Friday, October 14, 2016

ಶಬರಿ ಮಲೇ ಸ್ವಾಮಿ ಅಯ್ಯಪ್ಪ :ಶಂಕರ ಶಶಿಧರ ಗಜ ಚರ್ಮಮಾಂಬರ

ಚಿತ್ರ: ಶಬರಿ ಮಲೇ ಸ್ವಾಮಿ ಅಯ್ಯಪ್ಪ 
ಸಂಗೀತ: ಕೆ ವಿ ಮಹದೇವನ್ 
ಸಾಹಿತ್ಯ: 
ನಿರ್ದೇಶನ: ರೇಣುಕಾಶರ್ಮ 
ಗಾಯಕರು: ಎಸ್ ಪಿ ಬಿ 



ಓಂ  ....... ಓಂ ....... ಓಂ
ಶಂಕರ ಶಶಿಧರ ಗಜ ಚರ್ಮಮಾಂಬರ  ಗಂಗಾಧರ ಹರನೇ
ಸುಂದರ ಸ್ಮರಹರ  ಗೌರಿ ಮನೋಹರ ಜಯ ಪರಮೇಶ್ವರನೇ
ಶಂಕರ ಶಶಿಧರ ಗಜ ಚರ್ಮಮಾಂಬರ  ಗಂಗಾಧರ ಹರನೇ
ಸುಂದರ ಸ್ಮರಹರ  ಗೌರಿ ಮನೋಹರ ಜಯ ಪರಮೇಶ್ವರನೇ

ಜಯ ಜಯ ಶಂಕರನೇ ....... ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ,.......

ಓಂ.......  ಓಂ.......  ಓಂ ....... ಓಂ
ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ,
ಶೂಲಿಕ ಪರ್ತಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ
ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ,
ಶೂಲಿಕ ಪರ್ತಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ
ಜಯ ಮೃತ್ಯುಂಜಯನೇ ........
ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ
ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ

ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ ....... ಜಯ ವಿಶ್ವೇಶ್ವರನೇ,.......

ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನು ಕುಡಿದ ಕರುಣಾಸಾಗರನೇ
ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನು ಕುಡಿದ ಕರುಣಾಸಾಗರನೇ
ಕರುಣಾಸಾಗರನೇ.......

ಶಂಕರ ಶಶಿಧರ ಗಜ ಚರ್ಮಮಾಂಬರ  ಗಂಗಾಧರ ಹರನೇ
ಸುಂದರ ಸ್ಮರಹರ  ಗೌರಿ ಮನೋಹರ ಜಯ ಪರಮೇಶ್ವರನೇ

ಜಯ ಜಯ ಶಂಕರನೇ ....... ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ,  (ಕೋರಸ್ )

ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ.......
ಶಶಿಧರನೇ ....... ಹರನೇ ....... ಶಿವನೇ .......

ಯಜಮಾನ :ಪ್ರೇಮ ಚಂದ್ರಮ ಕೈಗೆ ಸಿಗುವುದೇ

ಚಿತ್ರ: ಯಜಮಾನ 
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ ಕಲ್ಯಾಣ್ 
ನಿರ್ದೇಶನ: ಆರ್  ಶೇಷಾದ್ರಿ,ರಾಧಾ ಭಾರತಿ 
ಗಾಯಕರು: ರಾಜೇಶ್ 


ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ, ನೀ ಹೇಳೇ ತಾಂಗಾಳಿ 
ಮನಸಾರೆ ಮೆಚ್ಚಿ ಕೊಳುವೆ ,ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ ನಾ ಪ್ರೇಮಿಯಾಗಿರುವೆ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಬಾನಲಿ ಹುಣ್ಣಿಮೆಯಾದರೆ ನೀ, ಸವೆಯಬೇಡ ಸವೆಯುವೆ ನಾ ..... 
ಮೇಣದ ಬೆಳಕೇ ಆದರೆ ನೀ, ಕರಗಬೇಡ ಕರಾಗುವೆ ನಾ ..... 
ಹೂದೋಟವೇ ಆದ್ರೆ ನೀನು, ಹೂಗಳ ಬದಲು ಉದುರುವೆ ನಾ 
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಈ ಪ್ರತಿರೂಪವಾ ಬಿಡಿಸಲು ನಾ, ನೆತ್ತರಲೇ ಬಣ್ಣವನಿಡುವೆ 
ಈ ಪ್ರತಿಬಿಂಬವ ಕೆತ್ತಲು ನಾ, ಎದೆಯ ರೋಮದ ಉಳಿ ಇಡುವೆ 
ಕವಿತೆಯ ಹಾಗೆ ಬರೆದಿಡಲು, ಉಸಿರಾನೇ ಬಸಿದು ಪದವಿಡುವೆ 
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 
ಮನಸಾರೆ ಮೆಚ್ಚಿ ಕೊಳುವೆ,ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ ನಾ ಪ್ರೇಮಿಯಾಗಿರುವೆ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ ನೀ ಹೇಳೇ ತಾಂಗಾಳಿ 


ಬೇವು ಬೆಲ್ಲ : ಜನುಮ ನೀಡುತ್ತಾಳೆ

ಚಿತ್ರ: ಬೇವು ಬೆಲ್ಲ 
ಸಂಗೀತ: ಹಂಸಲೇಖ 
ಸಾಹಿತ್ಯ: ಹಂಸಲೇಖ 
ನಿರ್ದೇಶನ: ಎಸ್  ನಾರಾಯಣ್ 
ಗಾಯಕರು: ರಾಜೇಶ್ ಕೃಷ್ಣನ್ 


ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 

ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 
ಪಾಪ ಕಳೆಯುತಾಳೆ ಕಾವೇರಿ ತಾಯಿ

ಓದಿದರೂ ...... ಗೀಚಿದರೂ ..... ಒಲೆಯ ಊದಬೇಕು ..... ತಾಯಿಯಾಗಬೇಕು 
ತಾಯಿ .... ನೆಲದಾ ... ಋಣಾ ತೀರಿಸಲೇಬೇಕು 
ತಾಯಿ ಭಾಷೆ ನಿನ್ನ ಮಕ್ಕಳು ಕಲಿಬೇಕು 
ಕಾವೇರಿ......  ನೀರಲ್ಲಿ...... ಬೇಳೆ ಬೇಯಿಸಬೇಕು 

ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 
ಪಾಪ ಕಳೆಯುತಾಳೆ ಕಾವೇರಿ ತಾಯಿ 

ಜಾರಿದರು...... ಎಡವಿದರು...... ಕೈ ಹಿಡಿಯುತ್ತಾಳೆ...  ತಾಯಿ ಕಾಯುತ್ತಾಳೆ 
ಭೂಮಿ, ತಾಯಿ, ನೀ ಸತ್ತರು ಕರೀತಾಳೆ 
ತಾಯಿ, ಭಾಷೆ, ನೀ ಹೋದರು ಇರುತಾಳೆ 
ಸಾವಲ್ಲಿ...... ಕಾವೇರಿ...... ಬಾಯಿಗೆ ಸಿಗುತಾಳೆ 

ಜನುಮ ನೀಡುತ್ತಾಳೆ  ನಮ್ಮ ತಾಯಿ,
ಅನ್ನ  ನೀಡುತ್ತಾಳೆ ಭೂಮಿ ತಾಯಿ, 
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತಾಳೆ ಕಾವೇರಿ ತಾಯಿ 
ಪಾಪ ಕಳೆಯುತಾಳೆ ಕಾವೇರಿ ತಾಯಿ 

ಕೃಷ್ಣ ರುಕ್ಮಿಣಿ : ಕರ್ನಾಟಕದ ಇತಿಹಾಸದಲಿ


ಚಿತ್ರ: ಕೃಷ್ಣ ರುಕ್ಮಿಣಿ 
ಸಂಗೀತ: ಕೆ  ವಿ  ಮಹದೇವನ್ 
ಸಾಹಿತ್ಯ: ಆರ್ ಎನ್ ಜಯಗೋಪಾಲ್ 
ನಿರ್ದೇಶನ: ಹೆಚ್ ಆರ್ ಭಾರ್ಗವ  
ಗಾಯಕರು: ಎಸ್ ಪಿ ಬಿ 


ಕರ್ನಾಟಕದ ಇತಿಹಾಸದಲಿ ......
ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 
ಕರ್ನಾಟಕದ ಇತಿಹಾಸದಲಿ ... 


ಜ್ಞಾನದ ಜ್ಯೋತಿಯು ವಿದ್ಯಾರಣ್ಯರು, ಅನುಗ್ರಹಗೈದ ಭೂಮಿ ಇದು,
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು, ಅನುಗ್ರಹಗೈದ ಭೂಮಿ ಇದು,
ಹಕ್ಕ ಬುಕ್ಕರು ಆಳಿದರಿಲ್ಲಿ, ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ,
ವಿಜಯದ ಕಹಳೆಯ ಊದಿದರು, ವಿಜಯನಗರ ಸ್ಥಾಪನೆ ಮಾಡಿದರು...


ಕರ್ನಾಟಕದ ಇತಿಹಾಸದಲಿ ......

ಬಂಗಾರದ ಯುಗದ ಕತೆಯನ್ನು,
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 
ಹಾಡುವೆ ಕೇಳಿ ನಾ ಹಾಡುವೆ ಕೇಳಿ. 

ಗಂಡರಗಂಡ ಧೀರ ಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೇ ,
ಗಂಡರಗಂಡ ಧೀರಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೇ ,
ಕಲಿಗಳ ನಾಡು ಕವಿಗಳ ಬೀಡು,  ಕಲಿಗಳ ನಾಡು ಕವಿಗಳ ಬೀಡು,
ಎನಿಸಿತು ಹಂಪೆಯು ಆ ದಿನದೇ.
ಕನ್ನಡ ಬಾವುಟ ಹಾರಿಸಿದಾ ,ಮದುರೆವರೆಗೂ ರಾಜ್ಯವಾ  ಹರಡಿಸಿದ, 

ಕರ್ನಾಟಕದ ಇತಿಹಾಸದಲಿ...

ಸಂಗೀತ ನಾಟ್ಯಗಳ ಸಂಗಮವಿಲ್ಲೆ,ಶಿಲ್ಪಾ  ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳ ಸಂಗಮವಿಲ್ಲೆ,ಶಿಲ್ಪಾ  ಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿಲ್ಲೆ, ಯತಿಗಳ ದಾಸರ ನೆಲೆನಾಡಿಲ್ಲೆ,
ಪಾವನ ಮಣ್ಣಿದು ಹಂಪೆಯದು, ಯುಗ ಯುಗ ಅಳಿಯದ ಕೀರ್ತಿ ಇದು...
ಕನ್ನಡ ಭೂಮಿ ...ಕನ್ನಡ ನುಡಿಯು .......  .ಕನ್ನಡ ಪ್ರೀತಿ.......  .ಎಂದೆಂದೂ ಬಾಳಲಿ.
ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಗೆಲ್ಗೆ...