Wednesday, November 30, 2016

ಚಿತ್ರ: ಕನಸುಗಾರ :ಎಲ್ಲೋ ಅದು ಎಲ್ಲೋ

ಚಿತ್ರ: ಕನಸುಗಾರ 
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ ಕಲ್ಯಾಣ್ 
ನಿರ್ದೇಶನ: ಕರಣ್ 
ಗಾಯಕರು: ಎಸ್ .ಪಿ. ಬಿ 


ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 
ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

ಈ ಕಂಗಳ  ಗೂಡಿನಲ್ಲಿ, ಹೊಸ ರಾಗದ ಚಿಲಿಪಿಲಿಯೂ  
ಈ ಉಸಿರಿನ ಹಾಡಿನಲ್ಲಿ, ಅನುರಾಗದ ಕಚಗುಳಿಯೊ 
ನೆನಪೇ ನನ್ನ ಮೈ ಪುಳಕ, ನೆನಪೇ ನನ್ನ ಮೈ ಜಳಕ 
ನೆನಪೇ ನನ್ನ ಧನಕನಕ ,ನೆನಪೇ ಒಂದೇ ಕೊನೆತನಕ 

ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

ನಗೆಯ ಅಲೆಯಲ್ಲಿ, ನಿನ್ನ ನಗೆಯಾ ಸವಿನೆನಪು 
ಚಿಗುರೊ ಎಲೆಯಲ್ಲಿ ,ನಿನ್ನ ಲಜ್ಜೆಯ ಸವಿನೆನಪು 
ತಿಂಗಳ ಬೆಳಕಿನ ಸುಖದಲಿ ನಿನ್ನ ಮುಖದಾ ಸವಿನೆನಪು 
ರೆಪ್ಪೆ ತೆರೆಯುವಾ ನೆನಪೇ,  ಚೈತ್ರ ಮಾಸವು
ತುಟಿಯ ತೆರೆಯುವಾ, ನೆನಪೇ ಸುಪ್ರಭಾತವು 

ಯಾರೋ ಬರೆದೂರು ನನ್ನೆದೆಯಾ ಲಾಲಿ 
ಕೇಳೂ ಕ್ಷಣವೆಲ್ಲಾ ಸವಿನೆನಪಿನ ರಂಗೋಲಿ 

ಚಲಿಸೋ ಮೂಡದಲಿ ನಿನ್ನ ತಳುಕಿನ ಸವಿನೆನಪು 
ಊಕ್ಕೂ ಕಡಲಲ್ಲಿ ನಿನ್ನ ಆಸೆಯ ಸವಿನೆನಪು 
ಗುಡಿಯಲಿ ದೇವರ ದೀಪದಲಿ, ನಿನ್ನ ಪ್ರತಿರೂಪದ ನೆನಪು 
ಚೆಲುವು ತೆರೆಯುವಾ, ನೆನಪೇ ಪ್ರೇಮದರ್ಥವು 
ಹೃದಯ ತೆರೆಯುವಾ, ನೆನಪೇ ಬಾಳಿಗರ್ಥವು 

ಎಲ್ಲೋ ಅದು ಎಲ್ಲೋ, ಕಿವಿ ತುಂಬೊ  ರಾಗ
ಕೇಳೋ ಕ್ಷಣವೆಲ್ಲಾ, ಸವಿನೆನಪಿನ ಶುಭಯೋಗ 

ಈ ಕಂಗಳ  ಗೂಡಿನಲ್ಲಿ ,ಹೊಸ ರಾಗದ ಚಿಲಿಪಿಲಿಯೂ  
ಈ ಉಸಿರಿನ ಹಾಡಿನಲ್ಲಿ, ಅನುರಾಗದ ಕಚಗುಳಿಯೊ 
ನೆನಪೇ ನನ್ನ ಮೈ ಪುಳಕ, ನೆನಪೇ ನನ್ನ ಮೈ ಜಳಕ 
ನೆನಪೇ ನನ್ನ ಧನಕನಕ ನೆನಪೇ, ಒಂದೇ ಕೊನೆತನಕ 

ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

Friday, November 25, 2016

ಸಿಂಹಾದ್ರಿಯ ಸಿಂಹ: ಕಲ್ಲಾದರೆ ನಾನು

ಚಿತ್ರ: ಸಿಂಹಾದ್ರಿಯ ಸಿಂಹ
ಸಾಹಿತ್ಯ: ಎಸ್. ನಾರಾಯಣ್
ಸಂಗೀತ: ದೇವ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ


ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ
ಹುಲ್ಲಾದರೆ ನಾನು ಆ ತುಂಗೆಯ ದಡದಲಿ ನಲಿವೆ
ಮಳೆಯಾದರೆ ನಾನು ಮಲೆನಾಡಿನ ಮೈಯನು ತೊಳೆವೆ
ಹೊಳೆಯಾದರೆ ನಾನು ಆ ಜೋಗದ ಸಿರಿಯಲಿ ಮೇರೆವೆ
ಪದವಾದರೆ ನಾನು ಪಂಪನ ಪುಟದಲಿ ಮೆರೆವೆ
ದನಿಯಾದರೆ ನಾನು ಕೋಗಿಲೆ ದನಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ
ನುಡಿಯಾದರೆ ನಾನು ಸಿರಿಗನ್ನಡ ನುಡಿಯಾಗಿರುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ

ನೆನಪಾದರೆ ನಾನು ಹಂಪೆಯ ಚರಿತೆಯ ಬೆರೆವೆ
ಮಂಜಾದರೆ ನಾನು ಕೊಡಗಿನ ಶಿರದಲಿ ಮೆರೆವೆ
ಬೆಳಕಾದರೆ ನಾನು ಕರುನಾಡಿಗೆ ಕಿರಣವ ಸುರಿವೆ
ಸ್ವರವಾದರೆ ನಾನು ದಾಸರ ಕಂಠದಿ ನಲಿವೆ
ಖಡ್ಗವಾದರೆ ನಾನು ಚೆನ್ನವನ ಕರದಲಿ ಮೆರೆವೆ
ಮರವಾದರೆ ನಾನು ಓಬವ್ವನ ಒನಕೆಯ  ಬೆರೆವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ
ಏಳೇಳು ಜನ್ಮದಲೂ ಕನ್ನಡ ಕುಲವಾಗಿರುವೆ

ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ!