Monday, February 21, 2011

ಶಂಕರ್ ಗುರು : ಚೆಲುವೆಯ ನೋಟ ಚೆನ್ನ,

ಚಿತ್ರ: ಶಂಕರ್ ಗುರು 
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ವಿ.ಸೋಮಶೇಕರ್
ಗಾಯಕರು:ಡಾ !!ರಾಜಕುಮಾರ್ 

ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ.

ಕಾಮನ ಬಿಲ್ಲು ಚೆನ್ನ, ಸುಳಿವಾ ಮಿಂಚು ಚೆನ್ನ,
ಹೊಳೆಯುವ ನಿನ್ನ ಕಣ್ಣಾ ಕಾಂತಿ ಇನ್ನು ಚೆನ್ನ,
ತಣ್ಣನೆ ಗಾಳಿ ಚೆನ್ನ,ಹುಣ್ಣಿಮೆ ಚಂದ್ರ ಚೆನ್ನ,
ನಿನ್ನನು ಸೇರಿ ನಿಂತ,ನನ್ನ ಬಾಳೆ ಚೆನ್ನ,  

ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,ಚೆಲುವೆಯ ನೋಟ ಚೆನ್ನ.

ಜಿಂಕೆಯ ಕಣ್ಣು ಚೆನ್ನ,ಹವಳದ ಬಣ್ಣ ಚೆನ್ನ,
ಅರಗಿಳಿ ನಿನ್ನಾ ರೂಪ ಚೆನ್ನದಲ್ಲಿ ಚೆನ್ನ,
ಬೆಳಗಿನ ಬಿಸಿಲು ಚೆನ್ನ,ಹೊಂಗೆಯ ನೆರಳು ಚೆನ್ನ,
ಗೆಳತಿಯೇ ನಿನ್ನಾ ಸ್ನೇಹ ಚಿನ್ನಕಿಂತ ಚೆನ್ನ, 

ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ,ಒಲವಿನ ಮಾತು ಚೆನ್ನ,
ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ,
ಚೆಲುವೆಯ ನೋಟ ಚೆನ್ನ.
 
 

ತ್ರಿಮೂರ್ತಿ :ಮೂಗನ ಕಾಡಿದರೇನು

ಚಿತ್ರ: ತ್ರಿಮೂರ್ತಿ 
ಸಂಗೀತ: ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಚಿ.ಉದಯಶಂಕರ್ 
ನಿರ್ದೇಶನ:ಸಿ.ವಿ.ರಾಜೇಂದ್ರನ್ 
ಗಾಯಕರು:ಡಾ !!ರಾಜಕುಮಾರ್ 

ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಕೋಪಿಸಲು,ನಿಂದಿಸಲು,ಮೌನವ ಮಿರುವನೇನು.
ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು.

ಬೆಳಕೆಲ್ಲೋ ಕಾಣಿಸದು ಕತ್ತಲೆಯೇ ತುಂಬಿಹುದು,
ನಿಜವೆಲ್ಲೋ ಓಡಿಹುದು ವಂಚನೆಯೇ ಕಾಣುವುದು 
ದಾರಿಯೇ ತೋರದೆ ಅಲೆಯುತಲಿರುವಾಗ 

ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಕೋಪಿಸಲು,ನಿಂದಿಸಲು,ಮೌನವ ಮಿರುವನೇನು.
  
ನನ್ನವರು ದೂರಾಗಿ ಬಂಧುಗಳು ಹಗೆಯಾಗಿ
ನೆಮ್ಮದಿಯು ಮರೆಯಾಗಿ,ಅಳುತಿರಲು ನೋವಾಗಿ,
ಏನನು,ಹೇಳಲಿ ಕೆಣಕಲು ನನ್ನೀಗ

ಮೂಗನ ಕಾಡಿದರೇನು,ಸವಿ ಮಾತನು ಆಡುವನೇನು,
ಕೋಪಿಸಲು,ನಿಂದಿಸಲು,ಮೌನವ ಮಿರುವನೇನು.
 

