Friday, May 20, 2011

ಶ್ರುತಿ ಸೇರಿದಾಗ : ನಗಲಾರದೇ

ಚಿತ್ರ: ಶ್ರುತಿ ಸೇರಿದಾಗ 
ಸಂಗೀತ: ಟಿ.ಜಿ.ಲಿಂಗಪ್ಪ 
ಸಾಹಿತ್ಯ: ಚಿ.ಉದಯ ಶಂಕರ್ 
ನಿರ್ದೇಶನ: ದತ್ತರಾಜ್ 
ಗಾಯಕರು: ಡಾ. ರಾಜಕುಮಾರ್

ನಗಲಾರದೇ............... ಅಳಲಾರದೇ..............ತೊಳಲಾಡಿದೆ ಜೀವಾ .......................
ನಗಲಾರದೇ,ಅಳಲಾರದೇ,ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ,ಮನದಾಳದಾ ನೋವಾ


ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ,ಏನೇನೋ ವೇಷ, ಮಾತಲ್ಲಿ ಮೋಸ'
ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ಬಣ್ಣ,ಏನೇನೋ ವೇಷ, ಮಾತಲ್ಲಿ ಮೋಸ'
ಆ ಮಾತನೆಲ್ಲಾ ನಿಜವೆಂದು ನಂಬಿ, ಆ ಮಾತನೆಲ್ಲಾ ನಿಜವೆಂದು ನಂಬಿ,
ಮನದಾಸೆಯೇ.............ಮಣ್ಣಾಯಿತೇ .................
ಮನದಾಸೆಯೇ,ಮಣ್ಣಾಯಿತೇ,ಮನ ನೆಮ್ಮದಿ ದೂರಾಯಿತೇ,...........


ನಗಲಾರದೇ,ಅಳಲಾರದೇ,ತೊಳಲಾಡಿದೆ ಜೀವಾ

ನಿಜವಾದ ಪ್ರೇಮ,ನಿಜವಾದ ಸ್ನೇಹ,ಅನುರಾಗವೇನೋ,ಬಲ್ಲೋರು ಇಲ್ಲಾ,
ನಿಜವಾದ ಪ್ರೇಮ,ನಿಜವಾದ ಸ್ನೇಹ,ಅನುರಾಗವೇನೋ,ಬಲ್ಲೋರು ಇಲ್ಲಾ,
ಬಾಳಲ್ಲೇ ನಟನೆ,ಹೀಗೆಕೋ ಕಾಣೆ,ಬಾಳಲ್ಲೇ ನಟನೆ,ಹೀಗೆಕೋ ಕಾಣೆ,
ಬದುಕಲ್ಲಿಯೇ............ಹುಡುಗಾಟವೇ.............,
ಬದುಕಲ್ಲಿಯೇ,ಹುಡುಗಾಟವೇ,ಈ ಆಟಕೆ ಕೊನೆಯಿಲ್ಲವೇ,..............


ನಗಲಾರದೇ,ಅಳಲಾರದೇ,ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ,ಮನದಾಳದಾ ನೋವಾ..............














ಅಮೃತ ಘಳಿಗೆ :ಹಿಂದುಸ್ಥಾನವು ಎಂದು ಮರೆಯದ

ಚಿತ್ರ: ಅಮೃತ ಘಳಿಗೆ
ಸಂಗೀತ: ವಿಜಯನಾರಸಿಂಹ 
ಸಾಹಿತ್ಯ: ವಿಜಯನಾರಸಿಂಹ
ನಿರ್ದೇಶನ: ಕಣಗಾಲ್ ಪುಟ್ಟಣ್ಣ 
ಗಾಯಕರು: ಜಯಚಂದ್ರನ್

ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ ,
ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ,
ಈ ಕನ್ನಡ ಮಾತೆಯ ಮಡಿಲಲ್ಲಿ ,ಈ ಕನ್ನಡ ನುಡಿಯ ಗುಡಿಯಲ್ಲಿ 
ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ 


ದೇಶ ಭಕ್ತಿಯಾ,ಬಿಸಿ,ಬಿಸಿ,ನೆತ್ತರು ಧಮನಿ,ಧಮನಿಯಲಿ ತುಂಬಿರಲಿ,
ದೇಶ ಭಕ್ತಿಯಾ,ಬಿಸಿ,ಬಿಸಿ,ನೆತ್ತರು ಧಮನಿ,ಧಮನಿಯಲಿ ತುಂಬಿರಲಿ,
ವಿಶ್ವ ಪ್ರೇಮದಾ ಶಾಂತಿ ಮಂತ್ರದ ಘೋಷಣೆ ಎಲ್ಲೆಡೆ ಮೊಳಗಿಸಲಿ 
ಸಕಲ ಧರ್ಮದ ಸತ್ವ ಸಮನ್ವಯ,ಸತ್ಯ ಜೋತಿಯ ಬೆಳಗಿಸಲಿ 


ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ 

ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ,
ಕನ್ನಡ ನಾಡಿನ ಎದೆ ಎದೆಯಲ್ಲೂ ಕನ್ನಡ ವಾಣಿಯ ಸ್ಥಾಪಿಸಲಿ,
ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲ್ಲಿ ಕೆತ್ತಿಸಲಿ 


ಹಿಂದುಸ್ಥಾನವು ಎಂದು ಮರೆಯದ,ಭಾರತ ರತ್ನವು ಜನ್ನಿಸಲಿ 
ಈ ಕನ್ನಡ ಮಾತೆಯ ಮಡಿಲಲ್ಲಿ ,ಈ ಕನ್ನಡ ನುಡಿಯ ಗುಡಿಯಲ್ಲಿ 
ಹಿಂದುಸ್ಥಾನವು ಎಂದು ಮರೆಯದ ,ಭಾರತ ರತ್ನವು ಜನ್ನಿಸಲಿ 


Thursday, May 19, 2011

ಬೆಳ್ಳಿ ಕಾಲುಂಗುರ :ಒಂದೇ ಒಂದು ಕಣ್ಣಾ ಬಿಂದು

ಚಿತ್ರ: ಬೆಳ್ಳಿ ಕಾಲುಂಗುರ
ಸಂಗೀತ: ಹಂಸಲೇಖ 
ಸಾಹಿತ್ಯ: ಹಂಸಲೇಖ
ನಿರ್ದೇಶನ: ಕೆ.ವಿ.ರಾಜು 
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಮ್

ಒಂದೇ ಒಂದು ಕಣ್ಣಾ  ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,ಚಿಂತೆಯ ಹಿಂದೆಯೇ ಸಂತಸ ಇರಲು
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲೇ ನಿನ್ನಾ ಮನ ದೂಡಿದರೆ ನಿನ್ನಾಣೆ
ನೋವಿನ ಬಾಳಿಗೆ,ಧ್ಯರ್ಯವೇ ಗೆಳೆಯಾ,ಪ್ರೇಮದ ಜೋಡಿಗೆ,ತಾಕದು ಪ್ರಳಯಾ,
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ,
ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ,
ದಾರಿ ತೋರೋ ನಾಯಕ ಒಂಟಿ ಎಂದು ಕೊಂಡರೆ,
ಧ್ಯರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ,
ಸೂರ್ಯನಿಲ್ಲ ಪೂರ್ವದಲ್ಲಿ,ಚಂದ್ರನಿಲ್ಲ ರಾತ್ರಿಯಲಿ,
ದಾರಿಯಿಲ್ಲ ಕಾಡಿನಲ್ಲಿ,ಆಸೆಯಿಲ್ಲ ಬಾಳಿನಲಿ,
ನಂಬಿಕೆ ತಾಳುವ,ಅಂಜಿಕೆ ನೀಗುವಾ,ಶೋಧನೆ ಸಮಯ,ಚಿಂತಿಸಿ ಗೆಲ್ಲುವಾ,

ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ

ಮೂಡಣದಿ ಮೂಡಿ ಬಾ, ಸಿಂದೂರವೇ ಆಗಿ ಬಾ,
ಜೀವಧಾರೆ ಆಗಿ ಬಾ,ಪ್ರೇಮ ಪುಷ್ಪ ಸೇರು ಬಾ,
ಬಾನಗಳ ತುಂಬಿ ಬಾ,ಆಸೆಗಳ ತುಂಬು ಬಾ,
ಸಿಂಗಾರವೇ ತೇಲಿ ಬಾ,ಸಂತೋಷವಾ ನೀಡು ಬಾ,
ಪ್ರೇಮದಾಸೆ ನನ್ನಾ ನಿನ್ನಾ ಬಂದಿಸಿದೆ ನನ್ನಾಣೆ,
ಸಂತಸದ ಕಣ್ಣಾ ರೆಪ್ಪೆ ಸಂದಿಸಿದೆ ನನ್ನಾಣೆ,
ದೇವರ ಗೂಡಿಗೂ ಬಿನ್ನಗಳಿರಲು,ಬಾಳಿನ ನಡೆಗೂ ಅಡ್ಡಿಗಳಿರಲು,
ಭೂಮಿಯಾಗಿ ನಾನಿರುವೆ,ಚಿಂತೆ ಬೇಡ ನನ್ನಾಣೆ,
ನಿನ್ನಾ ನೋವ ಮೇರುಗಿರಿಯ,ನಾ ಹೊರುವೆ ನಿನ್ನಾಣೆ