Wednesday, December 7, 2016

ಶೃಂಗಾರ ಕಾವ್ಯ : ಜೀವನವೆಲ್ಲವೂ ನಾ ಹಾಡುವೆ

ಚಿತ್ರ: ಶೃಂಗಾರ ಕಾವ್ಯ 
ಸಂಗೀತ:ಹಂಸಲೇಖ 
ಸಾಹಿತ್ಯ: ಹಂಸಲೇಖ
ನಿರ್ದೇಶನ: ಎಸ್ ಮಹೇಂದರ್ 
ಗಾಯಕರು: ಎಸ್.ಪಿ.ಬಿ 

ಆ ಆ ಆ  ಹಾಹಾಹಾಹಾ ,ಆ ಆ ಆ  ಹಾಹಾಹಾಹಾ
ಲಲಲ ಲಲಲಲ ಲಲಲಲ ಲಾ ಲಾ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ

ಮಧುರ ಮಧುರವೀ  ಕನ್ನಡನಾಡ,ನುಡಿವ ಬಾಯಿಗಿದು ವೇದ
ವಿನಯ ವಿನಯವೀ ಕನ್ನಡ ಭಾವಾ, ಕರುಣೆ ನಾಡಿಗಿದು ಜೀವಾ
ಇಲ್ಲಿ ಬಾನಾಡಿ ನುಡಿಯುವ ಸ್ವರವೇ, ನನ್ನ ಪದವಾಗಿದೆ......... ಹೋ
ಇಲ್ಲಿ ಜನನಾಡಿ ಮೀಟುವ ಶ್ರುತಿಗೆ, ನನ್ನ ಪದ ಸೇರಿದೆ
ಧರಣೆ ಆಕಾಶ, ತೆರೆಸೋ ಆವೇಶ,ಧರಣೆ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು

ಜೀವನವೆಲ್ಲವೂ ನಾ ಹಾಡುವೆ, ಹಾಡಿನ ನೆರಳಲಿ  ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ

ಚಲುವೆ ಚಲುವೆ ಈ ಕೊಡಗಿನ ನಾರಿ, ಚಲುವಿಗಿವಳೇ  ಸರಿಸಾಟಿ   . . ಆಹಾ... ಓಹೋ
ಸುಮತಿ ಸುಮತಿ ಈ ನಾಡಿನ ಬೆಡಗಿ, ಇವಳಿಗ್ಯಾರು ಪೈಪೋಟಿ .... ಅಹಹಾ .... ಓಹೋಹೋ
ಇಂಥ ಊರಲ್ಲಿ  ಲಭಿಸಿದ ಸ್ನೇಹ, ಸ್ವರ್ಗ ಸನ್ಮಾನವೊ,...... ಹೋ
ಇಂಥ ಊರಲ್ಲಿ  ಫಲಿಸಿದ ಪ್ರೇಮ ಧೈವ ಸಾಕಾರವೋ,.......
ಧರಣೆ ಆಕಾಶ, ತೆರೆಸೋ ಆವೇಶ,ಧರಣೆ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು

ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಗುಂಗಲಿ  ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ  ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಋಣದಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ

No comments:

Post a Comment