Monday, November 15, 2010

ಶಾಪ

ಯಾರ ಶಾಪವೋ ಏನೋ ಕಾಣೆ
ನನಗಾಗಿದೆ ಇಂದು ವಂಚನೆ
ಮುಗಿಲ ತಾರೆಯ ಹಾಗೆ ಬಂದು
ಕಂಗೊಳಿಸದೆ ಮರೆಯಾಗಿಹೆ ಇಂದು

ಸರ್ವ ಋತುಗಳ ನಡುವೆ
ಮನದ ಬಯಕೆಯ ಪ್ರೀತಿಗೆ
ತಂಪೆರೆಯಲು ಹೋಗಿ
ಮೋಸವೆಂಬ ಬಲೆಯಲ್ಲಿ ಸಿಲುಕಿದೆನಿಂದು

ಬರಿ ವೇದನೆಯು ಎದೆ ತುಂಬಾ ತುಂಬಿ
ಮೂಕವಾಗಿದೆ ಈ ನನ್ನ ಮನವು
ನೊಂದು ಬೆಂದ ಮನಕೆ ಸಾಂತ್ವನ ಹೇಳುವ
ದನಿಯ ಹುಡುಕುತ ಹೊರಟಿಹೆ ನಾನಿಂದು

ನನ್ನ ಮನದಾಳದ ಮಾತನ್ನು ಹೇಳಲು
ಯಾರಿಲ್ಲ ನನಗೆ ನನ್ನವರೆಂದು ....
ಇದ ತಿಳಿದು ಚಾಚಿಹಳು ಭೂದೇವಿ  ತನ್ನ ಹಸ್ತವಾ
ನಿನ್ನ ಜೊತೆ ಸದಾ ನಾನಿರುವೆನೆಂದು 

Tuesday, November 9, 2010

ತಂಪಿನ ತಂಗಾಳಿ

ಮುಸ್ಸಂಜೆ ತಂಪಿನ ತಂಗಾಳಿಯಲ್ಲಿ
ವಿಹಾರ ಮಾಡಲೆಂದು ಬಂದ ಕೋಗಿಲೆ 
ನನ್ನೆದುರಲಿ ಯಾವಾಗ ನೀ ಬರುವೆ
ನಿನಗಾಗಿ ಒಬ್ಬನೇ ಕಾದು ಕಾದು
ಬಳಲಿ ಬೆಂಡಾಗಿ ಸೋತು ಹೋಗಿರುವೆ

ಹಸುರಿನ ಬನದಲಿ ಬಣ್ಣದ ಚಿಟ್ಟೆಯಂತೆ
ಹೂವಿನ ಮಕರಂದವ ಹೀರುತ್ತಾ
ಸ್ವಚಂದವಾಗಿ ಹಾರಡಿಕೊಂಡಿದ್ದ
ನಿನ್ನನ್ನು  ನೋಡಿದಾಗ ಪುಳಕಿತನಾದೆ

ಆ ನೀಲಾಕಾಶದ ಬೆಳಕಿನ ಅಂದದಲ್ಲಿ
ನಿನ್ನ ಸುಂದರ ರೂಪವನ್ನು ಕಂಡಾಗ
ಮೈರೋಮಾಂಚನಗೊಂಡು ನನ್ನೇ ನಾ ಮರೆತೆ

ಹೂವಿನಲಿ ತುಂಬಿರುವ  ಮಕರಂದವನ್ನು
ದುಂಬಿಯು ತನ್ನೆಡೆಗೆ ಸೆಳೆದ ಹಾಗೆ
ನನ್ನ ಮನಸ್ಸೆಂಬ ಹೂಗುಚ್ಚದಲ್ಲಿ
ದುಂಬಿಯಾಗಿ ಬಂದು ಮದುರವಾದ
ನನ್ನ ಮನಸ್ಸಿನ ಬಾವನೆಗಳನ್ನು ಹೀರಿ
ಪ್ರಕೃತಿಯ ಮಡಿಲಿನಲ್ಲಿ ನೀ ಕಾಣದೆ ಹೋದೆಯಾ

