Monday, January 24, 2011

ಕುಲವಧು : ಒಲವಿನ ಪ್ರಿಯಲತೆ

ಚಿತ್ರ: ಕುಲವಧು 
ಸಂಗೀತ:ಜಿ.ಕೆ.ವೆಂಕಟೇಶ್ 
ಸಾಹಿತ್ಯ:ಕಣಗಾಲ್ ಪ್ರಭಾಕರ ಶಾಸ್ತ್ರೀ 
ನಿರ್ದೇಶನ: ಟಿ.ವಿ ಸಿಂಗ್ ಟಾಕುರ್
ಗಾಯಕರು:ಪಿ ಬಿ ಶ್ರೀನಿವಾಸ್ 


ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,
ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,  ಹ್ಞೂ .......ಓಓಹೋ......


ಮರೆಯದಂತ ಪ್ರೇಮರಾಶಿ
ಹೃದಯದಶಾ ರೂ......ಪಸಿ......
ಮನದೊಳಾಡೋ ಆ ವಿಲಾಸಿ
ಒಲಿದು ಬಂದ ಪ್ರೇಯಸಿ..........

ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,
ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,  ಹ್ಞೂ .......ಓಓಹೋ......


ಪ್ರಣಯ ರಾಗದ ಜೀವ ಗೆಳತಿ
ಬಾಳ ಬೆಳಗೋ ಶ್ರೀಮತಿ....,
ಸನ್ನೆ ಮಾತಿನ ಸರಸಗಾತಿ
ಕನ್ನಡಾಂಬೆಯ ಕುಲಸತಿ...........


ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,
ಒಲವಿನ ಪ್ರಿಯಲತೆ ಅವಳದೇ ಚಿಂತೆ
ಅವಳ ಮಾತೆ ಮದುರ ಗೀತೆ,ಅವಳೇ ಎನ್ನ ದೇವತೆ,  ಹ್ಞೂ .......ಓಓಹೋ......





ದೇವರ ಗುಡಿ : ಚೆಲುವೆಯ ಅಂದದ ಮೊಗಕೆ

ಚಿತ್ರ: ದೇವರ ಗುಡಿ
ಸಂಗೀತ: ರಾಜನ್
ನಾಗೇಂದ್ರ
ಸಾಹಿತ್ಯ:ಚಿ.ಉದಯ್ ಶಂಕರ್ 
ನಿರ್ದೇಶನ:ಬಿ ರಾಮಮೂರ್ತಿ
ಗಾಯಕರು:


ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣಾ
ನಲಿಯುತ ಬಾಳುವ ಮನೆಗೇ ಹೆಣ್ಣೇ  ಭೂಷಣಾ,
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣಾ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣಾ,
ಸುಖ ಸಂಸಾರಕೆ ಎಂದು ಸತಿಯೇ ಕಾರಣ

ಬಾನಿಗೆ ಎಂದೆದಿಗೂ ಆ ರವಿಯೇ ಭೂಷಣಾ
ಬಳಕುವಾ ಲತೆಗೆ ಹೆಣ್ಣೀನಾ ಮುಡಿಗೆ,ಹೂವೆ ಭೂಷಣಾ,
ರಜನಿಗೆ ಎಂದೆದಿಗೂ ಆ ಶಶಿಯೇ ಭೂಷಣಾ,
ಅರಳಿದಾ ಮನಕೆ,ಹವಳದ ತುಟಿಗೆ ನಗುವೇ ಭೂಷಣಾ.
ನೋವಿಗೆ.......ನಲಿವಿಗೆ....... ನೋವಿಗೆ.......ನಲಿವಿಗೆ....... ಹೆಣ್ಣೇ ಕಾರಣಾ,

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣಾ
ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣಾ,
ಸುಖ ಸಂಸಾರಕೆ ಎಂದು ಸತಿಯೇ ಕಾರಣ

ಮದುವೆಯ ಅನುಬಂದವು ಎಂದೂ ಅಳಿಯದು
ಕೋಪದಾ ಕಿಡಿಗೆ ರೋಷದಾ ಉರಿಗೆ ಒಲವು ಬಾಡದು,
ದೇಹವು ದೂರಾದರು,ಮನಸು ಮರೆಯದು,
ಬೇರೆತಿಹ ಜೀವಾ,ವಿರಹದಾ ನೋವ ಎಂದೂ ಸಹಿಸದು,
ಒಲವಿನಾ........ಜೀವನಾ.....ಒಲವಿನಾ........ಜೀವನಾ.....ಸುಖಕೇ ಸಾಧನಾ

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೇ ಹೆಣ್ಣೇ  ಭೂಷಣ,
ಸುಖ ಸಂಸಾರಕೆ ಎಂದು ಸತಿಯೇ ಕಾರಣ


ಮಾನಸ ಸರೋವರ : ವೇದಾಂತಿ ಹೇಳಿದನು

ಚಿತ್ರ: ಮಾನಸ ಸರೋವರ
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ:ವಿಜಯನಾರಸಿಂಹ
ನಿರ್ದೇಶನ:ಪುಟ್ಟಣ್ಣ ಕಣಗಾಲ್
ಗಾಯಕರು:ಪಿ ಬಿ ಶ್ರೀನಿವಾಸ್ 


ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,

ವೇದಾಂತಿ ಹೇಳಿದನು,.ಈ ಹೆಣ್ಣು ಮಾಯೆ ಮಾಯೆ,
ಕವಿಯೊಬ್ಬ ಕನವರಿಸಿದನು,ಓ ಇವಳೇ ಚೆಲುವೆ,
ಇವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ,ಸ್ವರ್ಗವನೇ ಗೆಲ್ಲುವೆ,

ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,

 ವೇದಾಂತಿ ಹೇಳಿದನು,ಈ ಬದುಕು ಶೂನ್ಯ ಶೂನ್ಯ,
ಕವಿ ನಿಂತು ಸಾರಿದನು,ಓ...ಇದು ಅಲ್ಲ ಶೂನ್ಯ,
ಜನ್ಮ ಜನ್ಮದಿ ಸವಿದೆ,ನಾನೆಷ್ಟು ಧನ್ಯ ನಾನೆಷ್ಟು ಧನ್ಯ...

ವೇದಾಂತಿ ಹೇಳಿದನು,ಹೊನ್ನೆಲ್ಲ ಮಣ್ಣು ,ಮಣ್ಣು,
ಕವಿಯೊಬ್ಬ ಹಾಡಿದನು,ಮಣ್ಣೆಲ್ಲ ಹೊನ್ನು ಹೊನ್ನು,
ಮಣ್ಣೆಲ್ಲ ಹೊನ್ನು ಹೊನ್ನು,ಮಣ್ಣೆಲ್ಲ ಹೊನ್ನು ಹೊನ್ನು,

ಚಂದನದ ಗೂಂಬೆ :ಆಕಾಶದಿಂದ ಧರೆಗಿಳಿದ ರಂಭೆ

ಚಿತ್ರ: ಚಂದನದ ಗೂಂಬೆ
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ದೂರೈ-ಭಗವಾನ್
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ 


ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,

ಬಂಗಾರದಿಂದ  ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ,
ತಾವರೆಯ ಅಂದ ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ,
ಆ ದೇವರೇ ಕಾಣಿಕೆ ನೀಡಿದಾ,ನನ್ನಾ ಜೊತೆ ಮಾಡಿದ...ಆಹಾ........ 

ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,

ನಡೆವಾಗ ನಿನ್ನಾ,ಮೈ ಮಾಟವೇನು,
ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ ನಾ ಕರಗಿ ಹೋದೆನು,
ಆ ಹೂನಗೆ ಕಂಡೆನು,ಸೋತೆನು,ನಿನ್ನಾ ಸೆರೆಯಾದೆನು...ಆಹಾ........

ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ,ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ,ಚಂದನದ ಗೂಂಬೆ,....ಚಂದನದ ಗೂಂಬೆ,...ಚಂದನದ ಗೂಂಬೆ,.....ಚಂದನದ ಗೂಂಬೆ,

ಕ್ರಾಂತಿ ವೀರ :ಯಾರು ಏನು ಮಾಡುವರು

ಚಿತ್ರ: ಕ್ರಾಂತಿ ವೀರ
ಸಂಗೀತ: ಸತ್ಯಂ
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ: ಬಿ ರಾಮಮೂರ್ತಿ
ಗಾಯಕರು: ಪಿ ಬಿ ಶ್ರೀನಿವಾಸ್

ಆಹಾಹಾ .....ಹಾ.....ಹೇಹೇಹೇ......ಹೇಹೇ........
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,
ಸತ್ಯದ ಹಾದಿಯಲಿರುವಾಗ,ಧರ್ಮವೇ ರಕ್ಷಿಸುತಿರುವಾಗ,
ಈ ನಾಡಿಗೆ ನಾಡೆ ಹಿಂದಿರುವಾಗ,ಕನ್ನಡ ನನ್ನುಸಿರಾಗಿರುವಾಗ,
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,


ಅನ್ನವಾ,ತಿನ್ನದೇ ಚಿನ್ನ ತಿನುವೆಯೇನು.
ಹೊನ್ನಿಗೆ ನಿನ್ನ ನೀ ಮಾರಿ ಕೊಳುವೆಯೇನು,
ಮೂಸದಾ ಹಾದಿಯು ಸುಖವ ತರುವುದೇನು,
ಪ್ರೀತಿಯ ಮರೆತರೆ ಶಾಂತಿ ಇರುವುದೇನು,
ದಾನವನಾಗದೆ,ಮಾನವನಾಗು,ನಗಿಸುತ ನಗುತಲಿ ಬಾಳಲಿ ಸಾಗು,
ಎಂದ ನಾನು ದ್ರೋಹಿ ಏನು ...,     ಹಂ

ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,

ಸುಮ್ಮನೆ ಮಾತಲಿ ಕಾಲ ಕಳೆವೇಯೇಕೆ,
ನಿನ್ನ ಈ ಬಾಳನು ವ್ಯರ್ಥ ಗೂಳಿಸಲೇಕೆ
ತಿರದಾ ಆಸೆಯು ನಿನ್ನ ಮನದಲೇಕೆ,
ಜನಗಳ ತುಳಿಯುವ ನೀಚ ಬುದ್ದಿಯೇಕೆ,
ಎಲ್ಲರೂ ಕಲೆತು,ದ್ವೇಷವ ಮರೆತು ಸೋದರರಂತೆ ದುಡಿಯಿರಿ ಬಂದು,
ಎಂದ ನಾನು ವ್ಯೇರಿಯೇನು....ಹಂ

ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,
ಸತ್ಯದ ಹಾದಿಯಲಿರುವಾಗ,ಧರ್ಮವೇ ರಕ್ಷಿಸುತಿರುವಾಗ,
ಈ ನಾಡಿಗೆ ನಾಡೆ ಹಿಂದಿರುವಾಗ,ಕನ್ನಡ ನನ್ನುಸಿರಾಗಿರುವಾಗ,
ಯಾರು ಏನು ಮಾಡುವರು,ನನಗೇನು ಕೇಡು ಮಾಡುವರು,



ದೇವರ ಗುಡಿ :ಮಾಮರವೆಲ್ಲೋ..ಕೋಗಿಲೆಯೆಲ್ಲೋ...

ಚಿತ್ರ: ದೇವರ ಗುಡಿ
ಸಂಗೀತ:ರಾಜನ್ ನಾಗೇಂದ್ರ 
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ಬಿ.ರಾಮಮೂರ್ತಿ
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ,

ಆಹಾ .......ಹಾ......ಹೇ.......ಹೇ.....ಆ....ಹಾ....ಆ.......
ಮಾಮರವೆಲ್ಲೋ..........ಕೋಗಿಲೆಯೆಲ್ಲೋ...........
ಏನೀ ಸ್ನೇಹ ಸಂಬಂಧ .........ಎಲ್ಲಿಯದು ಈ ಅನುಬಂಧ

ಮಾಮರವೆಲ್ಲೋ...ಕೂಗಿಲೆಯಲ್ಲೋ......ಮಾಮರವೆಲ್ಲೋ...ಕೂಗಿಲೆಯಲ್ಲೋ......
ಏನೀ ಸ್ನೇಹ ಸಂಬಂಧ .........ಎಲ್ಲಿಯದು ಈ ಅನುಬಂಧ


ಸೂರ್ಯನು ಎಲ್ಲೋ,ತಾವರೆ ಎಲ್ಲೋ ,
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ,ನೈದಿಲೆಯೇಲ್ಲೋ...
ನೋಡಲು ಅರಳುವ ಸಡಗರವೇನೂ,
ಎಲ್ಲೇ ಇರಲಿ,ಹೇಗೆ ಇರಲಿ,ಕಾಣುವ ಆಸೆ ಏತಕೋ ಏನೋ .

ಮಾಮರವೆಲ್ಲೋ...ಕೂಗಿಲೆಯಲ್ಲೋ......ಮಾಮರವೆಲ್ಲೋ...ಕೂಗಿಲೆಯಲ್ಲೋ......
ಏನೀ ಸ್ನೇಹ ಸಂಬಂಧ .........ಎಲ್ಲಿಯದು ಈ ಅನುಬಂಧ

ಹುಣ್ಣೀಮೆಯಲ್ಲಿ,ತಣ್ಣನೆ ಗಾಳಿ
ಬೀಸಲು ನಿನ್ನಾ ನೆನಪಾಗುವುದು,
ದಿನಾ ರಾತ್ರಿಯಲಿ ಏಕಾಂತದಲಿ
ಏಕೋ ಏನೋ,ನೋವಾಗುವುದು ,
ಬಯಕೆಯ ತುಂಬಿ,ಆಸೆಯ ದುಂಬಿ,
ಎದೆಯನು ಕೊರೆದು ಕಾಡುವುದೇನು.

ಮಾಮರವೆಲ್ಲೋ...ಕೂಗಿಲೆಯಲ್ಲೋ......ಮಾಮರವೆಲ್ಲೋ...ಕೂಗಿಲೆಯಲ್ಲೋ......
ಏನೀ ಸ್ನೇಹ ಸಂಬಂಧ .........ಎಲ್ಲಿಯದು ಈ ಅನುಬಂಧ
ಏನೀ ಸ್ನೇಹ ಸಂಬಂಧ,  ಏನೀ ಸ್ನೇಹ ಸಂಬಂಧ........

Sunday, January 23, 2011

ಬಂಧನ : ನೂರೊಂದು ನೆನಪು

ಚಿತ್ರ: ಬಂಧನ
ಸಂಗೀತ:ಎಂ.ರಂಗರಾವ್
ಸಾಹಿತ್ಯ:ಆರ್.ಏನ್.ಜಯಗೋಪಾಲ್
ನಿರ್ದೇಶನ:ರಾಜೇಂದ್ರಸಿಂಗ್ ಬಾಬು
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ,

ನೂರೊಂದು ನೆನಪು......,ಎದೆಯಾಳದಿಂದ..........
ಹಾಡಾಗಿ ಬಂತು........ಆನಂದದಿಂದ....... 
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ

ಒಲವೇಂಬ ಲತೆಯು,ತಂದಂತ ಹೂವು,
ಮುಡಿಯೇರೆ ನಲಿವು,ಮುಡಿ ಜಾರೆ ನೋವು,
ಕೈ ಗೂಡಿದಾಗ,ಕಂಡಂಥ ಕನಸು,
ಅದೃಷ್ಟದಾಟ ತಂದಂಥ  ಸೊಗಸು
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ನೀವೆಂದು ಇರಬೇಕು ಸಂತೋಷದಿಂದ ...

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ

ತುಟಿ ಮೇಲೆ ಬಂದಂತ ಮಾತೊಂದೇ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು,
ಕೇಳಿ ಪಡೆದಾಗ ಸಂತೋಷವುಂಟು,
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನನ್ನೆಲ್ಲಾ ಹಾರೈಕೆ  ಈ ಹಾಡಿನಿಂದಾ

ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ


ಮಸಣದ ಹೂ :ಮಸಣ ಹೂವೆಂದು ನೀನೇಕೆ ಕೊರಗುವೆ

ಚಿತ್ರ: ಮಸಣದ ಹೂ
ಸಂಗೀತ:ವಿಜಯ್ ಭಾಸ್ಕರ್
ಸಾಹಿತ್ಯ:ವಿಜಯನಾರಸಿಂಹ
ನಿರ್ದೇಶನ:ಪುಟ್ಟಣ್ಣ ಕಣಗಾಲ್
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ,



ಮಸಣ ಹೂವೆಂದು ನೀನೇಕೆ ಕೊರಗುವೆ,
ಮಸಣದ ವಾಸಿಯು ಮಹಾದೇವನಲ್ಲವೇ,
ಮಸಣದ ವಾಸಿಯು ಮಹಾದೇವನಲ್ಲವೇ,
ಮಸಣ ಹೂವೆಂದು ನೀನೇಕೆ ಕೊರಗುವೆ..,

ಭೂದಿಯ ಬಳಿದಾ ಆ ಶಿವಗೆ ಎಲ್ಲರ ಭಕ್ತಿಯ ಪೂಜೆ,
ಭೂದಿಯ ಬಳಿದಾ ಆ ಶಿವಗೆ ಎಲ್ಲರ ಭಕ್ತಿಯ ಪೂಜೆ,
ಬೀದಿಗೆ ಬಿಸುಡಿದ ನನ್ನ ಗೌರಿಗೆ ನನ್ನೆದೇ ಪ್ರೀತಿಯ ಪೂಜೆ
ಮುಗಿಯ ಕೂಡದು ನಿನ್ನ ಕಥೆ ದುರಂತದಲ್ಲಿ......ದುರಂತದಲ್ಲಿ.....
ಪಾರ್ವತಿ...........ಪಾರ್ವತೀ............

ಮಸಣ ಹೂವೆಂದು ನೀನೇಕೆ ಕೊರಗುವೆ,
ಮಸಣದ ವಾಸಿಯು ಮಹಾದೇವನಲ್ಲವೇ,

ನಿನ್ನಾ ನನ್ನಾ ಹೂವಿನ ತೋಟ ಎಂದು ಬಾಡದಿರಲಿ,
ನಿನ್ನಾ ನನ್ನಾ ಹೂವಿನ ತೋಟ ಎಂದು ಬಾಡದಿರಲಿ,
ಹೂವಿಗೆ ನಾನಾ ದುಂಬಿಯ ಕಾಟ,ಎಂದು ಬಾರದಿರಲಿ,
ನಮ್ಮ ಪ್ರೀತಿಯ ಪುಟ್ಟ ಗುಡಿಯು ಬೆಟ್ಟದ ಮೇಲಿರಲಿ ....... ಬೆಟ್ಟದ ಮೇಲಿರಲಿ .......
ಪಾರ್ವತಿ...........ಪಾರ್ವತೀ............