ಶುಭ ಮಂಗಳ : ಸೂರ್ಯಂಗು,ಚಂದ್ರಂಗು,

ಚಿತ್ರ: ಶುಭ ಮಂಗಳ 
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ:ಎಂ.ಏನ್.ವ್ಯಾಸ ರಾವ್ 
ನಿರ್ದೇಶನ:ಪುಟ್ಟಣ್ಣ ಕಣಗಾಲ್ 
ಗಾಯಕರು: ರವಿ 

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.

ಮನೆ ತುಂಬಾ ಹರಿದೈತೆ ಕೆನೆ ಹಾಲು ಮೊಸರು 
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು 
ಗುಡಿಯಾಗೆ ಬೆಳಗೈತೆ ತುಪ್ಪಾದ ದೀಪ 
ನುಡಿಯಗೆ ನಡೆಯಾಗೆ,ಸಿಡಿದೈತೆ ಕೋಪ, ಸಿಡಿದೈತೆ ಕೋಪ

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.

ಬೆಳದಿಂಗಳು ಚಲೈತೆ ಅಂಗಳದಾ ಹೊರಗೆ 
ಕರಿ ಮೋಡ ಮುಸುಕೈತೆ ಮನಸಿನಾ ಒಳಗೆ 
ಬಯಲಾಗೆ ತುಳುಕೈತೆ ಹರುಷದ ಹೊನಲು 
ಪ್ರೀತಿಯ ತೆರಿಗೆ ಬಡಿದೈತೆ ಸಿಡಿಲು ,ಬಡಿದೈತೆ ಸಿಡಿಲು.

ಸೂರ್ಯಂಗು,ಚಂದ್ರಂಗು,ಬಂದಾರೆ ಮುನಿಸು,ನಗುತಾದ ಬುತಾಯಿ ಮನಸು.
ರಾಜಂಗು,ರಾಣಿಗೂ,ಮುರಿದೋದ್ರೆ ಮನಸು,ಅರಮನೆಯಾಗೆನೈತೆ ಸೊಗಸು.
ಅರಮನೆಯಾಗೆನೈತೆ ಸೊಗಸು.






ಬಹದ್ದೂರ್ ಗಂಡು : ಮುತ್ತಿನಂತ ಮಾತೊಂದು

ಚಿತ್ರ: ಬಹದ್ದೂರ್ ಗಂಡು
ಸಂಗೀತ: ಎಂ.ರಂಗಾರಾವ್ 
ಸಾಹಿತ್ಯ:ಚಿ.ಉದಯಶಂಕರ್ 
ನಿರ್ದೇಶನ:ವಿಜಯ್ 
ಗಾಯನ :ಡಾ!! ರಾಜಕುಮಾರ್

ಹಾಡುವಾ ದನಿಯಲ್ಲಿ ಶ್ರುತಿ ಸೇರಬೇಕು,ನೋಡುವಾ ನೋಟದಲಿ ಹಿತ ಕಾಣಬೇಕು,
ಆಡುವಾ ಮಾತಿನಲಿ........ಪ್ರೀತಿ ಇರಬೇಕು..............
ಆ ಆಹಾ ಹಾ ಹಾ .........ಆಹಾ ಹಾ ಹಾ .........ಆಹಾ ಹಾ ಹಾ ಹಾ .........
ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
  
ಸಿರಿತನವೆಂದು ಶಾಶ್ವತವಲ್ಲ,ಬಡ ಜನರೆಂದು ಪ್ರಾಣಿಗಳಲ್ಲ,
ದೇವರ ಆಟ ಬಲ್ಲವರಿಲ್ಲ,ಬಾಳಿನ ಮರ್ಮ ಅರಿತವರಿಲ್ಲಾ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ.........ಪಾಪ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ
ಎಂದು ಆಳಾಗ ಬಲ್ಲವನೇ ಅರಸಾಗುವ ಒಳ್ಳೆ  ಅರಸಾಗುವ ಹೇ ............