ಬಾ ನಿನ್ನ ಬರುವಿಕೆಗಾಗಿ ಪರಿತಪಿಸುತ್ತಿರುವೆ
ಮರಳಿ ಬಂದು ನನ್ನ ಮನಸ್ಸಿನ ಬಾವನೆಗಳಿಗೆ
ನೀರೆರೆದು ಪೋಷಿಸಿ ,ನನ್ನ ಬದುಕನ್ನು ಸಾರ್ಥಕವನ್ನಗಿಸು .

Tuesday, November 2, 2010

ಜನ-ಜೀವನ

ಈ ಪದವನ್ನು ಯಾರು  ಯಾಕೆ ಬಳಸಿದರೋ ತಿಳಿಯದು.ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ತರಹದ ಏರಿಳಿತಗಳು ಕಾಣಬರುತ್ತವೆ, ಉದಾ:ಕಷ್ಟ,ಸುಖ,ದುಃಖ,ನೋವು,ನಲಿವು,ಸಂತಸ ಮುಂತಾದವುಗಳು.
ಅದರಲ್ಲಿ ಕೆಲವರು ತಮ್ಮ ಸ್ವಾರ್ಥಕೊಸಕರ ಇನ್ನೊಬ್ಬರ ಜೀವನದಲ್ಲಿ ಇಲ್ಲದ,ಸಲ್ಲದ ಆರೋಪಗಳನ್ನೂ ಹೊರಿಸಿ,ಏನು ಗೊತ್ತಿಲ್ಲದಂತೆ ಹಿಂದೆ ನಿಂತು ಸಂತೋಷ  ಪಡುತ್ತಾರೆ.ಈ ತರಹದ ಸ್ವಾರ್ಥದಿಂದ ಅವರು ಏನನ್ನು ಸಾದಿಸುತ್ತರೋ ತಿಳಿಯದು.ಇಲ್ಲಿ ಒಂದು ಮಾತನ್ನು ಹೇಳಲು ಇಚ್ಚಿಸುತೇನೆ ಗೆಳೆಯರೇ ,ಆದೇನೆಂದರೆ ಈ ತರಹದ ಜನರು ಏನೇ ಮಾಡಿದರು ಅವರು ಮಾಡಿದ ಪಾಪ ಅವರ ಬೆನ್ನ ಹಿಂದೆಯೇ ಬರುವುದೆಂದು ದೊಡ್ಡವರು (ಹಿರಿಯರು)ಹೇಳಿದ್ದಾರೆಂದು ತಿಳಿಯದೆ ಹೋಗುತ್ತಾರೆ.
ಇನ್ನು ಕೆಲವರು ಜೊತೆಯಲ್ಲೇ ಇದ್ದು ಅವರ ಜೊತೆ ಚನ್ನಗಿರುವಂತೆ ನಟಿಸಿ , ಬೆನ್ನ ಹಿಂದೆ ಚೂರಿ ಹಾಕಿ (ಮೋಸ ಮಾಡಿ) ತನಗೇನು ತಿಳಿಯದಂತೆ ಸುಮ್ಮನಿದ್ದುಬಿಡುತ್ತಾರೆ.ಇಂಥವರನ್ನು ನಯವಂಚಕರು ಎಂದರೆ ತಪ್ಪಾಗಲಾರದು .
ಈ ರೀತಿ ಬೇರೆಯವರನ್ನು ಹಿಂಸಿಸಿ ತಾವು ಆನಂದ ಪಡುವ ಮಂದಿಗೆ ಮುಂದೆ ತಮಗೂ ಇಂತಹ ಪರಿಸ್ಥಿತಿ ಬರಬಹುದೆಂಬ ಅರಿವು ಅವರಿಗಿರುವುದಿಲ್ಲ ,ಇದರಿಂದ ಬೇರೆಯವರಿಗೆ ಎಷ್ಟು ನೋವಗಬಹುದೆಂದು ನೀವೇ ಊಹಿಸಿ .
ಇನ್ನು ಕೆಲವರು ಸಂತೋಷದಿಂದ ಜೀವನ ಸಾಗಿಸುವವರನ್ನು ನೋಡಿರುತೇವೆ . ಅವರು ಯಾರು ಏನೇ ಅಂದರು ಅದರ ಬಗ್ಗೆ ಕಿವಿಗೊಡದೆ (ತಲೆ ಕೆಡಿಸಿಕೊಳ್ಳದೆ )ತಮ್ಮದೇ ಆದ ನಿರ್ಧಿಷ್ಟ ಗುರಿಯತ್ತ ತಮ್ಮ ಗಮನವನ್ನು ಕೇಂದ್ರಿಕರಿಸಿ ,ಏನೇ ಆಡೆತಡೆಗಳಿದ್ದರೂಆದನ್ನು ಮೀರಿ ನಿಂತು ತಮ್ಮ ಗುರಿಯನ್ನು ತಲುಪಿ ,ಜೀವನದಲ್ಲಿ ಈ ರೀತಿಯು ಸಂತೋಷದಿಂದ ಇರಬಹುದೆಂದು ತೋರಿಸಿಕೊಟ್ಟ ಉದಾಹರಣೆಗಳಿವೆ .
ಆದ್ದರಿಂದ ಸ್ನೇಹಿತರೇ ಜೀವನದಲ್ಲಿ ಏನೇ ಕಷ್ಟ ಬಂದರು ಅದನ್ನು ಧ್ಯರ್ಯದಿಂದ ಎದುರಿಸಿ ತಮ್ಮ ಬಗ್ಗೆ ಕೊಂಕು ಮಾತುಗಳನ್ನಾಡುವ ಬಾಯಿಗೆ ಬೀಗ ಹಾಕಿ ,ಸರಿಯಾದ ಪಾಠ ಕಲಿಸಬೇಕು .ಹಾಗಾದರೆ ಮಾತ್ರ ಜನರು ತಮ್ಮ ಜೀವನವನ್ನು ಸರಿಯಾದ ಮಾರ್ಗದಲ್ಲಿ ಮುನ್ನೆಡೆಸಲು ಸಾದ್ಯವಾಗುವುದು.