ಮಸಣ ಹೂವೆಂದು ನೀನೇಕೆ ಕೊರಗುವೆ,
ಮಸಣದ ವಾಸಿಯು ಮಹಾದೇವನಲ್ಲವೇ,

ನಿನ್ನ ನನ್ನ ಬಾಳ ದೋಣಿ ಒಂದೇ ತೀರ ಸೇರಲಿ,
ನಿನ್ನ ನನ್ನ ಬಾಳ ದೋಣಿ ಒಂದೇ ತೀರ ಸೇರಲಿ,
ಹೂವು ಗಂಧ ಬೇರೆತಿರುವಂತೆ ನಮ್ಮ ಬಾಳು ಕೂಡಲಿ,
ಮುಗಿಯಬೇಕು ನಮ್ಮ ಕಥೆ ಸುಖಾಂತದಲ್ಲಿ......... ಸುಖಾಂತದಲ್ಲಿ.........
ಪಾರ್ವತಿ...........ಪಾರ್ವತೀ............

ಮಸಣ ಹೂವೆಂದು ನೀನೇಕೆ ಕೊರಗುವೆ,
ಮಸಣ ಹೂವೆಂದು ನೀನೇಕೆ ಕೊರಗುವೆ,
ಮಸಣದ ವಾಸಿಯು ಮಹಾದೇವನಲ್ಲವೇ,
ಮಸಣದ ವಾಸಿಯು ಮಹಾದೇವನಲ್ಲವೇ,
ಮಸಣ ಹೂವೆಂದು ನೀನೇಕೆ ಕೊರಗುವೆ..,

ಬಂಧನ :ಪ್ರೇಮದಾ ಕಾದಂಬರಿ

ಚಿತ್ರ: ಬಂಧನ
ಸಂಗೀತ:ಎಂ.ರಂಗರಾವ್
ಸಾಹಿತ್ಯ:ಆರ್.ಏನ್.ಜಯಗೋಪಾಲ್
ನಿರ್ದೇಶನ:ರಾಜೇಂದ್ರಸಿಂಗ್ ಬಾಬು
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ,

ಪ್ರೇಮದಾ ಕಾದಂಬರಿ,ಬರೆದನು ಕಣ್ಣೀರಲಿ,
ಕಥೆಯು ಮುಗಿದೇ ಹೋದರು,ಮುಗಿಯದಿರಲಿ ಬಂಧನಾ
ಪ್ರೇಮದಾ ಕಾದಂಬರಿ,ಬರೆದನು ಕಣ್ಣೀರಲಿ,
ಕಥೆಯು ಮುಗಿದೇ ಹೋದರು,ಮುಗಿಯದಿರಲಿ ಬಂಧನಾ

ಮೊದಲ ಪುಟಕು ಕೊನೆಯ ಪುಟಕು ,ನಡುವೆ ಎನಿತು ಅಂತರ
ಮೊದಲ ಪುಟಕು ಕೊನೆಯ ಪುಟಕು ,ನಡುವೆ ಎನಿತು ಅಂತರ
ಬಂದು ಹೋಗುವ ಸ್ನೇಹ ಸಾವಿರ,ನಿಮ್ಮ ಬಂಧ ನಿರಂತರ

ಪ್ರೇಮದಾ ಕಾದಂಬರಿ,ಬರೆದನು ಕಣ್ಣೀರಲಿ,
ಕಥೆಯು ಮುಗಿದೇ ಹೋದರು,ಮುಗಿಯದಿರಲಿ ಬಂಧನಾ

ನನ್ನ ಕಥೆಗೆ ಅಂತ್ಯ ಬರೆದು,ಕವಿಯು ಹರಸಿದ ನನ್ನನು,
ನನ್ನ ಕಥೆಗೆ ಅಂತ್ಯ ಬರೆದು,ಕವಿಯು ಹರಸಿದ ನನ್ನನು,
ಕೊನೆಯ ಉಸಿರಲಿ ಒಂದೇ ಆಸೆ,ದೈವ ಹರಸಲಿ ನಿನ್ನನು

ಪ್ರೇಮದಾ ಕಾದಂಬರಿ,ಬರೆದನು ಕಣ್ಣೀರಲಿ,
ಕಥೆಯು ಮುಗಿದೇ ಹೋದರು,ಮುಗಿಯದಿರಲಿ ಬಂಧನಾ.....ಮುಗಿಯದಿರಲಿ........




ನಾಗರಹಾವು : ಬಾರೆ ......ಬಾರೆ .

ಚಿತ್ರ:ನಾಗರಹಾವು
ಸಂಗೀತ:ವಿಜಯ ಭಾಸ್ಕರ್ 
ಸಾಹಿತ್ಯ:ಚಿ.ಉದಯ್ ಶಂಕರ್
ನಿರ್ದೇಶನ:ಪುಟ್ಟಣ್ಣ ಕಣಗಾಲ್
ಗಾಯಕರು: ಪಿ ಬಿ ಶ್ರೀನಿವಾಸ್

ಬಾರೆ ......ಬಾರೆ ......ಚೆಂದದ ಚೆಲುವಿನ ತಾರೆ 
ಬಾರೆ ......ಬಾರೆ ......ಒಲವಿನ ಚಿಲುಮೆಯ ತಾರೆ

ಕಣ್ಣೀನ ಸನ್ನೆಯ ಸ್ವಾಗತ ಮರೆಯಲಾರೆ .
ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ
ಕಣ್ಣೀನ ಸನ್ನೆಯ ಸ್ವಾಗತ ಮರೆಯಲಾರೆ .
ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ
ಅಂದದ ಹೇಣ್ಣಿನ ನಾಚಿಕೆ ಮರೆಯಲಾರೆ
ಮೌನ ಗೌರಿಯ ಮೋಹದಾ ಕೈ ಬಿಡಲಾರೆ .......
ಬಾರೆ......ಬಾ....ರೆ.....ಚೆಂದದ ಚೆಲುವಿನ ತಾ.....ರೆ.....
ಒಲವಿನ ಚಿಲುಮೆಯ ತಾರೆ

ಬಾರೆ ......ಬಾರೆ ......ಚೆಂದದ ಚೆಲುವಿನ ತಾರೆ
ಬಾರೆ ......ಬಾರೆ ......ಒಲವಿನ ಚಿಲುಮೆಯ ತಾರೆ

ಕೈ ಬಳೆ ನಾದದ ಗುಂಗನು ಅಳಿಸಲಾರೆ,
ಮೈಮನ ಸೋಲುವ ಮತ್ತನು ಮರೆಯಲಾರೆ,
ಕೈ ಬಳೆ ನಾದದ ಗುಂಗನು ಅಳಿಸಲಾರೆ,
ಮೈಮನ ಸೋಲುವ ಮತ್ತನು ಮರೆಯಲಾರೆ,
ರೂಪಸಿ,ರಂಭೆಯ,ಸಂಗವ ತೊರೆಯಲಾರೆ,
ಮೌನ ಗೌರಿಯ ಮೋಹದಾ ಕೈ ಬಿಡಲಾರೆ .......
ಬಾರೆ......ಬಾ....ರೆ.....ಚೆಂದದ ಚೆಲುವಿನ ತಾ.....ರೆ.....
ಒಲವಿನ ಚಿಲುಮೆಯ ತಾರೆ



ಜನ್ಮ ಜನ್ಮದಾ ಅನುಬಂಧ :ತಂಗಾಳಿಯಲ್ಲಿ ನಾನು ತೇಲಿ ಬಂದೆ,

ಚಿತ್ರ:ಜನ್ಮ ಜನ್ಮದಾ ಅನುಬಂಧ
ಸಂಗೀತ:ಇಳೆಯರಾಜ
ಸಾಹಿತ್ಯ:ಉದಯಶಂಕರ್ 
ನಿರ್ದೇಶನ:ದಿ  ಶಂಕರನಾಗ್
ಗಾಯಕರು: S ಜಾನಕೀ


ಓಹೋ......ಹೋ ............. ಓಹೋ......ಹೋ .............
ತಂಗಾಳಿಯಲ್ಲಿ ನಾನು ತೇಲಿ ಬಂದೆ,
ನಿನ್ನನ್ನು ಪ್ರೀತಿಯಿಂದ ಸೇರಲೆಂದೇ,
ಓ ಇನಿಯಾ .........ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು ಬಾ... ಬಾ.... ನನ್ನನು ಸೇರಲು ಓಹೋ......ಹೋ .............

ನಿನ್ನಾ ಎಲ್ಲೂ ಕಾಣದೆ ಹೋಗಿ ,ನನ್ನಾ ಜೀವ ಕೂಗಿ ಕೂಗಿ ,
ಏಕಾಂಗಿಯಾಗಿ ನಾನು ನೊಂದು ಹೋದೆ ,
ಹೀಗೇಕೆ ದೂರ ಮಾಡಿದೆ......ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು...ಬಾ...ಬಾ...... ನನ್ನನು ಸೇರಲು ಓಹೋ......ಹೋ .............


ಏತಕೆ ಹೀಗೆ ಅಲೆಯುತಲಿರುವೆ ,
ಯಾರನು ಹೀಗೆ ಹುಡುಕುತಲಿರುವೆ ,
ಕಣ್ಣಲ್ಲಿ ನನ್ನಾ ಬಿಂಬ ಇಲ್ಲವೇನು ,
ನೀ ಕಾಣೆ ಏನು ನನ್ನನು ....ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು...ಬಾ...ಬಾ...... ನನ್ನನು ಸೇರಲು

ತಂಗಾಳಿಯಲ್ಲಿ ನಾನು ತೇಲಿ ಬಂದೆ,
ನಿನ್ನನ್ನು ಪ್ರೀತಿಯಿಂದ ಸೇರಲೆಂದೇ,
ಓ ಇನಿಯಾ .........ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು ಬಾ... ಬಾ.... ನನ್ನನು ಸೇರಲು ಓಹೋ......ಹೋ .............