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,

ಕಪ್ಪನೆ ಮೋಡ ಕರಗಲೇ ಬೇಕು ಆಗಸದಿಂದ ಇಳಿಯಲೇ ಬೇಕು, 
ಕಪ್ಪನೆ ಮೋಡ ಕರಗಲೇ ಬೇಕು ಆಗಸದಿಂದ ಇಳಿಯಲೇ ಬೇಕು, 
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು ......ಏನು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಕೋಟೆ ಕಟ್ಟಿ ಮೆರೆದೊರೆಲ್ಲ  ಏನಾದರು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಇನ್ನು ನೀನ್ಯಾವ ಲೆಕ್ಕ ಹೇಳೇ ಸುಕುಮಾರಿಯೇ,ಅಯ್ಯೋ ಹೆಮ್ಮಾರಿಯೇ ಹೇ ......

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,

ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ ,
ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ ........ಹಾನ್,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ, 
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಈ ನಿಜವನ್ನು ಅರಿತಾಗ ಹೆಣ್ಣಾ ಗುವೇ ,ಇಲ್ಲ ಮಣ್ಣುತಿನ್ನುವೆ ಹೇ...........  

ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ  ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
 

Sunday, February 20, 2011

ಕಸ್ತೂರಿ ನಿವಾಸ :ಆಡಿಸಿ ನೋಡು ಬೀಳಿಸಿ ನೋಡು

ಚಿತ್ರ: ಕಸ್ತೂರಿ ನಿವಾಸ 
ಸಂಗೀತ: ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಚಿ.ಉದಯಶಂಕರ್ 
ನಿರ್ದೇಶನ:ದೊರೈ ರಾಜ್
ಗಾಯಕರು:ಪಿ.ಬಿ ಶ್ರೀನಿವಾಸ್ 

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು  
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು, 
ಕಷ್ಟವೋ,ಸುಖವೋ ಅಳುಕದೆ ಆಡಿ,ತೂಗುತಿರುವುದು,ತೂಗುತಿರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು,ದೀಪ ಬೆಳಕ ತರುವುದು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,

ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ ,ಕೊನೆಯಾಗುವುದೇ.

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು  
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,


 





 



Saturday, February 19, 2011

ನಾಂದಿ :ಹಾಡೊಂದ ಹಾಡುವೆ

ಚಿತ್ರ: ನಾಂದಿ
ಸಂಗೀತ: ವಿಜಯ ಭಾಸ್ಕರ್ 
ಸಾಹಿತ್ಯ:ಆರ್.ಏನ್  ಜಯಗೋಪಾಲ್
ನಿರ್ದೇಶನ:ಏನ್.ಲಕ್ಶ್ಮಿನಾರಾಯಣ 
ಗಾಯಕರು:ಪಿ.ಬಿ ಶ್ರೀನಿವಾಸ್ 


ಹಾಡೊಂದ ಹಾಡುವೆ ನೀ ಕೇಳು ಮಗುವೇ,
ಹಾಡೊಂದ ಹಾಡುವೆ ನೀ ಕೇಳು ಮಗುವೇ,
ಬರಿದಾದ ಮನೆ ಬೆಳಗೆ ನೀನೆಂದು ಬರುವೆ 
ಹಾಡೊಂದ ಹಾಡುವೆ ನೀ ಕೇಳು ಮಗುವೇ,

ಶ್ರೀಮಂತದಾನಂದ  ನಾ ನಿಡಲಿಲ್ಲಾ,
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲಾ 
ಶ್ರೀಮಂತದಾನಂದ  ನಾ ನಿಡಲಿಲ್ಲಾ,
ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲಾ
ಸಿರಿವಂತರ ಭೋಗ ನಿನಗಿಲ್ಲಿ ಇಲ್ಲಾ ,
ಸಿರಿಯಾಗಿ,ನಿಧಿಯಾಗಿ,ನೀ ಬರುವೆಯಲ್ಲಾ 

