Friday, February 18, 2011

ಸಂಪತ್ತಿಗೆ ಸವಾಲ್ : ನಗುವುದೋ,ಅಳುವುದೋ

ಚಿತ್ರ: ಸಂಪತ್ತಿಗೆ ಸವಾಲ್
ಸಂಗೀತ: ಜಿ .ಕೆ ವೆಂಕಟೇಶ್ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಎ.ವಿ.ಶೇಷಗಿರಿ ರಾವ್ 
ಗಾಯಕರು:ಪಿ.ಬಿ ಶ್ರೀನಿವಾಸ್ 


ನಗುವುದೋ,ಅಳುವುದೋ,ನೀವೇ ಹೇಳಿ ಇರುವುದೋ,ಬಿಡುವುದೋ,ಈ ಊರಿನಲ್ಲಿ,
ಈ ಜನರಾ ನಡುವೆ ನಾನು ಹೇಗೆ ಬಾಳಲಿ,ಅಳುವುದೋ,ನಗುವುದೋ,ಈಗ ಏನು ಮಾಡಲಿ 
ನಗುವುದೋ,ಅಳುವುದೋ,ನೀವೇ ಹೇಳಿ,ಇರುವುದೋ,ಬಿಡುವುದೋ,ಈ ಊರಿನಲ್ಲಿ,

ಬಡವರ ಕಂಬನಿಗೆ ಬೆಲೆಯೇ ಇಲ್ಲಾ,
ಧನಿಕರ ವಂಚನೆಗೆ  ಕೊನೆಯೇ ಇಲ್ಲಾ,
ತಳುಕಿನಾ ಮಾತುಗಳ ನಂಬುವರೆಲ್ಲ
ಸತ್ಯವನು ನುಡಿದಾಗ ಸಿಡಿಯುವರೆಲ್ಲಾ,
ದೂರ ತಳ್ಳುವರೆಲ್ಲಾ, ದೂರ ತಳ್ಳುವರೆಲ್ಲಾ


ನಗುವುದೋ,ಅಳುವುದೋ,ನೀವೇ ಹೇಳಿ ಇರುವುದೋ,ಬಿಡುವುದೋ,ಈ ಊರಿನಲ್ಲಿ,
ಈ ಜನರಾ ನಡುವೆ ನಾನು ಹೇಗೆ ಬಾಳಲಿ,ಅಳುವುದೋ,ನಗುವುದೋ,ಈಗ ಏನು ಮಾಡಲಿ
ನಗುವುದೋ,ಅಳುವುದೋ,ನೀವೇ ಹೇಳಿ 

ತಾಯಿಯೇ ಮಗನನ್ನು ನಂಬದೆ ಇರಲು,
ಅಣ್ಣನೇ ಮನೆಯಿಂದ ಹೊರಗೆ ತಳ್ಳಲು ,
ಕಾಲವೇ ಎದುರಾಗಿ ವ್ಯರಿಯಾಗಲು,

ಅತ್ತಿಗೆಯ ಕಂಗಳಲಿ ಕಂಡೆನು ನಾನು,
ಮಾತೃವಾತ್ಸಲ್ಯವನು,ಮಾತೃವಾತ್ಸಲ್ಯವನು.

ಅಳುವುದೋ,ನಗುವುದೋ,ಈಗ ಏನು ಮಾಡಲಿ ,ನಗುವುದೋ,ಅಳುವುದೋ,ನೀವೇ ಹೇಳಿ 

ಬಡ್ಡಿಯಾ ಹಣ ತಿಂದು ಬಡವರ ಕೊಂದು,
ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು,
ಹಾಕುವೆ ಸಂಪತ್ತಿಗೆ ನನ್ನ ಸವಾಲು,
ಸಿರಿತನದ ಗರ್ವವನು ಮೆಟ್ಟಿ ಮೆರೆಯುವೆ,
ನಿನ್ನ ಸೂಕ್ಕು ಮುರಿಯುವೆ,ನಿನ್ನ ಸೂಕ್ಕು ಮುರಿಯುವೆ

ನಗುವುದೋ,ಅಳುವುದೋ,ನೀವೇ ಹೇಳಿ, ಇರುವುದೋ,ಬಿಡುವುದೋ,ಊರಿನಲ್ಲಿ,
ಈ ಜನರಾ ನಡುವೆ ನಾನು ಹೇಗೆ ಬಾಳಲಿ ,ಅಳುವುದೋ,ನಗುವುದೋ,ಈಗ ಏನು ಮಾಡಲಿ
ನಗುವುದೋ,ಅಳುವುದೋ,ನೀವೇ ಹೇಳಿ



 

No comments:

Post a Comment