Wednesday, January 19, 2011

ಮಾನಸಸರೋವರ : ನೀನೇ.......ಸಾಕಿದಾ ಗಿಣಿ

ಚಿತ್ರ:ಮಾನಸಸರೋವರ 
ಸಂಗೀತ:ವಿಜಯ ಭಾಸ್ಕರ್
ಸಾಹಿತ್ಯ:ವಿಜಯನಾರಸಿಂಹ
ನಿರ್ದೇಶನ:ಪುಟ್ಟಣ್ಣ ಕಣಗಾಲ್
ಗಾಯಕರು: S P  ಬಾಲಸುಬ್ರಮಣ್ಯಂ


ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....
ಹದ್ದಾಗಿ ಕುಕ್ಕಿತಲ್ಲೂ ,ನಿನ್ನಾ ಹದ್ದಾಗಿ ಕುಕ್ಕಿತಲ್ಲೂ...
ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....


ಚಿನ್ನಾದ ಚೂರಿ ಚೆಂದಾವ ತೋರಿ,ಚಿನ್ನಾದ ಚೂರಿ ಚೆಂದಾವ ತೋರಿ,
ಬೆನ್ನಲ್ಲೇ ತೂರಿತಲ್ಲೋ........, ಬೆನ್ನಲ್ಲೇ ತೂರಿತಲ್ಲೋ,......
ನೆತ್ತಾರ ಹೀರಿತಲ್ಲೋ,ನಿನ್ನಾ ನೆತ್ತಾರ ಹೀರಿತಲ್ಲೋ ......

ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....

ಬೀಸೋಗಾಳಿ ಬಿರುಗಾಳಿಯಾಗಿ,ಬೀಸೋಗಾಳಿ ಬಿರುಗಾಳಿಯಾಗಿ,
ಬೆಂಕಿಯ ಮಳೆ ತಂತಲ್ಲೋ......,ಬೆಂಕಿಯ ಮಳೆ ತಂತಲ್ಲೋ.......,
ಬೆಂಕೀಲಿ ಬೆಂದೆಯಲ್ಲೋ,ಉರಿ ಬೆಂಕೀಲಿ ಬೆಂದೆಯಲ್ಲೋ,

ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....

ಹೂವಾಗಿ ಅರಳಿ ಹಾವಾಗಿ ಕೆರಳಿ,ಹೂವಾಗಿ ಅರಳಿ ಹಾವಾಗಿ ಕೆರಳಿ,
ಪ್ರಾಣಾವ ಹಿಂಡಿತಲ್ಲೋ ...... ಪ್ರಾಣಾವ ಹಿಂಡಿತಲ್ಲೋ ......
ಎದೆಯಲ್ಲಾ ಸಿಡಿಯಿತಲ್ಲೋ........,ನಿನ್ನಾ ನಗುವೆಲ್ಲಾ ಹುಡುಗಿತಲ್ಲೋ......

ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....
ಹದ್ದಾಗಿ ಕುಕ್ಕಿತಲ್ಲೂ ,ನಿನ್ನಾ ಹದ್ದಾಗಿ ಕುಕ್ಕಿತಲ್ಲೂ...
ನೀನೇ.......ಸಾಕಿದಾ ಗಿಣಿ ....ನಿನ್ನಾ ಮುದ್ದಿನಾ ಗಿಣಿ ....

ಸನಾದಿ ಅಪ್ಪಣ್ಣ :ನಿನಗಾಗಿ ಓಡೋಡಿ ಬಂದೇ

ಚಿತ್ರ: ಸನಾದಿ ಅಪ್ಪಣ್ಣ
ಸಂಗೀತ:G K ವೆಂಕಟೇಶ್ 
ಸಾಹಿತ್ಯ: ಚಿ .ಉದಯಶಂಕರ್
ನಿರ್ದೇಶನ:ವಿಕ್ರಂ ಶ್ರೀನಿವಾಸ್
ಗಾಯಕರು: ಡಾ.ರಾಜಕುಮಾರ್

ನಿನಗಾಗಿ ಓಡೋಡಿ ಬಂದೇ,ನಿನಗಾಗಿ ಓಡೋಡಿ ಬಂದೇ  ,ನಾನು
ಕಾಣದೇ ಹೀಗೇಕೆ ಮರೆಯಾಗಿ ಹೋದೆ,  ಮರೆಯಾಗಿ ಹೋದೆ,  ನೀನು
ನಿನಗಾಗಿ ಓಡೋಡಿ ಬಂದೇ...

ತಣ್ಣನೇ ಗಾಳಿ ಬೀಸಿದ ಹಾಗೆ ,ಬಾಳಲಿ ಬಂದೆ ಸಂತಸ ತಂದೆ ,
ಕಣ್ಣಿಗೇ ಮಿಂಚು ಕಾಣುವ ಹಾಗೆ ಬಾಳಿನ ಬಾನಲಿ  ಬೆಳಕನು ತಂದೆ,
ಸ್ನೇಹದೀ ಸೇರಿ ....ಮೋಹವ ತೋರಿ .....ಸನಿಹಕೆ ಸಾರಿ ...ಮನವನು ಸೇರಿ .....
ಏಕೇ.......ನೀ ಮರೆಯಾದೆ ......

ನಿನಗಾಗಿ ಓಡೋಡಿ ಬಂದೇ,ನಿನಗಾಗಿ ಓಡೋಡಿ ಬಂದೇ  ,ನಾನು
ಕಾಣದೆ ಹೀಗೇಕೆ ಮರೆಯಾಗಿ ಹೋದೆ,  ಮರೆಯಾಗಿ ಹೋದೆ,  ನೀನು
ನಿನಗಾಗಿ ಓಡೋಡಿ ಬಂದೇ...

ಬಿಸಿಲಿಗೆ ಹೂವು ಬಾಡುವ ಹಾಗೆ,ಕಾಣದಿ ನೊಂದೆ ವಿರಹದಿ ಬೆಂದೆ ,
ಮುಳ್ಳಿನ ಬಲೆಯ ಹಿಡಿಯಂತಾಗಿ,ಅಳುತಿದೆ ಮನವು ನಗುತಿದೆ ತನುವು ,
ತೀರದ ನೋವಾ ....ತಾಳದು ಜೀವಾ.....ಕಾಣದೆ ನೀನು ,ಉಳಿಯೇನು ನಾನು .....'
ಏಕೇ .....ನೀ ದೂರಾದೆ ............ದೂರಾದೆ .......

ನಿನಗಾಗಿ ಓಡೋಡಿ ಬಂದೇ,ನಿನಗಾಗಿ ಓಡೋಡಿ ಬಂದೇ  ,ನಾನು
ಕಾಣದೇ ಹೀಗೇಕೆ ಮರೆಯಾಗಿ ಹೋದೆ,  ಮರೆಯಾಗಿ ಹೋದೆ,  ನೀನು
ನಿನಗಾಗಿ ಓಡೋಡಿ ಬಂದೇ


ಬೆಂಕಿಯ ಬಲೆ : ಬಿಸಿಲಾದರೇನು ......ಮಳೆಯಾದರೇನು ...

ಚಿತ್ರ: ಬೆಂಕಿಯ ಬಲೆ
ಸಂಗೀತ:G K ವೆಂಕಟೇಶ್ 
ಸಾಹಿತ್ಯ: ಚಿ .ಉದಯಶಂಕರ್
ನಿರ್ದೇಶನ:ದೊರೈ -ಭಗವಾನ್
ಗಾಯಕರು: S P  ಬಾಲಸುಬ್ರಮಣ್ಯಂ

ಬಿಸಿಲಾದರೇನು ......ಮಳೆಯಾದರೇನು ....,
ಬಿಸಿಲಾದರೇನು ......ಮಳೆಯಾದರೇನು ........
ಜೊತೆಯಾಗಿ ಇಂದು ನಾನಿಲ್ಲವೇನು....
ನೀ ನನ್ನ ಜೀವಾ ಎಂದಿಗೂ ......
ಬಿಸಿಲಾದರೇನು ......ಮಳೆಯಾದರೇನು ....,ಬಿಸಿಲಾದರೇನು .....

ಹೂವು ಹಾವಾದರೇನು,ಹಾಲು ವಿಷವಾದರೇನು ,
ಹೂವು ಹಾವಾದರೇನು,ಹಾಲು ವಿಷವಾದರೇನು ,
ಈ ನಿನ್ನ ನೋಟ ಬೆರೆತಾಗ ಮುಳ್ಳು ಹೂವಾಗಿ  ಅರಳದೇನು.
ಬುವಿಯೇ ಬಾಯ್ ಬಿಟ್ಟರೇನು,ಸಿಡಿಲೇ ಎದುರಾದರೇನು..
ನನ್ನಾಣೆ ನಲ್ಲೇ ನಾ ನಿನ್ನ ಬಿಡೆನು,ಪ್ರಾಣಕ್ಕೆ ಪ್ರಾಣ ಕೊಡುವೆ
ಕಂಬನಿ ,ಮಿಡಿಯದೆ ,ಇನ್ನು ನಗಲಾರೆ ಏನು ... 

