಲಿಂದ ಬೇರೆಯಾಗಿ,ತೇಲಾಡೋ ಮೋಡವಾಗಿ
ಕಡಲಿಂದ ಬೇರೆಯಾಗಿ,ತೇಲಾಡೋ ಮೋಡವಾಗಿ,
ಕರಗುತ ಧರೆಗೆ ಇಳಿವುದು,ಹರಿಯುತ ಕಡಲ ಬೇರೆವುದು,
ನಮ್ಮೀ ಬಾಳಿನಾ ಬಗೆ ಇದು....

ನಿನದೇ ನೆನಪು ದಿನವು ಮನದಲ್ಲಿ,
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ತಾಯಿಗೆ ತಕ್ಕ ಮಗ :ವಿಶ್ವನಾಥನು ತಂದೆಯಾದರೆ

ಚಿತ್ರ :ತಾಯಿಗೆ ತಕ್ಕ ಮಗ 
ಸಂಗೀತ :ಟಿ.ಜಿ.ಲಿಂಗಪ್ಪ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ವಿ.ಸೋಮಶೇಕರ್
ಗಾಯನ:ಡಾ.ರಾಜಕುಮಾರ್ 

ಹೇ.....ವಿಶ್ವನಾಥ ನೀನು ತಂದೆಯಾದರೆ........
ವಿಶಾಲಾಕ್ಷಿ ತಾಯಿಯಲ್ಲವೇ....ತಾಯಿಯಲ್ಲವೇ....
ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.
ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.
ಯಶೋಧೆ ಕೃಷ್ಣನಾ ಬೆಳೆಸಿದರೇನು,ಯಶೋಧೆ ಕೃಷ್ಣನಾ ಬೆಳೆಸಿದರೇನು,
ದೇವಕಿಗೆ ಅವನು ಕಂದನಲ್ಲವೇ...
ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.

ಶಂಭೂ ಮಹದೇವಾ,ಹರಹರ ಮಹದೇವಾ,ಶಂಭೂ ಮಹದೇವಾ

ಕಂದಾ ಕಾಣುವ ಮೊದಲಾ ದೇವರೇ,ಜನುಮಾ ನೀಡಿದಾ ಅಮ್ಮನಲ್ಲವೇ.
ಕಂದಾ ಕಾಣುವ ಮೊದಲಾ ದೇವರೇ,ಜನುಮಾ ನೀಡಿದಾ ಅಮ್ಮನಲ್ಲವೇ.
ತಾಯಿ ದೇವರೇ ಸುಳ್ಳು ನುಡಿದರೆ,ತಾಯಿ ದೇವರೇ ಸುಳ್ಳು ನುಡಿದರೆ,
ಸತ್ಯವೆಂಬ ಮಾತು ಎಲ್ಲಿದೆ,ಸತ್ಯವೆಂಬ ಮಾತು ಎಲ್ಲಿದೆ,

ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.

ಶಂಭೂ ಮಹದೇವಾ,ಹರಹರ ಮಹದೇವಾ,ಶಂಭೂ ಮಹದೇವಾ

ಗಂಗಾ ನದಿಯಲಿ,ಮಿಂದೂ ಬಂದರು ಪಾಪವಿನ್ನು ಕಳೆಯಲಿಲ್ಲವೇ,
ಗಂಗಾ ನದಿಯಲಿ,ಮಿಂದೂ ಬಂದರು ಪಾಪವಿನ್ನು ಕಳೆಯಲಿಲ್ಲವೇ,
ಕಾಶಿನಾಥನ ಬಳಿಗೆ ಬಂದರು,ಕಾಶಿನಾಥನ ಬಳಿಗೆ ಬಂದರು, 
ನ್ಯಾಯವಿನ್ನು ಏಕೋ ಕಾಣದೆ,ನ್ಯಾಯವಿನ್ನು ಏಕೋ ಕಾಣದೆ

ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.
ಯಶೋಧೆ ಕೃಷ್ಣನಾ ಬೆಳೆಸಿದರೇನು,ಯಶೋಧೆ ಕೃಷ್ಣನಾ ಬೆಳೆಸಿದರೇನು,
ದೇವಕಿಗೆ ಅವನು ಕಂದನಲ್ಲವೇ...
ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.
ವಿಶ್ವನಾಥನು ತಂದೆಯಾದರೆ,ವಿಶಾಲಾಕ್ಷಿ ತಾಯಿಯಲ್ಲವೆ.

