Friday, November 20, 2015

ನಾ ನಿನ್ನಾ ಮರೆಯಲಾರೆ : ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,

ಚಿತ್ರ: ನಾ ನಿನ್ನಾ ಮರೆಯಲಾರೆ 
ಸಂಗೀತ: ರಾಜನ್ ನಾಗೇಂದ್ರ 
ಸಾಹಿತ್ಯ:ಚಿ ಉದಯಶಂಕರ್ 
ನಿರ್ದೇಶನ: ವಿಜಯ್ 
ಗಾಯಕರು: ಪಿ ಬಿ ಶ್ರೀನಿವಾಸ್ & ಎಸ್ ಜಾನಕಿ 

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು 
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು 
ಕಂದಾ ಕೊಡುವೆಯಾ ...ಚಿನ್ನದ ತೋಳಲಿ ನನ್ನಾ ಬಳಸುತಾ....... 
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು 
ಕಂದಾ ಕೊಡುವೆಯಾ ...

ಚಿನಕುರಳಿ ಮಾತಿನಲ್ಲಿ ಹೂ ಬಾಣ ನೋಟದಲ್ಲಿ 
ಕೋಪದಿ ಸಿಡಿದರೆ ಆನೆ ಪಟಾಕಿ 
ನೀ ನಕ್ಕರು ಚೆಂದಾ, ನೀ ಅತ್ತರು ಅಂದ
ಕುಣಿಸುವೆ ತಣಿಸುವೆ ತುಂಟಾಟದಿಂದಾ 
ಆ  ಅ ಅ ಆಅ ........ ಓ ಓ ಓ ಹೋ ..... 

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು 
ಕಂದಾ ಕೊಡುವೆಯಾ ...ಚಿನ್ನದ ತೋಳಲಿ ನನ್ನಾ ಬಳಸುತಾ....... 
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು 
ಕಂದಾ ಕೊಡುವೆಯಾ ...

ಮುತ್ತಂತೆ ನಿನ್ನ ನುಡಿಯೂ, ಒಂದೊಂದು ಜೇನ ಹನಿಯು 
ಸವಿಯುತ ನಲಿವುದು ಈ ನನ್ನ ಜೀವಾ 
ಈ ನಿನ್ನ ಸ್ನೇಹದಲ್ಲಿ, ನಾ ತೇಲಿ ಸ್ವರ್ಗದಲ್ಲಿ 
ಮರೆಯುವೆ ಮನಸಿನ ನೂರೆಂಟು ನೋವಾ 

ಆಹಾಹಾ ......... ಆಹಾಹಾ 

ಸಿಹಿ ಮುತ್ತು ಸಿಹಿ ಮುತ್ತು ನಂಗೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು 
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಇನ್ನೊಂದು

ನೀನು ಕೊಡುವೆಯಾ, ಚಿನ್ನದ ತೋಳಲಿ ನನ್ನಾ ಬಳಸುತಾ....... 
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು 
ಇನ್ನೊಂದು ಮತ್ತೊಂದು, ಇನ್ನೊಂದು ಮತ್ತೊಂದು ಹಾ .......  
 
ಮೃಗಾಲಯ : ಆಲಯಾ ........ ಮೃಗಾಲಯ,

ಚಿತ್ರ: ಮೃಗಾಲಯ 
ಸಂಗೀತ: ರಾಜನ್ ನಾಗೇಂದ್ರ 
ಸಾಹಿತ್ಯ:ಚಿ ಉದಯಶಂಕರ್ 
ನಿರ್ದೇಶನ: ವಿ ಸೋಮಶೇಕರ್  
ಗಾಯಕರು: ಎಸ್ ಪಿ ಬಿ 

ಆಹಾ ಹಾ ಅ ಹಾಹಾ  ಲ ಲಾಲ ಲಾ ಲಲ     ಲಲಲಾ ಲಲಲಾ ಲಲಲಾ ಲಲಲಾ

ಆಲಯಾ ........ ಮೃಗಾಲಯ,
ಆಲಯಾ ........ ಮೃಗಾಲಯ,ಬಾನಾಡಿಗಳ ನಿಲಯ 
ಮನದಲ್ಲಿ ಆಶ್ಚರ್ಯ ತಾರುವಾ ,ಈ ಕಂಗಳಿಗೆ ಆನಂದ ತರುವಾ 
ನೂರಾರು ಜೀವಿಯಾ ...........  

ಆಲಯಾ ........ ಮೃಗಾಲಯ,ಬಾನಾಡಿಗಳ ನಿಲಯ  

ಆನೆ ಸಿಂಹ ಚಿರತೆಯಾ, ಒಂಟೆ ಹುಲಿ ಕರಡಿಯಾ 
ಆನೆ ಸಿಂಹ ಚಿರತೆಯಾ, ಒಂಟೆ ಹುಲಿ ಕರಡಿಯಾ
ಭಯವಿಲ್ಲದೆ ನೀ ನೋಡುವೆ, ಕಣ್ ಬಲೆಯಲೇ ಸೆರೆ ಹಾಕುವೆ 
ಮಂಗನಿಂದ ಮಾನವಾ, ಬಂದನೆಂಬ ಸತ್ಯವಾ
ಕಣ್ಣೆದುರಲೇ ನೀ ಕಾಣುವೆ, ಆ ಸೃಷ್ಟಿಗೆ ಕೈ ಮುಗಿಯುವೆ 
ಕಾಡಲ್ಲೇ ಇರುವಂತೆ ಪಡುವೆ ಭ್ರಮೆಯಾ,ಭ್ರಮೆಯಾ,ಭ್ರಮೆಯಾ

ಆಲಯಾ ........ ಮೃಗಾಲಯ,
ಆಲಯಾ ........ ಮೃಗಾಲಯ,ಬಾನಾಡಿಗಳ ನಿಲಯ

ಕುಣಿವಾ ನವಿಲಾ ನೋಡಲು, ಗಿಳಿಯಾ ನುಡಿಯಾ ಕೇಳಲು 
ಕುಣಿವಾ ನವಿಲಾ ನೋಡಲು, ಗಿಳಿಯಾ ನುಡಿಯಾ ಕೇಳಲು 
ಆ ಬ್ರಮ್ಮನಾ ಚಾತುರ್ಯಕೆ, ಬೆರಗಾಗುವೆ ಮರುಳಾಗುವೆ 
ಪಕ್ಷಿ ಪ್ರಾಣಿ ಆಗಲಿ, ವಿಷದಾ ಹಾವೇ ಆಗಲಿ 
ನಮ್ಮಂತೆಯೇ ಸಂತೋಷದಿ, ಬಾಳಿ ಬದುಕಲು ಭುವಿಗೆ ಬಂದಿವೆ 
ದಯೆಯಿಂದ ಕಂಡಾಗ ನಿಜವಾ ಅರಿವೇ ಗೆಳೆಯಾ ಗೆಳೆಯಾ  

ಆಲಯಾ ........ ಮೃಗಾಲಯ,
ಆಲಯಾ ........ ಮೃಗಾಲಯ,ಬಾನಾಡಿಗಳ ನಿಲಯ 
ಮನದಲ್ಲಿ ಆಶ್ಚರ್ಯ ತಾರುವಾ ,ಈ ಕಂಗಳಿಗೆ ಆನಂದ ತರುವಾ 
ನೂರಾರು ಜೀವಿಯಾ ...........  

ಅ..... ಅಹಾ......ಹಾ......ಲ......ಲಾಲಲಾ .......ಅ.......ಅಹಾ.......ಹಾ ಲ.......ಲಾಲಲ