ಬಿಸಿಲಾದರೇನು ......ಮಳೆಯಾದರೇನು ....,ಬಿಸಿಲಾದರೇನು .....

ಸೆಳೆವ ಸುಳಿಯಾದರೇನು,ಬೆಂಕಿಯ ಬಲೆಯಾದರೇನು,
ಸೆಳೆವ ಸುಳಿಯಾದರೇನು,ಬೆಂಕಿಯ ಬಲೆಯಾದರೇನು,
ಈ ಬಾಳು ಎಂದು ಹೋರಾಟ ತಾನೆ ,ಬಿಡು ಇನ್ನು ಚಿಂತೆಯನ್ನು
ಯಾರೇನು ಅಂದರೇನು ,ಊರೇ ಎದುರಾದರೇನು ,
ಕೊನೆತನಕ ನಾನು ಹೋರಾಡಿ ಗೆಲುವೇ,ನಿನ್ನನ್ನು ನಾನು ಬಿಡೆನು
ಕೊರಗದೆ ಮರುಗದೆ ನಲ್ಲೇ ನಗಲಾರೆಯೇನು .....

ಬಿಸಿಲಾದರೇನು ......ಮಳೆಯಾದರೇನು ....,ಬಿಸಿಲಾದರೇನು ...

ಹಾವಿನ ಹೆಡೆ : ಹೂವಿಂದ ಬರೆವ ಕಥೆಯಾ

ಚಿತ್ರ: ಹಾವಿನ ಹೆಡೆ
ಸಂಗೀತ:G K ವೆಂಕಟೇಶ್ 
ಸಾಹಿತ್ಯ: ಚಿ .ಉದಯಶಂಕರ್
ನಿರ್ದೇಶನ:ಸೋಮಶೇಕರ್
ಗಾಯಕರು:ಡಾ.ರಾಜಕುಮಾರ್

ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೆ,ನೋವನ್ನು ತಂದೆ ನಾನು
sorry i am very sorry
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು

ತಿಳಿಯಾದ ನೀರಿನಲ್ಲಿ ,ಕಲ್ಲೊಂದು ಜಾರಿದಂತೆ
ಇಂಪಾಗಿ ಹಾಡುವಾಗ,ಅಪಸ್ವರವೂ ಮೂಡಿದಂತೆ
ನಾ ಆ ದಿನಾ ಆಡಿದ ನುಡಿ ಒರಟಾಯಿತು, ಕಹಿಯಾಯಿತು
ಇನ್ನೆಂದು ಹೀಗೆ ನಾ ಮಾಡೆನು,ನನ್ನಾಣೆ ನಂಬು ನೀ ನನ್ನನು
sorry i am very ಸಾರೀ

ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು

ನಿನ್ನಂತೆ ನೊಂದೆ ನಾನು ,ಸುಳ್ಳೆಂದು ಹೇಳೆನು
ನಮ್ಮೊಲವು ಬಾಡಿತೆಂದು ಮಿಡಿದೆ ಕಣ್ಣೀರನು
ಆ ವೇದನೆ ತಾಳದೆ ದಿನಾ ಅಲೆದಾಡಿದೆ... ಹುಡುಕಾಡಿದೆ ...
ವಿಷಾದವನ್ನು ಬಿಡು ಬಿಡು,ಸಂತೋಷವನ್ನು ಕೊಡು ಕೊಡು

ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೆ,ನೋವನ್ನು ತಂದೆ ನಾನು
ಹೂವಿಂದ ಬರೆವ ಕಥೆಯಾ,ಮುಳ್ಳಿಂದ ಬರೆದೆ ನಾ.........

Thursday, January 13, 2011

ಹೊಂಬಿಸಿಲು : ನೀರಬಿಟ್ಟು ನೆಲದ ಮೇಲೆ

ಚಿತ್ರ: ಹೊಂಬಿಸಿಲು
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ:ಗೀತಪ್ರಿಯ
ನಿರ್ದೇಶನ:B S  ಸೋಮಶೇಕರ್
ಗಾಯಕರು:ಎಸ್.ಪಿ.ಬಾಲ ಸುಬ್ರಮಣ್ಯಮ್ 

ಹೇಹೇಹೇ........ಓಹೋಹೋಹೋ........ಆಹಾ ಆಹಾಹಾಹಾ.........
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು ಜೀವನಾ ಸಾಗದು
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು ಜೀವನಾ ಸಾಗದು
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು

ಲೋಕದಲ್ಲಿ ಗಂಡು ಹೆಣ್ಣಿಗಾಸರೆ ಆದರಿಲ್ಲಿ ನಾನು ನಿನ್ನಾ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ ಆದರಿಲ್ಲಿ ನಾನು ನಿನ್ನಾ ಕೈಸೆರೆ
ಕೂಡಿ ನಲಿವಾ ಆಸೆ ಮನದೀ ಕಾದಿರೆ
ಹಿತವು ಎಲ್ಲಿ ನಾವು ಬೇರೆ ಆದರೆ ,ಹಿತವು ಎಲ್ಲಿ ನಾವು ಬೇರೆ ಆದರೆ

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನಾ ಬಿಟ್ಟು ನನ್ನಾ ನನ್ನಾ ಬಿಟ್ಟು ನಿನ್ನಾ
ಜೀವನಾ ಸಾಗದು ಜೀವನಾ ಸಾಗದು
ಆಹಾ ...ಹಾ...ಹಾ....ಲ ಲ ಲಾ .......ಹೊಂ ..ಹೊಂ ...ಹೊಂ......

ಹುಲಿ ಹಾಲಿನ ಮೇವು :ಬೆಳದಿಂಗಳಾಗಿ ಬಾ

ಚಿತ್ರ: ಹುಲಿ ಹಾಲಿನ ಮೇವು
ಸಂಗೀತ: G K ವೆಂಕಟೇಶ್
ಸಾಹಿತ್ಯ:ಚಿ. ಉದಯಶಂಕರ್
ನಿರ್ದೇಶನ:ವಿಜಯ್ 
ಗಾಯಕರು:ಡಾ!!ರಾಜಕುಮಾರ್

ಬೆಳದಿಂಗಳಾಗಿ ಬಾ ..........
ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ................

ಕಣ್ಣಲ್ಲಿ ತುಂಬಿ ಚೆಲುವಾ,ಎದೆಯಲ್ಲಿ ತುಂಬಿ ಒಲವಾ
ನನ್ನೇದೆಯ ತಾಳ ನೀನು,ನನ್ನುಸಿರ ರಾಗ ನೀನು
ನನ್ನೂಡಲ ಜೀವ ನೀ ಸಂತೋಷವೇ .........
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ,
ನೀನಿಲ್ಲವಾದರೆ  ಈ ಪ್ರಾಣ ನಿಲ್ಲದೆ.......

ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ................

ಕಾವೇರಿ ತಾಯಿ ನನ್ನಾ,ಬಾ ಎಂದು ಕೂಗಿ ನಿನ್ನಾ
ನೀಡಿದಳು ಬಾಳಿಗೆ ಬೆಳಕಾಗಲೂ........
ಆ ದೇವಿಯಾಣೇ ನೀನೆ ಸಂಗಾತಿ ಕೇಳೇ ಜಾಣೆ,
ನೀಡುವೇನು ಬಾಷೆಯ,ಬಿಡು ಚಿಂತೆಯಾ .....
ಈ ನಮ್ಮ ಪ್ರೇಮಕೆ,ನಾ ಕೊಡಲೇ ಕಾಣಿಕೆ....
ಈ ನಮ್ಮ ಪ್ರೇಮಕೆ,ನಾ ಕೊಡಲೇ ಕಾಣಿಕೆ....

ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ................

Wednesday, January 12, 2011

ಆಲೆಮನೆ : ನಮ್ಮೂರ ಮಂದಾರ ಹೂವೆ

ಚಿತ್ರ: ಆಲೆಮನೆ
ಸಂಗೀತ: L ವೈಧ್ಯನಾಥನ್
ಸಾಹಿತ್ಯ:ದೊಡ್ಡ ರಂಗೇಗೌಡ
ನಿರ್ದೇಶನ:ಮೋಹನಕುಮಾರ್

ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು

ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ ...............

ಕಣ್ಣಲ್ಲೇ ಕರೆದು ,ಹೊಂಗನಸಾ ತೆರೆದು,ಸಂಗಾತಿ ಸಂಪ್ರೀತಿ ಸೆಳೆದೆ.
ಅನುರಾಗ ಹೊಳೆದು,ಅನುಬಂದ ಬೆಳೆದು,ಸಮ್ಮೋಹ ಸಂಬಂದ ಮಿಡಿದೆ,
ಮೂಡಿದಾ..ಪ್ರೇಮದಾ...ಸೊಗಸಾದ ಕಾರಂಜಿ ಮಿಡಿದೆ
ಸೊಗಸಾದ ಕಾರಂಜಿ ಮಿಡಿದೆ

ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ ...............