ಹಾಡೊಂದ ಹಾಡುವೆ ನೀ ಕೇಳು ಮಗುವೇ,

ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ,
ಆ ಸುಖದಿ ನಾ ಮರೆವೆ ಈ ಬಾಳ ಚಿಂತೆ,
ನಿನ್ನೊಂದು ನುಡಿ ಮುತ್ತು ಸವಿ ಜೇನಿನಂತೆ,
ಆ ಸುಖದಿ ನಾ ಮರೆವೆ ಈ ಬಾಳ ಚಿಂತೆ, 
ಅದ ಕೇಳೋ ಸೌಬಾಗ್ಯ ಈ ತಾಯಿಗಿಲ್ಲ,
ಅದ ಕೇಳೋ ಸೌಬಾಗ್ಯ ಈ ತಾಯಿಗಿಲ್ಲ,
ಇವಳಾಸೆ ಆಕಾಂಷೆ ನಿನಾದೆಯಲ್ಲ  

ಹಾಡೊಂದ ಹಾಡುವೆ ನೀ ಕೇಳು ಮಗುವೇ,
ಬರಿದಾದ ಮನೆ ಬೆಳಗೆ ನೀನೆಂದು ಬರುವೆ
 

Friday, February 18, 2011

ಸಿಪಾಯಿ ರಾಮು :ಕಥೆ ಮುಗುಯಿತೆ.

ಚಿತ್ರ: ಸಿಪಾಯಿ ರಾಮು 
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ:ಆರ್ ಏನ್ ಜಯಗೋಪಾಲ್
ನಿರ್ದೇಶನ:ಸ್ವಾಮಿ Y R
ಗಾಯಕರು:ಪಿ.ಬಿ ಶ್ರೀನಿವಾಸ್ 


ಕಥೆ ಮುಗುಯಿತೆ.........,ಆರಂಭದಾ ಮುನ್ನಾ ..........
ಲತೆ ಬಾಡಿ ಹೋಯಿತೇ ........ಹೂವಾಗುವಾ  ಮುನ್ನಾ.......

ಎಲ್ಲಿಗೆ ಪಯಣಾ.....,ಯಾವುದೊ ದಾರಿ........
ಏಕಾಂಗಿ ಸಂಚಾರಿ, ಏಕಾಂಗಿ ಸಂಚಾರಿ
ಮಡದಿ ಮಕ್ಕಳು,ಸ್ನೇಹಿತರನ್ನು,ಮಣ್ಣಿನ ವಶ ಮಾಡಿ,
ನಡೆದಿಹೆ ಇಂದು ಅಂಧನ ರೀತಿ,
ಶೋಕದೆ.......... ಏನೋ ನಿನ್ನ ಗುರಿ 

ಎಲ್ಲಿಗೆ ಪಯಣಾ...........

ಸೋಲು ಗೆಲುವು,ಸಾವು ನೋವು,
ಜೀವನದುಯ್ಯಾಲೆ .................
ಸಾಯುವ ಮುನ್ನ ಜನಿಸಿದ ಮಣ್ಣಾ,
ದರುಶನ ನೀ ಪಡೆದು 
ತಾಯಿಯ ಮಡಿಲಾ,ಧುಳಲಿ ಬೆರೆತು,
ಶುನ್ಯದೇ ...........ಮುಗಿಸು ನಿನ್ನ ಕಥೆ   

ಎಲ್ಲಿಗೆ ಪಯಣಾ.....,ಯಾವುದೊ ದಾರಿ........
ಏಕಾಂಗಿ ಸಂಚಾರಿ, ಏಕಾಂಗಿ ಸಂಚಾರಿ

ಸಂಪತ್ತಿಗೆ ಸವಾಲ್ : ನಗುವುದೋ,ಅಳುವುದೋ

ಚಿತ್ರ: ಸಂಪತ್ತಿಗೆ ಸವಾಲ್
ಸಂಗೀತ: ಜಿ .ಕೆ ವೆಂಕಟೇಶ್ 
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಎ.ವಿ.ಶೇಷಗಿರಿ ರಾವ್ 
ಗಾಯಕರು:ಪಿ.ಬಿ ಶ್ರೀನಿವಾಸ್ 


