Tuesday, March 15, 2011

ಬೆಟ್ಟದ ಹುಲಿ :ಹಾಡುತಿರುವಾ ಮೂಡಗಳೇ

ಚಿತ್ರ: ಬೆಟ್ಟದ ಹುಲಿ
ಸಂಗೀತ: ಟಿ.ಜಿ.ಲಿಂಗಪ್ಪ 
ಸಾಹಿತ್ಯ:ಮುಜಾಫರ್ ಶಹಜಹಾನ್ ಪುರಿ
ನಿರ್ದೇಶನ: ಎ.ವಿ.ಶೇಷಗಿರಿರಾವ್ 
ಗಾಯಕರು:ಪಿ.ಬಿ.ಶ್ರೀನಿವಾಸ್ 

ಹಾಡುತಿರುವಾ ಮೂಡಗಳೇ,ಹಾರುತಿರುವಾ ಹಕ್ಕಿಗಳೇ,
ಯಾರ ತಡೆಯೂ ನಿಮಗಿಲ್ಲಾ,ನಿಮ್ಮ ಭಾಗ್ಯ ನಮಗಿಲ್ಲಾ, 
ಹಾಡುತಿರುವಾ ಮೂಡಗಳೇ,

ಒಬ್ಬನು ತನ್ನಯ ಸಲುವಾಗಿ,ಹಲವರ ದೋಚಿ ನಗುವಾಂತಾ,
ಒಬ್ಬನೆಲ್ಲೋ ನಗುತಿರಲು,ಕೋಟಿ ಮಂದಿ ಅಳುವಂತಾ,
ಲೋಕವಿದುವಂತೆ ಹೋಯ್,ಪಾಪದಾ ಸಂತೆ,  
ಲೋಕವಿದುವಂತೆ ಹೋಯ್,ಪಾಪದಾ ಸಂತೆ,
ಪ್ರೀತಿಯಲ್ಲಿ,ನೀತಿಯೇಲ್ಲಿ,ಶಾಂತಿಯು ಎಲ್ಲಿದೆ ಜಗದಲ್ಲಿ.

ಹಾಡುತಿರುವಾ ಮೂಡಗಳೇ,ಹಾರುತಿರುವಾ ಹಕ್ಕಿಗಳೇ,

ಮನುಜರು ಮನುಜರ ದಾರಿಯಲಿ,ಮುಳ್ಳನು ಹಾಸಿ ಮೆರೆಯುವರು,
ಆಸೆಯಿಂದ ಮನೆಕಟ್ಟಿ,ಕಡೆಗೆ ಮಣ್ಣಲಿ ಮಲಗುವರು,
ಲೋಕದೀ ಆಟ ಹೊಯ್ ಜೀವ ಜಂಜಾಟ, ಲೋಕದೀ ಆಟ ಹೊಯ್ ಜೀವ ಜಂಜಾಟ, 
ಭೇಧ ಭಾವ ಆಳುತಿರುವಾ ಲೋಕದ ನ್ಯಾಯದ ನೆರಳಲ್ಲಿ. 

ಹಾಡುತಿರುವಾ ಮೂಡಗಳೇ,ಹಾರುತಿರುವಾ ಹಕ್ಕಿಗಳೇ,
ಯಾರ ತಡೆಯೂ ನಿಮಗಿಲ್ಲಾ,ನಿಮ್ಮ ಭಾಗ್ಯ ನಮಗಿಲ್ಲಾ, 
ಹಾಡುತಿರುವಾ ಮೂಡಗಳೇ,

No comments:

Post a Comment