ಒಡಲಾಳ ಮೊರೆದು,ಒಡನಾಟ ಮೆರೆದು,ಒಡನಾಡಿ ಬಾಂಧವ್ಯ ಕಂಡೆ,
ಋತುಮಾನ ಮೀರಿ,ಹೊಸಗಾನ ತೋರಿ ,ಹಿತವಾದ ಮಾದುರ್ಯ ಮಿಂದೆ,
ತೀರದ...ಮೋಹದ.....ಇನಿದಾದ ಆನಂದ ತಂದೆ, ಇನಿದಾದ ಆನಂದ ತಂದೆ,

ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು,ಬರಿದಾದ ಮನದಲ್ಲಿ ಮಿನುಗು

ಜಿಮ್ಮಿಗಲ್ಲು :ತುತ್ತು ಅನ್ನ ತಿನ್ನೋಕೆ,

ಚಿತ್ರ: ಜಿಮ್ಮಿಗಲ್ಲು
ಸಂಗೀತ:ವಿಜಯ ಭಾಸ್ಕರ್
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ: ರವಿ
ಗಾಯಕರು:ವಿಷ್ಣುವರ್ಧನ್
ಹ್ಞೂ  ಹ್ಞೂ......ಹ್ಞೂ ಹ್ಞೂ ......ಆಹಾ ಹಾ ..ಆಹಾ ಹಾ...ಆಹಾ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ

ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು
ಊರಾಗ್ ಒಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಹಳ್ಳಿ ನನ್ನಾ,ಹೋಗೋ ಅಂದರೇನು,ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ

ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ದುಡಿಯೋದಕ್ಕೆ ಮೈಯಾ ತುಂಬಾ ಶಕ್ತಿ ತುಂಬೈತೆ
ಅಡ್ಡದಾರಿ ಹಿಡಿಯೋದ್ ತಪ್ಪು ಅಂತಾ ಗೊತೈತೆ
ಕಷ್ಟ ಒಂದೇ ಬರದು,ಸುಖವು ಬರದೆ ಇರದು,ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರ್ತೈತೆ ಆಂ.......

ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ

ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಾಗಲ್ಲ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೋಕಗಲ್ಲಾ
ಹುಟ್ಟಿದ ಮನುಷಾ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೆ ನಂಗೆ,ಅಪ್ಪ ಅಮ್ಮ ಎಲ್ಲಾ,,ಸಾಯೋಗಂಟ ನಂಬಿದವರ ಕೈ ಬಿಡೋಕಿಲ್ಲಾ


ತುತ್ತು ಅನ್ನ ತಿನ್ನೋಕೆ,ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ಹಾಯಾಗಿರೋಕೆ ಹಾಯಾಗಿರೋಕೆ

ಆಟೋರಾಜ : ನಲಿವಾ ಗುಲಾಬಿ ಹೂವೆ

ಚಿತ್ರ: ಆಟೋರಾಜ
ಸಂಗೀತ:ಇಳಯರಾಜ
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ: ವಿಜಯ್
ಗಾಯಕರು:ಎಸ್.ಪಿ.ಬಾಲ ಸುಬ್ರಮಣ್ಯಮ್ 


ನಲಿವಾ ಗುಲಾಬಿ ಹೂವೆ,ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೂ,ಅರಿಯೆ ನನ್ನಲ್ಲಿ ಛಲವೂ
ನಲಿವಾ ಗುಲಾಬಿ ಹೂವೆ ....ಒಲವೂ ....ಛಲವೂ...ಒಲವೂ ....ಛಲವೂ...

ಸುಳಿದೇ ತಂಗಾಳಿಯಂತೆ,ನುಡಿದೇ ಸಂಗೀತದಂತೆ,
ಸುಳಿದೇ ತಂಗಾಳಿಯಂತೆ,ನುಡಿದೇ ಸಂಗೀತದಂತೆ,
ಒಲವಿನ ಬಲೆಯಲಿ ಸೆಳೆಯುತ ಕುಣಿದೆ.ಸೊಗಸಾಗಿ,ಹಿತವಾಗಿ
ಮನವಾ ನೀ ಸೇರಲೆಂದೇ,ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ .... ಇಂದೇಕೆ ದೂರಾದೆ,ಹೀಗೇಕೆ ಮರೆಯಾದೆ


ನಲಿವಾ ಗುಲಾಬಿ ಹೂವೆ,ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೂ,ಅರಿಯೆ ನನ್ನಲ್ಲಿ ಛಲವೂ
ನಲಿವಾ ಗುಲಾಬಿ ಹೂವೆ ....ಒಲವೂ ....ಛಲವೂ...ಒಲವೂ ....ಛಲವೂ...


ಸುಮವೇ ನೀ ಬಾಡದಂತೆ,ಬಿಸಿಲಾ ನೀ ನೋಡದಂತೆ,
ಸುಮವೇ ನೀ ಬಾಡದಂತೆ,ಬಿಸಿಲಾ ನೀ ನೋಡದಂತೆ,
ನೆರಳಲಿ,ಸುಖದಲಿ,ನಗುತಿರು ಚೆಲುವೆ ಎಂದೆಂದೂ ಎಂದೆಂದೂ
ಇರು ನೀ ಹಾಯಾಗಿ ಹೀಗೆ,ಇರಲಿ ನನಗೆಲ್ಲ ಬೇಗೇ
ಕನಸಲಿ ನೋಡಿದ ಸಿರಿಯನು ಮರೆವೆ ನಿನಗಾಗಿ,ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ ನಿನಗಾಗಿ,ನನಗಾಗಿ ನಿನಗಾಗಿ,ನನಗಾಗಿ

ನಲಿವಾ ಗುಲಾಬಿ ಹೂವೆ,ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವೂ,ಅರಿಯೆ ನನ್ನಲ್ಲಿ ಛಲವೂ
ನಲಿವಾ ಗುಲಾಬಿ ಹೂವೆ ....ಒಲವೂ ....ಛಲವೂ...ಒಲವೂ ....ಛಲವೂ...

ಮನ ಮೆಚ್ಚಿದ ಹುಡುಗಿ : ಉಸಿರೇ .......ಉಸಿರೇ

ಚಿತ್ರ: ಮನ ಮೆಚ್ಚಿದ ಹುಡುಗಿ
ಸಂಗೀತ:ಉಪೇಂದ್ರಕುಮಾರ್
ಸಾಹಿತ್ಯ:ಚಿ.ಉದಯಶಂಕರ್
ನಿರ್ದೇಶನ:ಎಂ.ಎಸ್.ರಾಜಶೇಕರ್ 
ಗಾಯಕರು:S P  ಬಾಲಸುಬ್ರಮಣ್ಯಂ

 
ಉಸಿರೇ .......ಆಹಾ ...ಆಹಾ ....ಆಹಾ .....
ಉಸಿರೇ .......ಆಹಾ ...ಆಹಾ ....ಆಹಾ .....
ಒಡಲನು ಬಿಟ್ಟು ಹೋದೆಯಾ .......ಆಹಾ ...ಆಹಾ ....ಆಹಾ .....
ಉಸಿರೇ .......ಉಸಿರೇ ....... ಒಡಲನು ಬಿಟ್ಟು ಹೋದೆಯಾ.......
ಉಸಿರೇ .......ಉಸಿರೇ ....... ಒಡಲನು ಬಿಟ್ಟು ಹೋದೆಯಾ.......
ನನ್ನ ಬಾಳಿನ ಜ್ಯೋತಿಯಾಗಿ ,ನನ್ನ ಪ್ರೇಮದ ಮೂರ್ತಿಯಾಗಿ,
ನನ್ನ ಪ್ರಾಣದ ಪ್ರಾಣವಾಗಿ ಎಲ್ಲಿ ಹೋದೆ ದೂರವಾಗಿ
ಚೆಲುವೇ......ಒಲವೇ...... ಚೆಲುವೇ......ಒಲವೇ......
ಉಸಿರೇ.......................

ಹಗಲೋ ಇರುಳೋ ಅರಿಯದೆ ಹೋದೆ
ಚಿಂತೆಯ ಭಾರ ತಾಳದೆ ನೂಂದೆ
ಹಗಲೋ ಇರುಳೋ ಅರಿಯದೆ ಹೋದೆ
ಚಿಂತೆಯ ಭಾರ ತಾಳದೆ ನೂಂದೆ
ಕಣ್ತುಂಬ ನೋಡದೇನೆ,ಸವಿಮಾತು ಹಾಡದೇನೆ
ನೋವೆಲ್ಲಾ ಮರೆಯದೇನೆ ಈ ಜೀವ ಉಳಿವುದೇನೆ
ಚೆಲುವೇ......ಒಲವೇ...... ಚೆಲುವೇ......ಒಲವೇ......

ಉಸಿರೇ .......ಉಸಿರೇ ....... ಒಡಲನು ಬಿಟ್ಟು ಹೋದೆಯಾ......

ಮುಗಿಲೇ ಕರಗಿ ಅಳುತಿರುವಾಗ
ಹೃದಯವು ನೊಂದು ಕೂಗಿರುವಾಗ
ಮುಗಿಲೇ ಕರಗಿ ಅಳುತಿರುವಾಗ
ಹೃದಯವು ನೊಂದು ಕೂಗಿರುವಾಗ
ನನ್ನ ಮಾತು ಕೇಳದೇನೆ,ನನ್ನ ನೆನಪು ಬಾರದೇನೆ,
ನಮ್ಮ ಪ್ರೇಮ ಮರೆತೆಯನೆ ,ನನ್ನ ಸ್ನೇಹ ಬೇಡವೇನೆ
ಚೆಲುವೇ......ಒಲವೇ...... ಚೆಲುವೇ......ಒಲವೇ......

ಉಸಿರೇ .......ಉಸಿರೇ ....... ಒಡಲನು ಬಿಟ್ಟು ಹೋದೆಯಾ......
ಉಸಿರೇ .......ಉಸಿರೇ ....... ಒಡಲನು ಬಿಟ್ಟು ಹೋದೆಯಾ......