ನಗುವುದೋ,ಅಳುವುದೋ,ನೀವೇ ಹೇಳಿ ಇರುವುದೋ,ಬಿಡುವುದೋ,ಈ ಊರಿನಲ್ಲಿ,
ಈ ಜನರಾ ನಡುವೆ ನಾನು ಹೇಗೆ ಬಾಳಲಿ,ಅಳುವುದೋ,ನಗುವುದೋ,ಈಗ ಏನು ಮಾಡಲಿ 
ನಗುವುದೋ,ಅಳುವುದೋ,ನೀವೇ ಹೇಳಿ,ಇರುವುದೋ,ಬಿಡುವುದೋ,ಈ ಊರಿನಲ್ಲಿ,

ಬಡವರ ಕಂಬನಿಗೆ ಬೆಲೆಯೇ ಇಲ್ಲಾ,
ಧನಿಕರ ವಂಚನೆಗೆ  ಕೊನೆಯೇ ಇಲ್ಲಾ,
ತಳುಕಿನಾ ಮಾತುಗಳ ನಂಬುವರೆಲ್ಲ
ಸತ್ಯವನು ನುಡಿದಾಗ ಸಿಡಿಯುವರೆಲ್ಲಾ,
ದೂರ ತಳ್ಳುವರೆಲ್ಲಾ, ದೂರ ತಳ್ಳುವರೆಲ್ಲಾ


ನಗುವುದೋ,ಅಳುವುದೋ,ನೀವೇ ಹೇಳಿ ಇರುವುದೋ,ಬಿಡುವುದೋ,ಈ ಊರಿನಲ್ಲಿ,
ಈ ಜನರಾ ನಡುವೆ ನಾನು ಹೇಗೆ ಬಾಳಲಿ,ಅಳುವುದೋ,ನಗುವುದೋ,ಈಗ ಏನು ಮಾಡಲಿ
ನಗುವುದೋ,ಅಳುವುದೋ,ನೀವೇ ಹೇಳಿ 

ತಾಯಿಯೇ ಮಗನನ್ನು ನಂಬದೆ ಇರಲು,
ಅಣ್ಣನೇ ಮನೆಯಿಂದ ಹೊರಗೆ ತಳ್ಳಲು ,
ಕಾಲವೇ ಎದುರಾಗಿ ವ್ಯರಿಯಾಗಲು,

ಅತ್ತಿಗೆಯ ಕಂಗಳಲಿ ಕಂಡೆನು ನಾನು,
ಮಾತೃವಾತ್ಸಲ್ಯವನು,ಮಾತೃವಾತ್ಸಲ್ಯವನು.

ಅಳುವುದೋ,ನಗುವುದೋ,ಈಗ ಏನು ಮಾಡಲಿ ,ನಗುವುದೋ,ಅಳುವುದೋ,ನೀವೇ ಹೇಳಿ 

ಬಡ್ಡಿಯಾ ಹಣ ತಿಂದು ಬಡವರ ಕೊಂದು,
ಕೊಬ್ಬಿದಾ ಶ್ರೀಮಂತನೆ ನಾ ನಿನಗಿಂದು,
ಹಾಕುವೆ ಸಂಪತ್ತಿಗೆ ನನ್ನ ಸವಾಲು,
ಸಿರಿತನದ ಗರ್ವವನು ಮೆಟ್ಟಿ ಮೆರೆಯುವೆ,
ನಿನ್ನ ಸೂಕ್ಕು ಮುರಿಯುವೆ,ನಿನ್ನ ಸೂಕ್ಕು ಮುರಿಯುವೆ

ನಗುವುದೋ,ಅಳುವುದೋ,ನೀವೇ ಹೇಳಿ, ಇರುವುದೋ,ಬಿಡುವುದೋ,ಊರಿನಲ್ಲಿ,
ಈ ಜನರಾ ನಡುವೆ ನಾನು ಹೇಗೆ ಬಾಳಲಿ ,ಅಳುವುದೋ,ನಗುವುದೋ,ಈಗ ಏನು ಮಾಡಲಿ
ನಗುವುದೋ,ಅಳುವುದೋ,ನೀವೇ ಹೇಳಿ



