Friday, October 29, 2010

ಮುಂಜಾನೆಯ ಹುಡುಗಿ

ಮುಂಜಾನೆಯ ಮಂಜಿನ ಹನಿಯಲ್ಲಿ
ಒಂದು ಸುಂದರ ಹುಡುಗಿಯನ್ನು ಕಂಡಾಗ
ಆ ಕ್ಷಣ ಕರಗಿತು ನನ್ನ ಮನ

ಮುದುಡಿದ ತಾವರೆಯಂತೆ,
ಬೆಚ್ಚನೆಯ ಹೊದಿಕೆಯಲ್ಲಿ
ಮುಂಗುರುಳನ್ನು ಪಕ್ಕಕೆ ಸರಿಸುತ್ತಾ
ಇಣುಕಿ ನೋಡುತ್ತಲಿರುವ ನಿನ್ನ ನಯನಗಳು
ನನ್ನನೇ ಹುದುಕುತಿರುವಂತೆ ಬಾಸವಾಯಿತು

ಮುಖದಲ್ಲಿರುವ ಆ ಮುಗ್ದತೆ
ದಾರಿಯಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತ
ಕಾಲ್ಗೆಜ್ಜೆ ನಾದವನ್ನು ಹೊರ ಹೊಮ್ಮಿಸುತ
ಸಾಗುತಿರುವ ನಿನ್ನ ನಡಿಗೆಯನ್ನು ಕಂಡು
ನನ್ನನ್ನೇ ನಾ ಮರೆತೆ

ಹಚ್ಹ ಹಸುರಿನ ಗಿಡ ಮರಗಳ ನಡುವೆ
ರವಿಯು ಬಾನಂಗಳದಲ್ಲಿ ಮೂಡಿ
ತನ್ನ ಕಾಂತಿಯಿಂದ ವಸುಂಧರೆಯನ್ನು ಬೆಳಗಿಸಿದಾಗ
ಆ ಕಾಂತಿಯ ನಡುವೆ ಹುಣ್ಣಿಮೆಯ ಬೆಳದಿಂಗಳಿನಂತೆ ಹೊಳೆಯುತ್ತಿರುವ
ನಿನ್ನ ಮೊಗವನ್ನು ಕಂಡು ನಾ ಮೂಕವಿಸ್ಮಿತನದೆ

Tuesday, October 26, 2010

ಬಯಲುದಾರಿ: ಎಲ್ಲಿರುವೆ, ಮಾನವ ಕಾಡುವ

ಚಿತ್ರ: ಬಯಲುದಾರಿ
ಸಾಹಿತ್ಯ:ಚಿ.ಉದಯಶಂಕರ್
ಸಂಗೀತ:ರಾಜನ್ ನಾಗೇಂದ್ರ
ನಿರ್ದೇಶನ:ದೊರೈ -ಭಗವಾನ್
ಗಾಯಕರು:ಎಸ್.ಪಿ.ಬಾಲಸುಬ್ರಮಣ್ಯಂ 


ಎಲ್ಲಿರುವೆ,ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ, ಮನವ ಕಾಡುವ ರೂಪಸಿಯೇ

ತೇಲುವ ಈ ಮೂಡದ ಮೇಲೆ, ನೀನಿಂತ ಹಾಗಿದೆ
ನಸುನಗುತ, ನಲಿನಲಿದು, ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ, ಎಂದು ಹೇಳಿದಂತಿದೆ
ತನುವೆಲ್ಲ,ಹಗುರಾಗಿ,ತೇಲಾಡುವಂತಿದೆ,ಹಾಡುವಂತಿದೆ

ಚೆಲುವೆ, ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ ಮನವ ಕಾಡುವ ರೂಪಸಿಯೇ

ಕಣ್ಣಲ್ಲೇ ಒಲವಿನ ಗೀತೆ,ನೀನು ಹಾಡಿದಂತಿದೆ
ನಿನ್ನಾಸೆ, ಅತಿಯಾಗಿ,ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೋ, ಭಾಗ್ಯನನ್ನದಾಗಿದೆ
ಚಂದ್ರಿಕೆಯ, ಚೆಲುವಿಂದ, ಬಾಳು ಭವ್ಯವಾಗಿದೆ,ಭವ್ಯವಾಗಿದೆ

ನಲ್ಲೇ,ಎಲ್ಲಿರುವೆ, ಮನವ ಕಾಡುವ ರೂಪಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ,ಬಳ್ಳಿಯಾ,ನಗುವ ಹೂವಾದ ಪ್ರೇಯಸಿ
ನೀನು,ಎಲ್ಲಿರುವೆ ಮನವ ಕಾಡುವ ರೂಪಸಿಯೇ

ನ್ಯಾಯವೇ ದೇವರು: ಆಕಾಶವೇ ಬೀಳಲಿ ಮೇಲೆ

ಚಿತ್ರ: ನ್ಯಾಯವೇ ದೇವರು
ಸಾಹಿತ್ಯ:ಚಿ.ಉದಯಶಂಕರ್
ಸಂಗೀತ:ರಾಜನ್-ನಾಗೇಂದ್ರ
ಗಾಯನ:ಪಿ .ಬಿ ಎಸ್
ನಿರ್ದೇಶನ:ಸಿದ್ದ್ದಲಿಂಗಯ್ಯ


ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು


ಹೆದರಿಕೆಯ ನೋಟವೇಕೆ,ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ,ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನೇಡೆವೆ
ನೀ ಅಡಿಯ ಇಡುವೆಡೆಯಲ್ಲಿ ಒಲವಿನ ಹೂ ಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ  ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯಾ ಚೆಲ್ಲು ಚೆಲುವೆ

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು

ಹಸೆಮಣೆಯೂ ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳಾ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು

ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ


ಕನ್ನಡ ಚಿತ್ರಗೀತೆಗಳು