Friday, October 29, 2010

ಮುಂಜಾನೆಯ ಹುಡುಗಿ

ಮುಂಜಾನೆಯ ಮಂಜಿನ ಹನಿಯಲ್ಲಿ
ಒಂದು ಸುಂದರ ಹುಡುಗಿಯನ್ನು ಕಂಡಾಗ
ಆ ಕ್ಷಣ ಕರಗಿತು ನನ್ನ ಮನ

ಮುದುಡಿದ ತಾವರೆಯಂತೆ,
ಬೆಚ್ಚನೆಯ ಹೊದಿಕೆಯಲ್ಲಿ
ಮುಂಗುರುಳನ್ನು ಪಕ್ಕಕೆ ಸರಿಸುತ್ತಾ
ಇಣುಕಿ ನೋಡುತ್ತಲಿರುವ ನಿನ್ನ ನಯನಗಳು
ನನ್ನನೇ ಹುದುಕುತಿರುವಂತೆ ಬಾಸವಾಯಿತು

ಮುಖದಲ್ಲಿರುವ ಆ ಮುಗ್ದತೆ
ದಾರಿಯಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತ
ಕಾಲ್ಗೆಜ್ಜೆ ನಾದವನ್ನು ಹೊರ ಹೊಮ್ಮಿಸುತ
ಸಾಗುತಿರುವ ನಿನ್ನ ನಡಿಗೆಯನ್ನು ಕಂಡು
ನನ್ನನ್ನೇ ನಾ ಮರೆತೆ