 

ಪ್ರೇಮದ ಕಾಣಿಕೆ :ಬಾನಿಗೊಂದು ಎಲ್ಲೇ ಎಲ್ಲಿದೆ

ಚಿತ್ರ: ಪ್ರೇಮದ ಕಾಣಿಕೆ
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ:ಫಿರೋಜ್ ದಿನ್
ನಿರ್ದೇಶನ:ವಿ.ಸೋಮಶೇಕರ್
ಗಾಯಕರು:ಡಾ !!ರಾಜಕುಮಾರ್ 

ಹೇ.....ಹೇ ಹೇ ......ಹೇ ಹೇಹೇಹೇ..ಹೇಹೇಹೇ.....ಆಹಾ ........ಉಹೊಂ ......
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...
ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ,
ಮರಳುಗಾಡಿನಲ್ಲಿ ಸುಮ್ಮನೇಕೆ ಆಲೆಯುವೆ,
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು,
ನಾವು ನೆನಸಿದಂತೆ ಬಾಳಲೇನು ನಡೆಯದು 
ವಿಷಾದವಾಗಲಿ,ವಿನೋದವಾಗಲಿ,ಅದೇನೇ ಆಗಲಿ ಅವನೇ ಕಾರಣ.


ಬಾನಿಗೊಂದು ಎಲ್ಲೇ ಎಲ್ಲಿದೆ,......

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು,
ಬಯಸಿದಾಗ ಕಾಣದಿರುವ ಎರಡು ಮುಖಗಳು.
ಹರುಷವೊಂದೇ ಯಾರಿಗುಂಟು ಹೇಳು ಜಗದಲಿ 
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ 
ದುರಾಸೆ ಏತಕೆ,ನಿರಾಸೆ ಏತಕೆ,ಅದೇನೇ ಬಂದರು ಅವನ ಕಾಣಿಕೆ 


ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ,
ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...ನಿಧಾನಿಸು ನಿಧಾನಿಸು...

ಪ್ರೇಮದ ಕಾಣಿಕೆ : ಇದು ಯಾರು ಬರೆದ ಕಥೆಯೋ,

ಚಿತ್ರ: ಪ್ರೇಮದ ಕಾಣಿಕೆ
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ:ಚಿ.ಉದಯಶಂಕರ್ 
ನಿರ್ದೇಶನ:ವಿ.ಸೋಮಶೇಕರ್ 
ಗಾಯಕರು:ಡಾ !!ರಾಜಕುಮಾರ್ 

ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,


ಇದು ಯಾರು ಬರೆದ ಕಥೆಯೋ,......

ಕಾಣದಿಹ ಕೈಯೊಂದು  ಸೂತ್ರ ಹಿಡಿದಿದೆ 
ಆಡಿಸಿದೆ, ಕಾಡಿಸಿದೆ,ಅಳಿಸಿ ನಗುತಿದೆ 
ಬರಿ ಕನಸಾಯ್ತು,ಸುಖ ಶಾಂತಿ ಇಲ್ಲಾ,
ಇನ್ನು ಬದುಕೇಕೋ ಕಾಣೆನಲ್ಲಾ. 


ಇದು ಯಾರು ಬರೆದ ಕಥೆಯೋ,......

ಹಾವ ಕಂಡ ಮೂಗನಂತೆ ಕೂಗಲಾರದೆ,
ಕಾಡಿನೊಳು ಓಡುತಿಹೆ ದಾರಿ ಕಾಣದೆ,
ಜೊತೆ ಯಾರಿಲ್ಲ  ನಾ ಒಂಟಿಯಾದೆ,
ನಗುವಿನ್ನೆಲ್ಲಿ ಸೋತು ಹೋದೆ   

ಇದು ಯಾರು ಬರೆದ ಕಥೆಯೋ,ನನಗಾಗಿ ಬಂದ ವ್ಯಥೆಯೋ,
ಕೊನೆ ಹೇಗೋ ಅರಿಯಲಾರೆ,ಮರೆಯಾಗಿ ಹೋಗಲಾರೆ,
ಇದು ಯಾರು ಬರೆದ ಕಥೆಯೋ,

