Saturday, November 7, 2015

ಮಾಂಗಲ್ಯ ಭಾಗ್ಯ : ಆಸೆಯ ಭಾವಾ, ಒಲವಿನ ಜೀವಾ

ಚಿತ್ರ: ಮಾಂಗಲ್ಯ ಭಾಗ್ಯ
ಸಂಗೀತ:ರಾಜನ್ ನಾಗೇಂದ್ರ 
ಸಾಹಿತ್ಯ: ಚಿ. ಉದಯಶಂಕರ್ 
ನಿರ್ದೇಶನ:ರಾಜೇಂದ್ರ ಸಿಂಗ್ ಬಾಬು 
ಗಾಯಕರು: ಎಸ್  ಪಿ  ಬಿ

ಆಸೆಯ ಭಾವಾ ......... ಒಲವಿನ ಜೀವಾ ........ ಒಂದಾಗಿ ಬಂದಿದೆ
ಆಸೆಯ ಭಾವಾ, ಒಲವಿನ ಜೀವಾ, ಒಂದಾಗಿ ಬಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವಾ, ಒಲವಿನ ಜೀವಾ, ಒಂದಾಗಿ ಬಂದಿದೆ

ಕಾಮನ ಬಿಲ್ಲಿನಲಿ, ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವಾ ಚೆಲುವಿಕೆ ಇಲ್ಲಿದೆ
ಪ್ರೇಮದ ಸಿಮೇಯಲಿ, ಸೌರಭ ತುಂಬಿದಾ, ಬಾಡದ ಹೂವಿನಾ ಕಿರುನಗೆ ಚೆಲ್ಲಿದೆ...
ಬಾಳಿನ ಭಾಗ್ಯ ನೌಕೆ, ತೀರ ಸೇರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ, ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ

ಆಸೆಯ ಭಾವಾ, ಒಲವಿನ ಜೀವಾ, ಒಂದಾಗಿ ಬಂದಿದೆ

ಕಣ್ಣಿನ ಸನ್ನೆಯಲಿ, ಕಾವ್ಯವ ನೀ ಬರೆವೆ ,ಹೆಜ್ಜೆಯ ಭಾವಕೆ, ಹಂಸವೇ ನಾಚಿದೆ
ಗಾಳಿಯ ಬೀಸಿನಲಿ ಗಾನವು ನೀನಾದೆ, ನನ್ನೆದೆ ಸ್ಪಂದನಾ ನಿನ್ನದೇ ಚೇತನ
ಪ್ರೇಮದ ವೀಣೆಯಲ್ಲಿ ಜೀವ, ಭಾವ ನಾಟ್ಯವಾಡಿದೆ ...
ಜೀವನ ಜ್ಯೋತಿ ನೀಡುತಾ ಶಾಂತಿ ವೈಭೋಗ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ

ಆಸೆಯ ಭಾವಾ, ಒಲವಿನ ಜೀವಾ, ಒಂದಾಗಿ ಬಂದಿದೆ

ದೂರದ ಹೃದಯಗಳ ಸನಿಹದ ಬೇಗೆಯಲಿ, ವಿರಹದ ವೇದನೆ ಮುಗಿಲನು ಸೇರಿದೆ
ತೀರದ ದಾಹದಲಿ ಮೀರಿದ ಕಾತರಕೆ, ಮೇರೆಯೆ ಇಲ್ಲದಾ ತುಡಿತವು ತುಂಬಿದೆ
ಯಾವುದೋ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ
ಪ್ರೇಮದ ಜೋಡಿ, ಬಾಳಲಿ ಕೂಡಿ, ಹಾಯಾಗಿ ಹಾಡಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ

ಆಸೆಯ ಭಾವಾ, ಒಲವಿನ ಜೀವಾ, ಒಂದಾಗಿ ಬಂದಿದೆ





No comments:

Post a Comment