Thursday, November 5, 2015

ಆಕಸ್ಮಿಕ : ಬಾಳುವಂಥ ಹೂವೆ

ಚಿತ್ರ: ಆಕಸ್ಮಿಕ 
ಸಂಗೀತ: ಹಂಸಲೇಖ 
ಸಾಹಿತ್ಯ: ಹಂಸಲೇಖ
ನಿರ್ದೇಶನ: ಟಿ ಎಸ್ ನಾಗಾಭರಣ 
ಗಾಯಕರು: ಡಾ ರಾಜಕುಮಾರ್ 


ಬಾಳುವಂಥ ಹೂವೆ ಬಾಡುವಾಸೆ ಏಕೆ

ಬಾಳುವಂಥ ಹೂವೆ ಬಾಡುವಾಸೆ ಏಕೆ 
ಹಾಡುವಂಥ ಕೋಗಿಲೆ ಅಳುವ ಅಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೇ
ಅವಳಿ ದೋಣಿ  ಮೇಲೆ ಯಾನ ಯೋಗ್ಯವೇ

ಬಾಳುವಂಥ ಹೂವೆ ಬಾಡುವಾಸೆ ಏಕೆ 
ಹಾಡುವಂಥ ಕೋಗಿಲೆ ಅಳುವ ಅಸೆ ಏಕೆ

ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು ,ವ್ಯರ್ಥ ವ್ಯಸನದಿಂದಾ ಸಿಹಿಯೂ ಕೂಡ ಬೇವು
ಬಾಳು ಒಂದು ಸಂತೆ, ಸಂತೆ ತುಂಬಾ ಚಿಂತೆ ,ಮಧ್ಯ ಮದಗಳಿಂದಾ ಚಿಂತೆ ಬೆಳೆವುದಂತೆ
ಅಂಕೆ ಇರದ ಮನಸನು ದಂಡಿಸುವುದು ನ್ಯಾಯ ,ಮೂಕ ಮುಗ್ಧ ದೇಹವಾ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೇ ತುಂಬು ಧೋಣಿ ತಳ ಸೇರಲು ,
ಸಣ್ಣ ಅಳುಕು ಸಾಲದೇ ತುಂಬು ಬದುಕು ಬರಡಾಗಲು

ಬಾಳುವಂಥ ಹೂವೆ ಬಾಡುವಾಸೆ ಏಕೆ, ಹಾಡುವಂಥ ಕೋಗಿಲೆ ಅಳುವ ಅಸೆ ಏಕೆ

ಬಾಳ ಕದನದಲ್ಲಿ ಭರವಸೆಗಳು ಬೇಕು, ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವನಿಗೆ ಆದ್ಯತೆ ,ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು ಇದ್ದು ಜೈಸಬೇಕು ,ನಾಗರಿಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲೀ  ಜನರನೇಕೆ ನೀ ನೋಡುವೆ
ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೇ

ಬಾಳುವಂಥ ಹೂವೆ ಬಾಡುವಾಸೆ ಏಕೆ, ಹಾಡುವಂಥ ಕೋಗಿಲೆ ಅಳುವ ಅಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೇ, ಅವಳಿ ದೋಣಿ  ಮೇಲೆ ಯಾನ ಯೋಗ್ಯವೇ
ಬಾಳುವಂಥ ಹೂವೆ ಬಾಡುವಾಸೆ ಏಕೆ, ಹಾಡುವಂಥ ಕೋಗಿಲೆ ಅಳುವ ಅಸೆ ಏಕೆ

No comments:

Post a Comment