Wednesday, November 4, 2015

ರಾಮಾಚಾರಿ : ಯಾರಿವಳು ಯಾರಿವಳು


ಚಿತ್ರ: ರಾಮಾಚಾರಿ 
ಸಂಗೀತ: ಹಂಸಲೇಖ 
ಸಾಹಿತ್ಯ: ಹಂಸಲೇಖ
ನಿರ್ದೇಶನ: ಡಿ. ರಾಜೇಂದ್ರಬಾಬು 
ಗಾಯಕರು: ಮನು


ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ  ತೋಟದಲ್ಲಿ ಘಮ್ಮನೆಂದು ಅರಳಿದಳು
ಮಾತಿನಲ್ಲಿ ಹೇಳಿದರೆ ತಾಳಕೆ ಸಿಗದು ,ಹಾಡಲಿ ಕೇಳು ಅಂದದ ಸಾಲು
ಮಾತಿನಲ್ಲಿ ಹೇಳಿದರೆ ತಾಳಕೆ ಸಿಗದು ,ಹಾಡಲಿ ಕೇಳು ಅಂದದ ಸಾಲು

ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು

ಶ್ರೀಗಂದ ಈ ಗೊಂಬೆ ಇವಳಿಗೇಕೆ ಗಂಧವೋ
ಬಂಗಾರ ಈ ಹೆಣ್ಣು ಇವಳಿಗೇಕೆ ವಡವೆಯೋ
ತಾರೆಗೇ, ಈ ತಾರೆಗೇ, ಈ ತಾರೆಗೇಕೆ ಮಿನುಗು ದೀಪವೋ
ಈ ಬೆಳಕಿಗೇಕೆ ಬಿರಿಸು ಬಾಣವೊ .......
ಕೆನ್ನೆ ಮೇಲೆ ಸೇಬಿದೆ, ಅಲ್ಲೇ ಗಿಳಿಯ ಮೂಗಿದೆ
ತೊಂಡೆ ಹಣ್ಣು ತುಟಿಯಲಿ, ದಾಳಿಂಬೆ ಕಾಳು ಬಾಯಲಿ
ಏನಿದು ಏನು ಮೋಜಿದು ಏನಿದೇನು ಮೋಜಿದು

ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು

ದಯಮಾಡಿ ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರು
ಸಾಲಾಗಿ ಮುಕ್ಕೋಟಿ ದೇವರುಗಳು ನಿಂತರು
ದೇವತೆ ಈ ದೇವತೆ ಈ ದೇವತೆಯ ಚೆಲುವ ನೋಡಲು
ಈ ಮಾಯಗಾತಿ ನಗುವ ಕಲಿಯಲು .....
ನೋಡಲಿವಳು ಹುಣ್ಣಿಮೆ ,ಬಿರಿಯಲಿವಳು ನೈದಿಲೆ
ಚಿಗುರು ಮಾವು ಬಯಸಿದೆ ,ಒಳಗೆ  ಕುಹೂ ದನಿಯಿದೆ
ಏನಿದು ಏನು ಮೋಜಿದು ಏನಿದೇನು ಮೋಜಿದು

ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
ಮಾತಿನಲ್ಲಿ ಹೇಳಿದರೆ ತಾಳಕೆ ಸಿಗದು ,ಹಾಡಲಿ ಕೇಳು ಅಂದದ ಸಾಲು
ಮಾತಿನಲ್ಲಿ ಹೇಳಿದರೆ ತಾಳಕೆ ಸಿಗದು ,ಹಾಡಲಿ ಕೇಳು ಅಂದದ ಸಾಲು

ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು

1 comment: