Wednesday, January 12, 2011

ಸೀತಾ : ಮದುವೆಯ ಈ ಬಂಧಾ

ಚಿತ್ರ: ಸೀತಾ
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ:R N  ಜಯಗೋಪಾಲ್
ನಿರ್ದೇಶನ: ವಾದಿರಾಜ್
ಗಾಯಕರು:S  P  ಬಾಲಸುಬ್ರಮಣ್ಯಂ

ಶುಭಾಶಯಾ .................ಶುಭಾಶಯಾ.................
ಮದುಮಗನಿಗೂ......ಮದುಮಗಳಿಗೂ .......ಶುಭಾಶಯಾ.....
ಹೊಸ ಹರೆಯದ ,ಹೊಸ ಜೋಡಿಗೆ ಶುಭಾಶಯ.......

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ


ಸವಿಯಾದ ಮಾತು , ಸಿಹಿಯಾದ ಊಟ ,ಸೊಗಸಾದ ನೋಟವಿರಲಿ
ಸವಿಯಾದ ಮಾತು , ಸಿಹಿಯಾದ ಊಟ ,ಸೊಗಸಾದ ನೋಟವಿರಲಿ
ಮನೆ ತುಂಬುವಂತ,ನಗೆ ಚೆಲ್ಲುವಂತ ,ಮುದ್ದಾದ ಮಗುವು ಬರಲಿ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ

ಮನಸನ್ನು ಅರಿತು, ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ಮನಸನ್ನು ಅರಿತು, ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ನೂರೊಂದು  ವರುಷ ,ಚೆಲ್ಲಿರಲಿ ಹರುಷ ,ಬೆಳಗಿರಲಿ ಒಲವ ಹಣತೆ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ

ಸಿರಿತನದ ಸಿಹಿಯು ,ಬಡತನದ ಕಹಿಯು ,ನಿಮಗೆಂದು ಒಂದೇ ಇರಲಿ
ಸಿರಿತನದ ಸಿಹಿಯು ,ಬಡತನದ ಕಹಿಯು ,ನಿಮಗೆಂದು ಒಂದೇ ಇರಲಿ
ಸಮನಾದ ಪ್ರೀತಿ, ತೋರುವುದೇ ರೀತಿ,ಬಿರುಗಾಳಿ ಏನೇ ಬರಲಿ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ  ತೀರದ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ.



5 comments:

  1. wonderful information, I had come to know about your blog from my friend nandu , hyderabad,i have read atleast 7 posts of yours by now, and let me tell you, your website gives the best and the most interesting information. This is just the kind of information that i had been looking for, i'm already your rss reader now and i would regularly watch out for the new posts, once again hats off to you! Thanks a ton once again, Regards, kannada songs

    ReplyDelete
  2. ಧನ್ಯವಾದಗಳು, ಈ ಕೊಡಿಗೆಗಾಗಿ

    ReplyDelete
  3. ತುಂಬಾ ಸಂತೋಷವಾಯಿತು ನಿಮ್ಮ ಈ ಕೊಡುಗೆ ಮೆಚ್ಚುವಂತಹದು

    ReplyDelete
  4. TODAY WE ARE LIVING IN RICHNESS AND COMFORTS AMIDST A DESERT TOTALLY BEREFT OF CULTURE

    ReplyDelete