ಹಚ್ಹ ಹಸುರಿನ ಗಿಡ ಮರಗಳ ನಡುವೆ
ರವಿಯು ಬಾನಂಗಳದಲ್ಲಿ ಮೂಡಿ
ತನ್ನ ಕಾಂತಿಯಿಂದ ವಸುಂಧರೆಯನ್ನು ಬೆಳಗಿಸಿದಾಗ
ಆ ಕಾಂತಿಯ ನಡುವೆ ಹುಣ್ಣಿಮೆಯ ಬೆಳದಿಂಗಳಿನಂತೆ ಹೊಳೆಯುತ್ತಿರುವ
ನಿನ್ನ ಮೊಗವನ್ನು ಕಂಡು ನಾ ಮೂಕವಿಸ್ಮಿತನದೆ

Tuesday, October 26, 2010

ಬಯಲುದಾರಿ: ಎಲ್ಲಿರುವೆ, ಮಾನವ ಕಾಡುವ

ಚಿತ್ರ: ಬಯಲುದಾರಿ
ಸಾಹಿತ್ಯ:ಚಿ.ಉದಯಶಂಕರ್
ಸಂಗೀತ:ರಾಜನ್ ನಾಗೇಂದ್ರ
ನಿರ್ದೇಶನ:ದೊರೈ -ಭಗವಾನ್
ಗಾಯಕರು:ಎಸ್.ಪಿ.ಬಾಲಸುಬ್ರಮಣ್ಯಂ 


ಎಲ್ಲಿರುವೆ,ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ, ಮನವ ಕಾಡುವ ರೂಪಸಿಯೇ

ತೇಲುವ ಈ ಮೂಡದ ಮೇಲೆ, ನೀನಿಂತ ಹಾಗಿದೆ
ನಸುನಗುತ, ನಲಿನಲಿದು, ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ, ಎಂದು ಹೇಳಿದಂತಿದೆ
ತನುವೆಲ್ಲ,ಹಗುರಾಗಿ,ತೇಲಾಡುವಂತಿದೆ,ಹಾಡುವಂತಿದೆ

ಚೆಲುವೆ, ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ ಮನವ ಕಾಡುವ ರೂಪಸಿಯೇ

ಕಣ್ಣಲ್ಲೇ ಒಲವಿನ ಗೀತೆ,ನೀನು ಹಾಡಿದಂತಿದೆ
ನಿನ್ನಾಸೆ, ಅತಿಯಾಗಿ,ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೋ, ಭಾಗ್ಯನನ್ನದಾಗಿದೆ
ಚಂದ್ರಿಕೆಯ, ಚೆಲುವಿಂದ, ಬಾಳು ಭವ್ಯವಾಗಿದೆ,ಭವ್ಯವಾಗಿದೆ

ನಲ್ಲೇ,ಎಲ್ಲಿರುವೆ, ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ ಮನವ ಕಾಡುವ ರೂಪಸಿಯೇ

ನ್ಯಾಯವೇ ದೇವರು: ಆಕಾಶವೇ ಬೀಳಲಿ ಮೇಲೆ

ಚಿತ್ರ: ನ್ಯಾಯವೇ ದೇವರು
ಸಾಹಿತ್ಯ:ಚಿ.ಉದಯಶಂಕರ್
ಸಂಗೀತ:ರಾಜನ್-ನಾಗೇಂದ್ರ
ಗಾಯನ:ಪಿ .ಬಿ ಎಸ್
ನಿರ್ದೇಶನ:ಸಿದ್ದ್ದಲಿಂಗಯ್ಯ


ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು


ಹೆದರಿಕೆಯ ನೋಟವೇಕೆ,ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ,ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನೇಡೆವೆ
ನೀ ಅಡಿಯ ಇಡುವೆಡೆಯಲ್ಲಿ ಒಲವಿನ ಹೂ ಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ  ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯಾ ಚೆಲ್ಲು ಚೆಲುವೆ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು

ಹಸೆಮಣೆಯೂ ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳಾ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ


ಕನ್ನಡ ಚಿತ್ರಗೀತೆಗಳು