Monday, July 10, 2017

ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು

ಗಂಡು: ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು
ಹೆಣ್ಣು: ನನ್ನ ತುಂಬ ನೀನೆ, ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು, ಮನಸು ಕೊಡುವುದೇನು
ಗಂಡು: ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು

ಹೆಣ್ಣು: ಒಲವನು ತೋರಿದೆ, ಕಣ್ಣಲ್ಲೆ ಬಾ ಎಂದು ಕರೆದೆ
ಮಾತು ನಂಬಿದೆ, ನಿನ್ನನ್ನು ಸೇರಿದೆ
ಬೇರೇನು ಕಾಣೇ ನಾನು ಪ್ರೀತಿ ಅಲ್ಲದೆ
ಗಂಡು: ಆ ಹಾ ಹ ಹಾ  
ಹೆಣ್ಣು: ಆ ಹಾ ಹ ಹಾ
ಗಂಡು:ಕಾಣದ ಅನುಭವ, ನಿನ್ನಿಂದ ನಾ ಹೊಂದಿ ಇಂದು
ಸಂತೋಷವಾಗಿದೆ ಸಂಕೋಚ ಓಡಿದೆ
ನಿನ್ನಾಸೆ ಹೇಳೋ ಕಾಲ ಕೂಡೀ ಬಂದಿದೆ
ನಿನ್ನಾಸೆ ಹೇಳೋ ಕಾಲ ಕೂಡೀ ಬಂದಿದೆ
ಗಂಡು: ಆ ಹಾ ಹ ಹಾ  
ಹೆಣ್ಣು: ಆ ಹಾ ಹ ಹಾ
 ಹೆಣ್ಣು: ಈ ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಗಂಡು: ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು

ಗಂಡು: ನಾಚಿಕೆ ಎನ್ನುತ, ನಿನ್ನಾಸೆ ಎಲ್ಲವ ನುಡಿದೆ
ನನ್ನೆದೆಯ ವೀಣೆಯ, ಹಿತವಾಗಿ ಮೀಟಿದೆ
ಹೊಸ ರಾಗ ತಾನ ಪಲ್ಲವಿ ಇಂದು ನುಡಿಸಿದೆ
ಹೆಣ್ಣು: ಆ ಹಾ ಹ ಹಾ  
ಗಂಡು:  ಆ ಹಾ ಹ ಹಾ
ಹೆಣ್ಣು: ಏನನು ಅರಿಯದ, ಹೆಣ್ಣಲ್ಲಿ ನಿನ್ನಾಸೆ ತಂದೆ
ನನ್ನುಸಿರ ರಾಗಕೆ, ನನ್ನೆದೆಯ ತಾಳಕೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ
ಹೊಸಬಾಳ ಗೀತೆ ಇಂದು ನೀನು ಹಾಡಿದೆ

ಗಂಡು:  ಬಿಂಕ ಬಿಡು ಬಿಡು, ನಾ ನಿನ್ನ ಬಲ್ಲೆನು
ಹೆಣ್ಣು: ಮನಸನ್ನು ಕೊಡು ಕೊಡು, ನಾನಲ್ಲಿ ನಿಲ್ಲುವೆನು
ಗಂಡು: ನನ್ನ ತುಂಬ ನೀನೆ, ತುಂಬಿ ಕೊಂಡ ಮೇಲೆ
ಹೆಣ್ಣು: ಇನ್ನು ನನ್ನದೇನು, ಮನಸು ಕೊಡುವುದೇನು

ಇಬ್ಬರು: ಲ ಲ ಲಾ  ಲ ಲ ಲಾ ಲಾ ಲಾ ಲಾ ಲಾ 
ಲ ಲ ಲಾ  ಲ ಲ ಲಾ ಲಾ ಲಾ ಲಾ ಲಾ


7 comments:

  1. Please add below lyrics to your blog.

    ರಾಜ ನನ್ನ ರಾಜ: ನೂರು... ಕಣ್ಣು ಸಾಲದು...

    ಚಿತ್ರ: ರಾಜ ನನ್ನ ರಾಜ
    ನಿರ್ದೇಶಕರು: A.V. ಶೇಷಗಿರಿ ರಾವ್
    ಸಂಗೀತ: G.K. ವೆಂಕಟೇಶ್
    ಸಾಹಿತ್ಯ: ಚಿ. ಉದಯ್ ಶಂಕರ್
    ಗಾಯಕರು: P.B. ಶ್ರೀನಿವಾಸ್ ಮತ್ತು S.P. ಬಾಲಸುಬ್ರಮಣಿಯಂ
    ----------------------------------------------
    SPB: ನೂರು... ಕಣ್ಣು ಸಾಲದು...
    ನೂರು... ಕಣ್ಣು ಸಾಲದು, ನಿನ್ನ ನೋಡಲು ...
    ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು...

    ನೂರು ಕಣ್ಣು ಸಾಲದು ನಾ ನಿನ್ನ ನೋಡಲು
    ನೂರಾರು ಮಾತು ಸಾಲದು ಈ ಅಂದ ಬಣ್ಣಿಸಲು
    ನೂರು ಕಣ್ಣು ಸಾಲದು...

    ಯಾರ ಕನಸ ಕನ್ಯೆಯೋ... ಶೃಂಗಾರ ಕಾವ್ಯವೋ
    ಯಾರ ಕನಸ ಕನ್ಯೆಯೋ, ಶೃಂಗಾರ ಕಾವ್ಯವೋ...
    ಈ ಹೊಳೆವ ಕಣ್ಣ ನೋಟ…
    ಮುಂಗುರುಳ ತೂಗುವಾಟ...
    ಈ ಚೆಲುವ ಮೈಯ್ಯಾ ಮಾಟ....
    ಬಂಗಾರದ, ಸಿಂಗಾರಿ ಕಂಡು ಮೂಕನಾದೆನೂ...
    -------------------
    PBS: ಜನುಮ ಜನುಮದಲ್ಲೂ... ನೀ ನನ್ನವಳೇನೇ...
    ಜನುಮ ಜನುಮದಲ್ಲೂ... ನೀ ನನ್ನವಳೇನೇ...
    ನೂರು… ವರುಷವಾಗಲಿ ಮರೆಯಲಾರೆನು
    ಎಂದೆಂದೂ ನಿನ್ನ ಆಗಲಿ ನಾ ದೂರ ಹೋಗೆನು…
    ನೂರು ವರುಷವಾಗಲಿ...

    ಜನುಮ ಜನುಮದಲ್ಲೂ... ನೀ ನನ್ನವಳೇನೇ...
    ಜನುಮ ಜನುಮದಲ್ಲೂ... ನೀ ನನ್ನವಳೇನೇ...
    ಈ ನೋವ ತಿಳಿಯಲಾರೆ...
    ನೀ ನನ್ನ ಅರಿಯಲಾರೆ…
    ನೀನಿರದೆ ಬಾಳಲಾರೆ...
    ನಾನೆಲ್ಲಿರಲಿ ನೀನೆ ನನ್ನ ಜೀವದ ಜೀವ...

    ನೂರು ವರುಷವಾಗಲಿ ಮರೆಯಲಾರೆನು
    ಎಂದೆಂದೂ ನಿನ್ನ ಆಗಲಿ ನಾ ದೂರ ಹೋಗೆನು…
    ನೂರು ವರುಷವಾಗಲಿ...

    ReplyDelete
  2. I unquestionably getting a charge out of each and every piece of it. It is an incredible site and decent offer. I need to bless your heart. Great job! You folks complete an incredible blog, and have some awesome substance. Keep doing awesome.
    tamil mp3 songs download | telugu songs download

    ReplyDelete
  3. Impressive post, I love the way lyrics is written. Appreciating your hard work! Please check out my website Panda-Now!, Thank You:)

    ReplyDelete
  4. Wow very good post dear, this is my blog:) Panda-Now!

    ReplyDelete