ಸೀತಾ : ಮದುವೆಯ ಈ ಬಂಧಾ

ಚಿತ್ರ: ಸೀತಾ
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ:R N  ಜಯಗೋಪಾಲ್
ನಿರ್ದೇಶನ: ವಾದಿರಾಜ್
ಗಾಯಕರು:S  P  ಬಾಲಸುಬ್ರಮಣ್ಯಂ

ಶುಭಾಶಯಾ .................ಶುಭಾಶಯಾ.................
ಮದುಮಗನಿಗೂ......ಮದುಮಗಳಿಗೂ .......ಶುಭಾಶಯಾ.....
ಹೊಸ ಹರೆಯದ ,ಹೊಸ ಜೋಡಿಗೆ ಶುಭಾಶಯ.......

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ


ಸವಿಯಾದ ಮಾತು , ಸಿಹಿಯಾದ ಊಟ ,ಸೊಗಸಾದ ನೋಟವಿರಲಿ
ಸವಿಯಾದ ಮಾತು , ಸಿಹಿಯಾದ ಊಟ ,ಸೊಗಸಾದ ನೋಟವಿರಲಿ
ಮನೆ ತುಂಬುವಂತ,ನಗೆ ಚೆಲ್ಲುವಂತ ,ಮುದ್ದಾದ ಮಗುವು ಬರಲಿ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ

ಮನಸನ್ನು ಅರಿತು, ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ಮನಸನ್ನು ಅರಿತು, ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ನೂರೊಂದು  ವರುಷ ,ಚೆಲ್ಲಿರಲಿ ಹರುಷ ,ಬೆಳಗಿರಲಿ ಒಲವ ಹಣತೆ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧಾ

ಸಿರಿತನದ ಸಿಹಿಯು ,ಬಡತನದ ಕಹಿಯು ,ನಿಮಗೆಂದು ಒಂದೇ ಇರಲಿ
ಸಿರಿತನದ ಸಿಹಿಯು ,ಬಡತನದ ಕಹಿಯು ,ನಿಮಗೆಂದು ಒಂದೇ ಇರಲಿ
ಸಮನಾದ ಪ್ರೀತಿ, ತೋರುವುದೇ ರೀತಿ,ಬಿರುಗಾಳಿ ಏನೇ ಬರಲಿ

ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ  ತೀರದ
ಮದುವೆಯ ಈ ಬಂಧಾ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ.



ಮನಸೇ ಓ ನನ್ನ ಮನಸೇ

ಮನಸೇ ಓ ನನ್ನ ಮನಸೇ
ಏನಾಗಿದೆ ನಿನಗಿಂದು ನನ್ನ ಮನಸೇ
ಚೆಲುವೆಯ ಸ್ಪರ್ಶದಿಂದ ಕರಗಿ ಹೋದ ಆ ಘಳಿಗೆ
ಬಿಡದೆ ಕಾಡಿದೆ ನನ್ನ ಮನಸಿನ ಓಳಗೆ

ನೀನು ನನ್ನ ಸನಿಹ ಇದ್ದ ಆ ಕ್ಷಣಗಳು
ಮರೆಯಲಾಗದಂಥಹ ಸುಂದರ ನೆನಪುಗಳು
ಪದೇ ಪದೇ ಆ ನೆನಪು ಕಾಡುತಿಹುದು
ನಾ ಮಲಗಿದಾಗ ರಾತ್ರಿ ಕಂಡ ಕನಸಿನಲ್ಲಿ ಅಂದು
ಆ ಕನಸನ್ನು ನನಸಾಗಿಸಲು ಹೊರಟಿಹೆ ನಾನಿಂದು

ಸೂತ್ರದಾರ ಆಡಿಸಿದ ಕೈಗೊಂಬೆಯಂತೆ
ನನ್ನ ಬಾಳಾಪುಟದಲಿ ನೀ ನಲಿದಾಡಿದೆ
ಆ ನಲಿದಾಡಿದ ಸವಿ ನೆನಪುಗಳನ್ನು
ಯಾವುದೇ ಕಾರಣಕ್ಕೂ ನನ್ನಿಂದ ಮರೆಯಲಾಗದು

ನೀ ನನ್ನ ಜೊತೆಯಲ್ಲಿ ಇದ್ದಂಥ ದಿನಗಳಲ್ಲಿ
ಬರಿ ಕನಸಿನ ಮೂಟೆಯನ್ನೇ ಹೋತುತಂದೆ
ಆ ಕನಸಿನ ಮೂಟೆಯನ್ನು ನನಸಾಗಿಸಲು
ನಾ ಮಾಡಿದ ಪ್ರಯತ್ನವು  ಫಲಿಸದೇ
ಕಾಮನ ಬಿಲ್ಲಿನಂತೆ ಕರಗಿ ನೀರಾಗಿ ಹೋಯಿತು

Tuesday, January 11, 2011

ನವ ಜೋಡಿಗಳಿಗೆ ಹೊಸ ಜೀವನದ ಶುಬಾಶಯಗಳು

ಬಾಳಿನ ಕನ್ನಡಿಯಲ್ಲಿ ಮಿಡಿಯುತಿರುವ
ನವ ಜೋಡಿಗಳ ಹೃದಯವು
ಮದುವೆಯ ದಿಬ್ಬಣವನ್ನೆರುತಾ
ಜೀವನವೆಂಬ ಬಂಡಿಯಲ್ಲಿ
ಸುಖ,ಸಂತೋಷ,ಶಾಂತಿಯು
ಸದಾಕಾಲ ತುಂಬಿ ತುಳು ಕಾಡುತಾ
ನಿಮ್ಮ ದಾಂಪತ್ಯ ಜೀವನದ ಹಾದಿಯಲ್ಲಿ
ಪರಸ್ಪರ ಪ್ರೀತಿ,ವಿಶ್ವಾಸ,ನಂಬಿಕೆ ಎಂಬುದು
ಉಕ್ಕಿ ಹಾಲಿನ ಹೊಳೆಯನ್ನೇ ಹರಿಸಲಿ
                           ಎಂದು ಹಾರೈಸುವ  

ಬಡವರ ಬಂಧು :ನಿನ್ನ ಕಂಗಳ ಬಿಸಿಯ ಹನಿಗಳು

ಚಿತ್ರ : ಬಡವರ ಬಂಧು
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಎಮ್.ರಂಗರಾವ್
ಗಾಯನ: ಡಾ.ರಾಜ್ ಕುಮಾರ್
ನಿರ್ದೇಶನ:ವಿಜಯ್

ನಿನ್ನ ಕಂಗಳ ಬಿಸಿಯ ಹನಿಗಳು,ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ,ನೂರು ನೆನಪು ಮೂಡಿವೆ...
ನಿನ್ನ ಕಂಗಳ ಬಿಸಿಯ ಹನಿಗಳು,ನೂರು ಕಥೆಯಾ ಹೇಳಿವೆ


ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ
ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ 
ಬಿಸುಲು ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ
ಆ ಪ್ರೀತಿಯ ಮನ ಮರೆವುದೆ....
ನಿನ್ನ ಕಂಗಳ ಬಿಸಿಯ ಹನಿಗಳು,ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ,ನೂರು ನೆನಪು ಮೂಡಿವೆ.


ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲಿ ಬೆಳೆದೆನು,ಆ.....ಆ.....ಆ....ಆ....
ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲಿ ಬೆಳೆದೆನು 
ನನ್ನ ತಾಯಿಯ ಪಾದದಾಣೆ ಬೇರೆ ಏನನೂ ಅರಿಯೆನು
ನೀನೆ ನನ್ನ ದೇವನು....
ನಿನ್ನ ಕಂಗಳ ಬಿಸಿಯ ಹನಿಗಳು,ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ,ನೂರು ನೆನಪು ಮೂಡಿವೆ.


ನೀನು ನಕ್ಕರೆ ನಾನು ನಗುವೇ ಅತ್ತರೇ ನಾ ಅಳುವೆನು
ನೀನು ನಕ್ಕರೆ ನಾನು ನಗುವೇ ಅತ್ತರೇ ನಾ ಅಳುವೆನು 
ನಿನ್ನ ಉಸಿರಲಿ ಉಸಿರು ಬೆರೆತಿದೇ  ನಿನ್ನಲೊಂದಾಗಿರುವೆನು
ನಾ ನಿನ್ನ ಕಾಣದೇ ಬದುಕೆನು....
ನಿನ್ನ ಕಂಗಳ ಬಿಸಿಯ ಹನಿಗಳು,ನೂರು ಕಥೆಯಾ ಹೇಳಿವೆ
ನಿನ್ನ ಪ್ರೇಮದ ನುಡಿಯ ಕೇಳಿ,ನೂರು ನೆನಪು ಮೂಡಿವೆ.
ನೂರು ನೆನಪು ಮೂಡಿವೆ.


.

ಸಾಹಸ ಸಿಂಹ: ಮರೆಯದ ನೆನಪನು

ಚಿತ್ರ: ಸಾಹಸ ಸಿಂಹ
ಹಾಡಿರುವರು: ಎಸ್. ಪಿ. ಬಾಲಸುಬ್ರಮಣ್ಯಮ್.
ಸಾಹಿತ್ಯ: ಅರ್. ಎನ್. ಜಯಗೋಪಾಲ್
ನಿರ್ದೇಶನ:ಜೊಸೈಮನ್

ಹ್ಞು..ಹ್ಞು..ಹ್ಞು..ಹ್ಞು....ಲ ಲ ಲ ಲಾ .....ಲಾ ಲಾ ....ಲಾ ಲಾ

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು...
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು...
ನಿನಗಾಗಿ ಅರಸಿ ಬಂದೆ..ಹೇ...ನಿನಗಾಗಿ ಅರಸಿ ಬಂದೆ...
ನೀ ಎಲ್ಲೋ ಅಲ್ಲೇ ನಾನು...