ಎರಡು ಕನಸು :ಎಂದು ನಿನ್ನ ನೋಡುವೆ

ಚಿತ್ರ: ಎರಡು ಕನಸು
ಸಂಗೀತ: ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯ ಶಂಕರ್ 
ನಿರ್ದೇಶನ:ದೊರೈ ಭಗವಾನ್ 
ಗಾಯಕರು:ಪಿ ಬಿ ಶ್ರೀನಿವಾಸ್


ಹೇ..ಹೇ.ಹೇ......ಆ ಹಾ ಹಾ ಹಾ ....ಓಹೋ ಹೋಹೋ ಹೋ .....ಲ ಲಾ ಲ ಲ  
ಎಂದು ನಿನ್ನ ನೋಡುವೆ ,ಎಂದು ನಿನ್ನ ಸೇರುವೆ ...
ಎಂದು ನಿನ್ನ ನೋಡುವೆ ,ಎಂದು ನಿನ್ನ ಸೇರುವೆ ...
ನಿಜ ಹೇಳಲೇನು,ನನ್ನ ಜೀವ ನೀನು 
ನೂರಾರು ಬಯಕೆ ಆತುರ ತಂದಿದೆ,ನೂರಾರು ಕನಸು ಕಾತರ ತುಂಬಿದೆ,
ಮುಗಿಲಿಗಾಗಿ ಬಾನು,ದುಂಬಿಗಾಗಿ ಜೇನು 
ನನಗಾಗಿ ನೀನು,ನಿನಗಾಗಿ ನಾನು, ನನಗಾಗಿ ನೀನು,ನಿನಗಾಗಿ ನಾನು, 


ಓಹೋ ಹೋ ಹೋ ಹೋ
ತಣ್ಣನೆ ಗಾಳಿ ಹಿತ ತೋರದಲ್ಲಾ,ಕೋಗಿಲೆ ಗಾನ ಸುಖ ನೀಡದಲ್ಲಾ,
ತಣ್ಣನೆ ಗಾಳಿ ಹಿತ ತೋರದಲ್ಲಾ,ಕೋಗಿಲೆ ಗಾನ ಸುಖ ನೀಡದಲ್ಲಾ,
ಕಾಮನ ಬಿಲ್ಲಿಗೂ ಮನ ಸೋಲಲಿಲ್ಲ,ನಿನ್ನೆಯ ನೆನಪಲ್ಲೇ ಸೋತೆ ನಾನು 
ನನ್ನಾಸೆ ನೀನು,ನಿನ್ನಾಸೆ ನಾನು,ನನ್ನಾಸೆ ನೀನು,ನಿನ್ನಾಸೆ ನಾನು

ಎಂದು ನಿನ್ನ ನೋಡುವೆ ,ಎಂದು ನಿನ್ನ ಸೇರುವೆ ... 
ನಿಜ ಹೇಳಲೇನು,ನನ್ನ ಜೀವ ನೀನು,ನಿಜ ಹೇಳಲೇನು,ನನ್ನ ಜೀವ ನೀನು 

ಕಂಗಳ ಕಾಂತಿ ನಿನಾಗಿರುವೆ,ಮೈ ಮನವೆಲ್ಲಾ ನೀ ತುಂಬಿರುವೆ, 
ಕಂಗಳ ಕಾಂತಿ ನಿನಾಗಿರುವೆ,ಮೈ ಮನವೆಲ್ಲಾ ನೀ ತುಂಬಿರುವೆ,
ನನ್ನೀ ಬಾಳಿಗೆ ಬೆಳಕಾಗಿರುವೆ,ಜನುಮ ಜನುಮದಾ ಜೋಡಿ ನೀನು   
ನನಗಾಗಿ ನೀನು,ನಿನಗಾಗಿ ನಾನು,ಆ ಹಾ ಆ ಆ.....
ನನಗಾಗಿ ನೀನು,ನಿನಗಾಗಿ ನಾನು ಓ ಹೋ .......ಹೋ ........