Saturday, December 10, 2016

ಆಪ್ತಮಿತ್ರ :ಕಾಲವನ್ನು ತಡೆಯೋರು

ಚಿತ್ರ: ಆಪ್ತಮಿತ್ರ 
ಸಂಗೀತ: ಗುರುಕಿರಣ್ 
ಸಾಹಿತ್ಯ: ಚಿ . ಉದಯಶಂಕರ್ 
ನಿರ್ದೇಶನ: ಪಿ . ವಾಸು 
ಗಾಯಕರು: ಹರಿಹರನ್ ,ಗುರುಕಿರಣ್ 

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನ, ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ

ಊರೊಂದು ಏತಕೆ ಬೇಕು, ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೇ,ನಮಗಿಲ್ಲಿ ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
ನಾ ಹೃದಯಾ ಕಡಿಯುವ ಕಳ್ಳಾ ,ಅನ್ಯಾಯ ಒಡೆಯುವ ಕುಳ್ಳಾ
ಜೊತೆಯಾಗಿ ನಾವು ಬಂದರೆ ಒಂದಾಗಿ ನಾವು ನಿಂತರೇ
ಎದುರಲ್ಲಿ ನಿಲ್ಲೋರು ಯಾರೂ

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, ದೂರ ಮಾಡಲು ಎಂದೂ ಆಗೊಲ್ಲಾ

ಏನೊಂದು ಕೆಳದು ನಮಗೆ, ಬೇರೇನೂ ಬೇಡವು ನಮಗೇ
ಈ ಸ್ನೇಹ ನಮಗೆ ದೇವರು,ಇನ್ನ್ಯಾರು ನಮಗೆ ಕಾಣರು
ನಮಗಿನ್ನೂ ಸರಿಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲಿ, ಈ ಪಯಣಾ ಸಾಗುತಲಿರಲಿ
ನಗುನಗುತಾ ಹೀಗೆ ಬಾಳುವಾ,ಒಂದಾಗಿ ಮುಂದೆ ಹೋಗುವಾ
ಹಾಯಾಗಿ ಜೊತೆಯಾಗಿ ನಾವು

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, ದೂರ ಮಾಡಲು ಎಂದೂ ಆಗೊಲ್ಲಾ

Wednesday, December 7, 2016

ಶೃಂಗಾರ ಕಾವ್ಯ : ಜೀವನವೆಲ್ಲವೂ ನಾ ಹಾಡುವೆ

ಚಿತ್ರ: ಶೃಂಗಾರ ಕಾವ್ಯ 
ಸಂಗೀತ:ಹಂಸಲೇಖ 
ಸಾಹಿತ್ಯ: ಹಂಸಲೇಖ
ನಿರ್ದೇಶನ: ಎಸ್ ಮಹೇಂದರ್ 
ಗಾಯಕರು: ಎಸ್.ಪಿ.ಬಿ 

ಆ ಆ ಆ  ಹಾಹಾಹಾಹಾ ,ಆ ಆ ಆ  ಹಾಹಾಹಾಹಾ
ಲಲಲ ಲಲಲಲ ಲಲಲಲ ಲಾ ಲಾ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ

ಮಧುರ ಮಧುರವೀ  ಕನ್ನಡನಾಡ,ನುಡಿವ ಬಾಯಿಗಿದು ವೇದ
ವಿನಯ ವಿನಯವೀ ಕನ್ನಡ ಭಾವಾ, ಕರುಣೆ ನಾಡಿಗಿದು ಜೀವಾ
ಇಲ್ಲಿ ಬಾನಾಡಿ ನುಡಿಯುವ ಸ್ವರವೇ, ನನ್ನ ಪದವಾಗಿದೆ......... ಹೋ
ಇಲ್ಲಿ ಜನನಾಡಿ ಮೀಟುವ ಶ್ರುತಿಗೆ, ನನ್ನ ಪದ ಸೇರಿದೆ
ಧರಣೆ ಆಕಾಶ, ತೆರೆಸೋ ಆವೇಶ,ಧರಣೆ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು

ಜೀವನವೆಲ್ಲವೂ ನಾ ಹಾಡುವೆ, ಹಾಡಿನ ನೆರಳಲಿ  ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ

ಚಲುವೆ ಚಲುವೆ ಈ ಕೊಡಗಿನ ನಾರಿ, ಚಲುವಿಗಿವಳೇ  ಸರಿಸಾಟಿ   . . ಆಹಾ... ಓಹೋ
ಸುಮತಿ ಸುಮತಿ ಈ ನಾಡಿನ ಬೆಡಗಿ, ಇವಳಿಗ್ಯಾರು ಪೈಪೋಟಿ .... ಅಹಹಾ .... ಓಹೋಹೋ
ಇಂಥ ಊರಲ್ಲಿ  ಲಭಿಸಿದ ಸ್ನೇಹ, ಸ್ವರ್ಗ ಸನ್ಮಾನವೊ,...... ಹೋ
ಇಂಥ ಊರಲ್ಲಿ  ಫಲಿಸಿದ ಪ್ರೇಮ ಧೈವ ಸಾಕಾರವೋ,.......
ಧರಣೆ ಆಕಾಶ, ತೆರೆಸೋ ಆವೇಶ,ಧರಣೆ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು

ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಗುಂಗಲಿ  ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ  ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಋಣದಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,ಹಾಡಿನ ಮಡಿಲಲಿ ನಾ ಬಾಳುವೆ

ದಾದಾ :ಈ ದ್ರೋಹ ವಂಚನೆ ಕಂಡು

ಚಿತ್ರ: ದಾದಾ 
ಸಂಗೀತ: ವಿಜಯಾನಂದ್   
ಸಾಹಿತ್ಯ: ಶ್ಯಾಮ್ ಸುಂದರ್ ಕುಲಕರ್ಣಿ 
ನಿರ್ದೇಶನ: ಪಿ .ವಾಸು
ಗಾಯಕರು: ಎಸ್ .ಪಿ. ಬಿ 

ದಾದಾ ದಾದಾ
ಈ ದ್ರೋಹ ವಂಚನೆ ಕಂಡು,ಈ ವ್ಯಕ್ತಿಯು ಹುಟ್ಟಿಹನು 
ಮತ್ತೇರಿ ಕೊಬ್ಬಿದ ಜನರಾ,ಸೊಕ್ಕೆಲ್ಲಾ ಮುರಿಯುವನು 
ದ್ವೇಷದಾ ರೋಷದಾ ಸದ್ದಡಗಿಸುವ ಯಮನೂ 

ದಾದಾ ದಾದಾ  . .  . . . . . . . .  

ಶಕುನಿ ಜನರ ಮೋಸದಾಟ, ಬಯಲಿಗೆಳೆವ ಧೀರನು 
ಮುಳ್ಳು ಕಂಡ್ರೆ ಮುಳ್ಳಿನಿಂದ,ತೀಡುವಂತ ಶೂರನು 
ಹೇ..... ಹೇ....... 
ಲೂಟಿ ಮಾಡೋ  ಜನ  ಏಟು ತಿಂದಾಗಿದೆ
ಪ್ರೀತಿಗೆ ಸೋಲುವಾ,ನೀತಿಗೆ ಬಾಳುವಾ 

ದಾದಾ ದಾದಾ .. . . . . 

ನೊಂದ ಜನರ ಕಂಡ ಮನವು,ಬೆಂದು ಹೋಯ್ತು ಈ ದಿನಾ 
ದುಷ್ಟ ಜನಕೆ ಶಿಕ್ಷೆ ನೀಡಿ ,ಶಿಷ್ಟರನ್ನು ಕಾಯ್ವನು  
ಹೇ..... ಹೇ....... 
ಕೆಚ್ಚು ಇವನಲ್ಲಿದೇ , ರೊಚ್ಚು ಮೈ ತುಂಬಿದೆ 
ಉಕ್ಕಿನಾ ತೋಳಿಗೆ ಬೆಟ್ಟವು ನಡುಗಿದೇ 

ದಾದಾ ದಾದಾ 

ಈ ದ್ರೋಹ ವಂಚನೆ ಕಂಡು,ಈ ವ್ಯಕ್ತಿಯು ಹುಟ್ಟಿಹನು 
ಮತ್ತೇರಿ ಕೊಬ್ಬಿದ ಜನರಾ,ಸೊಕ್ಕೆಲ್ಲಾ ಮುರಿಯುವನು 
ದ್ವೇಷದಾ ರೋಷದಾ ಸದ್ದಡಗಿಸುವ ಯಮನೂ 
ದಾದಾ ದಾದಾ 

Tuesday, December 6, 2016

ಪ್ರೇಮ ಚಂದ್ರಮ ಕೈಗೆ ಸಿಗುವುದೇ : ಯಜಮಾನ

ಚಿತ್ರ: ಯಜಮಾನ 
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ ಕಲ್ಯಾಣ್ 
ನಿರ್ದೇಶನ: ಆರ್ ಶೇಷಾದ್ರಿ, ರಾಧಾಭಾರತಿ 
ಗಾಯಕರು: ರಾಜೇಶ್ 

ಪ್ರೇಮ ಚಂದ್ರಮ ಕೈಗೆ ಸಿಗುವುದೇ,ಹೇಳೇ ತಂಗಾಳಿ ನೀ ಹೇಳೇ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ ಹೃದಯಾನಾ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೇ,ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಬಾನಲಿ ಹುಣ್ಣಿಮೆಯಾದರೆ ನೀ, ಸವೆಯ ಬೇಡ ಸವೆಯುವೆ ನಾ
ಮೇಣದ ಬೆಳಕೇ ಆದರೆ ನೀ,ಕರಗ ಬೇಡ ಕರಾಗುವೆ ನಾ
ಹೂದೋಟವೇ ಆದರೆ ನೀನು,ಹೂಗಳ ಬದಲು ಉದುರುವೆ ನಾ
ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೇ ತಂಗಾಳಿ ನೀ ಹೇಳೇ ತಂಗಾಳಿ

ಈ ಪ್ರತಿರೂಪವ ಬಿಡಿಸಲು ನಾ ನೆತ್ತರಲೇ ಬಣ್ಣವನಿಡುವೆ
ಈ ಪ್ರತಿ ಬಿಂಬವ ಕೆತ್ತಲು ನಾ ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು ಉಸಿರನೇ ಬಸಿದು ಪದವಿಡುವೆ