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು...

ಕನಸಲ್ಲೂ ನಿನ್ನ ರೂಪ...ಈ ಮನದಲ್ಲಿ ತರಲು ತಾಪ....ಆ...ಅ...
ಕಣ್ಣಲ್ಲಿ ಮುಚ್ಚಿ ನಿನ್ನಾ... ನಾ ಕರೆದೊಯ್ವ ಆಸೆ ಚಿನ್ನಾ...ಆ..ಅ...
ನಗುವೆಂಬ ಬಲೆಯ ಬೀಸಿ..., ನಾ ನುಡಿಯಲ್ಲಿ ಜೇನಾ ಸೂಸಿ...
ಸೆರೆಹಿಡಿವೆ  ಬಿಡದೆ ನಿನ್ನಾ...ಆ..ಅ...

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು...

ಮಿಂಚಂತೆ ಸುಳಿದು ನೀನು.. ಮರೆಯಾಗಿ ಹೋದರೇನು...ಊ..ಊ...
ಸುಳಿವನ್ನು ತಿಳಿಯಬಲ್ಲಾ ... ಹೊಸ ಮೋಡಿ ಬಲ್ಲೆ ನಾನು...ಊ..ಉ..
ಬಾಳಲ್ಲಿ ಬಿಡಿಸದಂತ...ಆ..ಅ... ಎಂದೆಂದೂ ಮುರಿಯದಂತ...
ಬಂಧನದೇ  ಹಿಡಿವೆ ನಿನ್ನಾ...ಆ..ಅ...

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು...
ನಿನಗಾಗಿ ಅರಸಿ ಬಂದೆ..ಹೇ...ನಿನಗಾಗಿ ಅರಸಿ ಬಂದೆ...
ನೀ ಎಲ್ಲೋ ಅಲ್ಲೇ ನಾನು...
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು...
ಲ ಲ ಲಾ ಲ....ಲಾಲಾ ......ಲಾಲಾ .......
ಲ ಲ ಲಾ ಲ....ಲಾಲಾ ......ಲಾಲಾ .......

ಮಾತು ತಪ್ಪದ ಮಗ: ಎಂಥಾ ಸೌಂದರ್ಯ ನೋಡು

ಚಿತ್ರ: ಮಾತು ತಪ್ಪದ ಮಗ
ಸಂಗೀತ: ಇಳೆಯರಾಜ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಹಾಡಿದವರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಿರ್ದೇಶನ:ಪೇಕೇಟೀ ಶಿವರಾಂ

ಹೇ....ಹೇಹೇ.....ಹಾ ....ಆಹಾಹಾ..... ಹೇಹೇಹೇ......ಹೇಹೇಹೇಎಂಥಾ ಸೌಂದರ್ಯ ನೋಡು,ನಮ್ಮಾ ಕರುನಾಡ ಬೀಡು
ಗಂಧದ ಗೂಡಿದು,ಕಲೆಗಳ ತೌರಿದು
ಕನ್ನಡ ನಾಡಿದು ,ಚಿನ್ನದಾ. ಮಣ್ಣಿದು

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯಿ ನಗೆಯೇ
ಹರಿಯುವ ನೀರು, ಹಸುರಿನ ಪೈರು, ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು, ಮರಗಳ ಸಂಪು, ಎಲ್ಲೂ ಆ ತಾಯಿ ನಗೆಯೇ
ಭಾರತ ಮಾತೆಯಾ,ಈ ತನುಜಾತೆಯ,ಚೆಲುವನು ನೋಡುತ ನಲಿಯುವೆ  ಮೆರೆಯುವೆ ನಾ..

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಎಲ್ಲೇ ಇರಲಿ, ಹೇಗೇ ಇರಲಿ, ನಮ್ಮೂರ ಸವಿನೋಟ ಚಂದಾ,
ಸಾವಿರ ಭಾಷೆಯ, ಕಲಿತರು ಮನಕೇ, ಕನ್ನಡ ನುಡಿಮುತ್ತೆ ಅಂದಾ,
ಪೂರ್ವದ ಪುಣ್ಯವೊ, ಪಡೆದಿಹ ಭಾಗ್ಯವೊ, ಹುಟ್ಟಿದ ಪಾವನ ಕನ್ನಡ ಮಣ್ಣಲಿ ....ನಾ..

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು
ಕನ್ನಡ, ನಾಡಿದು, ಚಿನ್ನದಾ, ಮಣ್ಣಿದು

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಲ ಲ ಲಾ ಲ ಲ ಲಾಲಾ,ಲ ಲ ಲಾ ಲ ಲ ಲಾಲಾ

ನೀ ಬರೆದ ಕಾದಂಬರಿ: ನೀ ಮೀಟಿದ ನೆನಪೆಲ್ಲವು

ಚಿತ್ರ: ನೀ ಬರೆದ ಕಾದಂಬರಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ವಿಜಯಾನಂದ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಿರ್ದೇಶನ:ದ್ವಾರಕೀಶ್


ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನಾ ಬಹು ಜನ್ಮದಾ ಕಥೆ ಎಂದು ಮನ ಹೇಳಿದೆ
ಈ ಬಂಧನಾ ಬಹು ಜನ್ಮದಾ ಕಥೆ ಎಂದು ಮನ ಹೇಳಿದೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ

ಬಾಳಲ್ಲಿ ನೀ ಬರೆದೆ ಕಣ್ಣೀರ ಕಾದಂಬರಿ
ಕಲ್ಲಾದ ಹೃದಯಕ್ಕೆ ಏಕಾದೆ ನೀ ಮಾದರಿ
ಉಸಿರಾಗುವೆ ಎಂದ ಮಾತೆಲ್ಲಿದೆ
ಸಿಹಿ ಪ್ರೇಮವೆ ಇಂದು ವಿಷವಾಗಿದೆ
ಹುಸಿ ಪ್ರೀತಿಯ ನಾ ನಂಬಿದೆ
ಮಳೆ ಬಿಲ್ಲಿಗೆ ಕೈ ಚಾಚಿದೆ
ಒಲವೇ ಚಲುವೇ ನನ್ನ ಮರೆತು ನಗುವೇ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ

ಹಗಲೇನು ಇರುಳೇನು ಮನದಾಸೆ ಮರೆಯಾಗಿದೆ
ಸಾವೇನು ಬದುಕೇನು ಏಕಾಂಗಿ ನಾನಾಗಿರೆ
ನಾ ಬಾಳುವೆ ಕಂದ ನಿನಗಾಗಿಯೆ
ಈ ಜೀವನ ನಿನ್ನ ಸುಖಕಾಗಿಯೆ
ನನ್ನಾಸೆಯ ಹೂವಂತೆ ನೀ
ಇರುಳಲ್ಲಿಯೂ ಬೆಳಕಂತೆ ನೀ
ನಗುತ ಇರು ನೀ ನನ್ನ ಪ್ರೀತಿ ಮಗುವೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ

ಮಧುರ ಸಂಗಮ: ತಾಯಿಯಾ ತಂದೆಯಾ

ಚಿತ್ರ: ಮಧುರ ಸಂಗಮ
ಸಾಹಿತ್ಯ:ಆರ್.ಎನ್.ಜಯಗೋಪಾಲ್
ಸಂಗೀತ:ರಾಜನ್-ನಾಗೇಂದ್ರ
ಗಾಯನ:ಎಸ್.ಜಾನಕಿ
ನಿರ್ದೇಶನ:ವೇಣುಗೋಪಾಲ್


ತಾಯಿಯಾ ತಂದೆಯಾ ಮಮತೆ ವಾತ್ಸಲ್ಯ
ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ.....
ತಾಯಿಯಾ ತಂದೆಯಾ ಮಮತೆ ವಾತ್ಸಲ್ಯ
ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ

ಸೃಷ್ಟಿ ಮಾಡುವ ಬ್ರಹ್ಮದೇವ
ಭಕ್ತ ಬಾಂಧವ ಮಹಾ ವಿಷ್ಣು
ಪ್ರಳಯಕಾಲಕ ಮಹಾದೇವ
ಹೆತ್ತ ಕರುಳನು ಕಾಣದೇ..
ಹೆತ್ತ ಕರುಳನು ಕಾಣದೇ..
ಶಿಲೆಗಳಾದರು ಲೋಕದೇ....

ತಾಯಿಯಾ ತಂದೆಯಾ ಮಮತೆ ವಾತ್ಸಲ್ಯ
ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ.....

ಧನವ ನೀಡುವ ಧರ್ಮದಾತ
ವಿದ್ಯೆ ಕಲಿಸುವ ಪಾಠಶಾಲೆ
ನೀತಿ ಹೇಳುವ ಈ ಸಮಾಜ
ತಂದೆ ಪ್ರೀತಿಯ ತೋರ್ವರೇ......
ತಂದೆ ಪ್ರೀತಿಯ ತೋರ್ವರೇ......
ತಾಯಿ ಮಮತೆಯ ಕೊಡುವರೆ....

ತಾಯಿಯಾ ತಂದೆಯಾ ಮಮತೆ ವಾತ್ಸಲ್ಯ
ಯಾವ ದೇವರೂ ನೀಡಬಲ್ಲ ಜಗದೆ ನಮಗೆಲ್ಲಾ