ಭಾಗ್ಯದ ಲಕ್ಷ್ಮಿ ಬಾರಮ್ಮ :ಯಾವ ಕವಿಯು ಬರೆಯಲಾರ

ಚಿತ್ರ :ಭಾಗ್ಯದ ಲಕ್ಷ್ಮಿ ಬಾರಮ್ಮ 
ಸಂಗೀತ:ಸೀಗೀತಂ ಶ್ರೀನಿವಾಸ ರಾವ್ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಸೀಗೀತಂ ಶ್ರೀನಿವಾಸ ರಾವ್ 
ಗಾಯಕರು:ಡಾ.ರಾಜಕುಮಾರ್ 

ಯಾವ ಕವಿಯು ಬರೆಯಲಾರ,
ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ,ಬರೆಯಲಾರ

ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
ನಿನ್ನ ಕವಿತೆ,ಎಂಥ ಕವಿತೆ,ರಸಿಕರಾಡೋ ನುಡಿಗಳಂತೆ,
ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
ಮಲ್ಲೆ ಹೂವು ಅರಳಿದಂತೆ,ಚಂದ್ರಕಾಂತಿ ಚೆಲ್ಲಿದಂತೆ,
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ,

ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ

ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
ಪ್ರೇಮ ಸುಮವು,ಅರಳುವಂತೆ,ಪ್ರಣಯ ಗಂಧ ಚೆಲ್ಲುವಂತೆ,
ಕಂಗಳೇರಡು ದುಂಬಿಯಾಗಿ ಭ್ರಮರ ಗೀತೆ ಹಾಡುವಂತೆ,
ಜೇನಿಗಾಗಿ ತುಟಿಗಳೇರಡು ಸನಿಹ ಸೇರುವಂತೆ 

ಯಾವ ಕವಿಯು ಬರೆಯಲಾರ,
ಒಲವಿನಿಂದ ಕಣ್ಣೋಟದಿಂದ....
ಹೃದಯದಲ್ಲಿ ನೀ ಬರೆದ,ಈ ಪ್ರೇಮ ಗೀತೆಯ,
ಯಾವ ಕವಿಯು ಬರೆಯಲಾರ,ಬರೆಯಲಾರ,

ಅವಳ ಹೆಜ್ಜೆ :ನೆರಳನು ಕಾಣದ ಲತೆಯಂತೆ

ಚಿತ್ರ :ಅವಳ ಹೆಜ್ಜೆ 
ಸಂಗೀತ:ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಭಾರ್ಗವ 
ಗಾಯಕರು:ಎಸ್.ಪಿ.ಬಾಲಸುಬ್ರಮಣ್ಯಂ 

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, 
ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, 

ನಯನದಲಿ ಕಾಂತಿ ಇಲ್ಲಾ,ತುಟಿಗಳಲಿ ನಗುವೇ ಇಲ್ಲಾ,
ಸವಿಯಾದ ಮಾತನು ಇಂದೇಕೋ ಕಾಣೆನು.
ನಿನ್ನ ಮನಸು ನಾನು ಬಲ್ಲೆ,ನಿನ್ನ ವಿಷಯವೆಲ್ಲ ಬಲ್ಲೆ,
ನೀನೇನು ಹೇಳದೆ,ನಾನೆಲ್ಲಾ ಹೇಳಲೇ,
ಏನಿಂತ ನಾಚಿಕೆ,ಕಣ್ಣೀರು ಏತಕೆ.

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ಈ ಗುಡಿಯ ದೇವಿ ನೀನು,ಈ ತನುವಾ ಪ್ರಾಣ ನೀನು,
ಬಾಳಲ್ಲಿ ನೆಮ್ಮದಿ,ನಿನ್ನಿಂದ ಕಂಡೆನು,
ನೀ ಅಳಲು ನೋಡಲಾರೆ,ನೀ ಇರದೇ ಬಾಳಲಾರೆ,
ನನ್ನಲ್ಲಿ ಕೋಪವೇ,ನಾ ನಿನಗೆ ಬೇಡವೇ,
ನೀ ದೂರವಾದರೆ ನನಗಾರು ಆಸರೆ........

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, 
ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, 

ಜೋಗಿ :ಬೇಡುವೆನು ವರವನ್ನು

ಚಿತ್ರ :ಜೋಗಿ 
ಸಂಗೀತ:ಗುರುಕಿರಣ್ 
ಸಾಹಿತ್ಯ:ಪ್ರೇಮ್
ನಿರ್ದೇಶನ:ಪ್ರೇಮ್
ಗಾಯಕರು:ಪ್ರೇಮ್

ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು 
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ, 
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು 
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,

ಭೂಮಿ ತಾಯಿಯ ನೋಡೋ ಆಸೆಯಾ
ಹೋತ್ತು ದಿನವು ಆ ಸೂರ್ಯ ಬರುತಾನೋ .....
ಸವಿ ಲಾಲಿಯಾ,ತಾಯಿ ಹೇಳೆಯಾ 
ಎಂದು ಧರೆಗೆ ಆ ಚಂದ್ರ ಬರುತಾನೋ .....
ದ್ವನಿ ಕೇಳದೇನು,ಕೇಳಯ್ಯ ನೀನು ,ದ್ವನಿ ಕೇಳದೇನು,ಕೇಳಯ್ಯ ನೀನು,
ಈ ತಾಯಿ ಎದೆ ಕೂಗನು, ಈ ತಾಯಿ ಎದೆ ಕೂಗನು,

ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು 
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ, 

ದೂರ ಹೋದರು,ಎಲ್ಲೇ ಇದ್ದರು,
ನೀನೇ ಮರೆತರೂ ತಾಯಿ ಮರೆಯಲ್ಲಾ,
ಸಾವೇ ಬಂದರೂ,ಮಣ್ಣೇ ಆದರೂ,
ತಾಯಿ ಪ್ರೀತಿಗೆಂದೆಂದು ಕೊನೆ ಇಲ್ಲಾ,
ತಾಯಿನೆ ಎಲ್ಲಾ ....ಬದಲಾಗೊದಿಲ್ಲಾ ,ತಾಯಿನೆ ಎಲ್ಲಾ ....ಬದಲಾಗೊದಿಲ್ಲಾ
ಯುಗ ಉರುಳಿ ಕಳೆದೋದರು,ಹಣೆ ಬರಹ ಬದಲಾದರು. 

ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು 
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ, 
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು 
ಕಡೆತನಕ ಮರೆಯಲ್ಲಾ ಜೋಗಿ,ಕಡೆತನಕ ಮರೆಯಲ್ಲಾ ಜೋಗಿ,
ಕಡೆತನಕ ಮರೆಯಲ್ಲಾ ಜೋಗಿ,
  
ಕರ್ಣ :ಆ ಕರ್ಣನಂತೆ ನೀ ದಾನಿಯಾದೆ

ಚಿತ್ರ:ಕರ್ಣ 
ಸಂಗೀತ:ಎಂ.ರಂಗರಾವ್
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ಭಾರ್ಗವ
ಗಾಯಕರು:ಕೆ.ಜೆ.ಯೇಸುದಾಸ್

ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............

ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು,
ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು,
ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು.
ನಿನ್ನಂತ ರಂಗವಾ ಅವರೇನು ಬಲ್ಲರು,
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,

ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............

ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
ತನ್ನಾಸೆಯಂತೆಯೇ ಆಡೋದು ದೇವರು. 
ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
ತನ್ನಾಸೆಯಂತೆಯೇ ಆಡೋದು ದೇವರು. 
ಇಂದಲ್ಲಾ ನಾಳೆ ಸಾಯೋದೆ ಎಲ್ಲರು,
ಏನಾದರೇನೀಗಾ  ನಿನ್ನನ್ನು ಮರೆಯರು.

ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು. 
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು. 
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ 
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು 

ಆ ಕರ್ಣನಂತೆ ನೀ ದಾನಿಯಾದೆ,ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............